ಹೈದರಾಬಾದ್: ಇಂದಿನ ಜೀವನಶೈಲಿಯಲ್ಲಿ ಇಬ್ಬರಲ್ಲಿ ಓರ್ವರು ಮಧುಮೇಹದಿಂದ ಬಳಲುತ್ತಿರುತ್ತಾರೆ. ಈ ಮಧುಮೇಹ ಸಮಸ್ಯೆಗೆ ಸೂಕ್ತ ನಿರ್ವಹಣೆ ಅತ್ಯಗತ್ಯವಾಗಿದೆ. ಮಧುಮೇಹ ನಿರ್ವಹಣೆಗೆ ವೈದ್ಯರ ಬಳಿ ಹೋಗಿ ಉತ್ತಮ ಔಷಧ ತೆಗೆದು ಕೊಂಡರೂ ಅನೇಕ ಬಾರಿ ಸಕ್ಕರೆ ಪ್ರಮಾಣ ಕಡಿಮೆಯಾಗುವುದಿಲ್ಲ. ಈ ರೀತಿ ಸಮಸ್ಯೆ ಏನಾದರೂ ನೀವು ಅನುಭವಿಸುತ್ತಿದ್ದರೆ, ಅದಕ್ಕೆ ಈ ಜ್ಯೂಸ್ಗಳು ಪರಿಹಾರವಾಗಬಲ್ಲದು.
ನೆಲ್ಲಿಕಾಯಿ: ನೆಲ್ಲಿ ಕಾಯಿ ಮಧುಮೇಹಿಗಳಿಗೆ ಅಮೃತದಂತೆ ಕೆಲಸ ಮಾಡುತ್ತದೆ ಎಂದರೂ ತಪ್ಪಲ್ಲ. ತಜ್ಞರು ಹೇಳುವಂತೆ ನಿಯಮಿತವಾಗಿ ನೆಲ್ಲಿಕಾಯಿ ರಸ ಸೇವಿಸುವುದರಿಂದ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡಬಹುದಾಗಿದೆ. ಈ ನೆಲ್ಲಿ ಕಾಯಿ ಜ್ಯೂಸ್ ಮಾಡಲು 2 ನೆಲ್ಲಿಕಾಯಿ ಅನ್ನು ಚೆನ್ನಾಗಿ ಪೇಸ್ ಮಾಡಿ. ಬಳಿಕ ಒಂದು ಲೋಟ ನೀರಿಗೆ ಇದನ್ನು ಸೇರಿಸಿ. ಈ ಜ್ಯೂಸ್ ಅನ್ನು ನಿಯಮಿತವಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.
ಚಕ್ಕೆ: ಚಕ್ಕೆ ಪುಡಿ ಕೂಡ ಮಧುಮೇಹ ನಿಯಂತ್ರಣ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಪ್ರತಿ ನಿತ್ಯ ಇದನ್ನು ಸೇವಿಸುವುದರಿಂದ ಇದು ಆರೋಗ್ಯ ಪ್ರಯೋಜನ ನೀಡುತ್ತದೆ. ಒಂದು ನೀರಿನ ಲೋಟಕ್ಕೆ ಮೂರು ಅಥವಾ ನಾಲ್ಕು ಸಣ್ಣ ಚಕ್ಕೆ ತುಂಡುಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಬಳಿಕ ತಣ್ಣಗೆ ಮಾಡಿ ಕುಡಿಯಿರಿ. ಪ್ರತಿನಿತ್ಯ ಊಟವಾದ ಬಳಿಕ ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಗ್ಲುಕೋಸ್ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.