ಕರ್ನಾಟಕ

karnataka

ETV Bharat / health

ಮಳೆಗಾಲದಲ್ಲಿ ತಯಾರಿಸಿ ಟೊಮೆಟೊ-ಕಾಳುಮೆಣಸಿನ ರಸಂ; ಬಿಸಿ ಅನ್ನದ ಜೊತೆ ತುಂಬಾ ಟೇಸ್ಟಿ! - TOMATO PEPPER RASAM RECIPE - TOMATO PEPPER RASAM RECIPE

ಮನೆಯಲ್ಲಿ ಬಳಸುವ ತರಕಾರಿ ಟೊಮೆಟೊ ಮತ್ತು ಸಾಂಬಾರು ಪದಾರ್ಥಗಳು ಊಟದ ರುಚಿಯನ್ನು ಹೆಚ್ಚಿಸುವುದರೊಂದಿಗೆ ಆರೋಗ್ಯಕ್ಕೂ ಒಳ್ಳೆಯದಾಗಿರುತ್ತವೆ. ಹೀಗೆ ಕಾಳುಮೆಣಸು ಮತ್ತು ಟೊಮೆಟೊ ಬಳಸಿ ಮಾಡುವ ರಸಂ ಕೂಡ ರುಚಿಕಟ್ಟಾಗಿರುತ್ತದೆ. ಅದನ್ನು ತಯಾರಿಸುವ ವಿಧಾನವನ್ನು ತಿಳಿಯೋಣ..

TOMATO PEPPER RASAM RECIPE
ಟೊಮೆಟೊ-ಕಾಳುಮೆಣಸಿನ ರಸಂ (ETV Bharat)

By ETV Bharat Karnataka Team

Published : Jul 29, 2024, 5:42 PM IST

Tomato Pepper Rasam;ಬಿಸಿ ಬಿಸಿ ಅನ್ನಕ್ಕೆ ಟೊಮೆಟೊ ಮತ್ತು ಕಾಳುಮೆಣಸಿನ ರಸಂ ಸೈಡ್ ಡಿಶ್ ಆಗಿದ್ದರೆ.. ಆ ಊಟವನ್ನು ಮಿಸ್ ಮಾಡಬೇಡಿ. ಬಿಸಿ ಬಿಸಿಯಾದ ಅನ್ನಕ್ಕೆ ಇದನ್ನು ಸೇರಿಸಿ ತಿಂದರೆ ತುಂಬಾ ರುಚಿಯಾಗಿರುತ್ತೆ! ಇದು ರುಚಿಯ ಜೊತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮಳೆಗಾಲದಲ್ಲಿ ನೆಗಡಿ, ಕೆಮ್ಮು ಮುಂತಾದ ಸಮಸ್ಯೆಗಳಿಂದ ಬಾಯಲ್ಲಿ ಹುಳಿ, ಕಹಿ ಇರುವವರಿಗೆ ಇದು ಒಳ್ಳೆಯದು. ಅವರು ಇದನ್ನು ಸೂಪ್ ಆಗಿಯೂ ಕುಡಿಯಬಹುದು. ಕೇವಲ ಹತ್ತೇ ನಿಮಿಷದಲ್ಲಿ ಈ ಸೂಪರ್ ರಸಂ ತಯಾರಿಸಬಹುದು. ಈಗ ಈ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ನೋಡೋಣ..

ಬೇಕಾಗುವ ಪದಾರ್ಥಗಳು;

  • ಟೊಮೆಟೊ - 5
  • ಹುಣಸೆಹಣ್ಣು - ಸ್ವಲ್ಪ
  • ಅರಿಶಿನ - ಅರ್ಧ ಟೀ ಸ್ಪೂನ್​
  • ಉಪ್ಪು- ರುಚಿಗೆ ತಕ್ಕಷ್ಟು
  • ಕಡಲೆ - ಒಂದು ಟೇಬಲ್​ ಸ್ಪೂನ್
  • ಉದ್ದಿನಬೇಳೆ - ಅರ್ಧ ಚಮಚ
  • ಜೀರಿಗೆ - ಟೀ ಸ್ಪೂನ್
  • ಕೊತ್ತಂಬರಿ - ಅಗತ್ಯಕ್ಕೆ ತಕ್ಕಷ್ಟು
  • ಕಾಳುಮೆಣಸು - ಒಂದು ಟೀ ಸ್ಪೂನ್​
  • ಒಣ ಮೆಣಸಿನಕಾಯಿ - 2
  • ಮೆಂತ್ಯ - ಅರ್ಧ ಟೀ ಚಮಚ
  • ದಾಲ್ಚಿನ್ನಿ - ಒಂದು ತುಂಡು
  • ಒಣ ಕೊಬ್ಬರಿ ಚೂರುಗಳು - 2

ಟೊಮೆಟೊ ಪೆಪ್ಪರ್ ರಸಂ ಮಾಡುವ ವಿಧಾನ:

  • ಕತ್ತರಿಸಿದ ಟೊಮೆಟೊವನ್ನು ಒಂದು ಪಾತ್ರೆಯಲ್ಲಿ ಹಾಕಿ. ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಮತ್ತು ಸ್ವಲ್ಪ ನೀರು ಸೇರಿಸಿ ಮೃದುವಾಗುವವರೆಗೆ ಬೇಯಿಸಿ.
  • ಹಾಗೆಯೇ ಇನ್ನೊಂದು ಬಾಣಲೆಯಲ್ಲಿ ಕಡಲೆಬೇಳೆ, ಉದ್ದಿನಬೇಳೆ, ಜೀರಿಗೆ, ಕೊತ್ತಂಬರಿ, ಮೆಣಸು, ಒಣ ಮೆಣಸಿನಕಾಯಿ, ಮೆಂತ್ಯ, ದಾಲ್ಚಿನ್ನಿ ಮತ್ತು ಒಣ ಕೊಬ್ಬರಿ ತುಂಡುಗಳನ್ನು ಹಾಕಿ ಹುರಿಯಿರಿ.
  • ಅವು ಬೆಂದ ನಂತರ ತಣ್ಣಗಾಗಲು ಬಿಡಿ. ಮಿಕ್ಸಿ ಜಾರ್ ಗೆ ಎರಡು ಎಸಳು ಬೆಳ್ಳುಳ್ಳಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ.
  • ಈಗ ಬೇಯಿಸಿದ ಟೊಮೆಟೊವನ್ನು ಪೇಸ್ಟ್​ ರೂಪದಲ್ಲಿ ರುಬ್ಬಿಕೊಳ್ಳಿ. ನಂತರ ಅದರಲ್ಲಿ ಒಂದು ಲೀಟರ್ ನೀರನ್ನು ಸುರಿಯಿರಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
  • ನಂತರ ಒಗ್ಗರಣೆಗೆ ಬಾಣಲೆಯಲ್ಲಿ ಎಣ್ಣೆ ಹಾಕಿ ಕಡಲೆಬೇಳೆ, ಉದ್ದಿನಬೇಳೆ, ಸಾಸಿವೆ, ಜೀರಿಗೆ, ಕರಿಮೆಣಸು, ಹಸಿಮೆಣಸಿನಕಾಯಿ, ಕತ್ತರಿಸಿದ ಈರುಳ್ಳಿ ಮತ್ತು ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ.
  • ಈರುಳ್ಳಿ ಕಂದು ಬಣ್ಣಕ್ಕೆ ಬರುವಂತೆ ಹುರಿದ ನಂತರ ಟೊಮೆಟೊವನ್ನು ಸೇರಿಸಿ.
  • ನಂತರ ರುಚಿಗೆ ಬೇಕಾದಷ್ಟು ಉಪ್ಪು ಮತ್ತು ಕಾಳುಮೆಣಸು ಇದೆಯೇ ಎಂಬುದನ್ನು ಪರಿಶೀಲಿಸಿ.
  • ಇದನ್ನು ಸ್ವಲ್ಪ ಸಮಯದವರೆಗೆ ಕಡಿಮೆ ಉರಿಯಲ್ಲಿ ಕುದಿಸಿ. ಅದಾದ ನಂತರ ಒಂದು ಕಪ್ ಕೊತ್ತಂಬರಿ ಸೊಪ್ಪನ್ನು ಹಾಕಿ ಕೆಳಗಿಟ್ಟರೆ ಸಾಕು..

ಇದೀಗ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ರುಚಿಕರವಾಗಿರುವ ಟೊಮೆಟೊ ಮತ್ತು ಕಾಳುಮೆಣಸು ರಸಂ ಸಿದ್ಧವಾಗುತ್ತೆ. ಇದನ್ನು ಬಿಸಿ ಬಿಸಿಯಾದ ಅನ್ನದೊಂದಿಗೆ ಸವಿದರೆ ರುಚಿ ಜೊತೆ ಮಳೆಗಾಲದ ಸಾಮಾನ್ಯ ಕಾಯಿಲೆಗಳನ್ನು ತಡೆಯಲು ಸಹಾಯವಾಗುತ್ತದೆ.

ಇದನ್ನೂ ಓದಿ; ವಿಶ್ವ 'ಒಆರ್​ಎಸ್'​ ದಿನ: ನಿರ್ಜಲೀಕರಣ, ಅತಿಸಾರದ ವೇಳೆ ನೆನಪಾಗುವ ಇದರ ಬಗ್ಗೆ ಸಂಪೂರ್ಣ ಮಾಹಿತಿ - World Oral Rehydration Solution Day

ABOUT THE AUTHOR

...view details