Sweat in Sleep Causes:ಬಿಸಿ ವಾತಾವರಣ, ಮನೆಯಲ್ಲಿ ಸರಿಯಾದ ಗಾಳಿಯ ಕೊರತೆ, ದೇಹದಲ್ಲಿ ಹೆಚ್ಚಿನ ಶಾಖದ ಹಿನ್ನೆಲೆಯಲ್ಲಿ ಬೆವರುವುದು ಸಾಮಾನ್ಯವಾಗಿದೆ. ಆದರೆ, ಕೆಲವರಿಗೆ ವಾತಾವರಣ ತಂಪಾಗಿರುವಾಗಲೂ ನಿದ್ದೆಯ ಸಮಯದಲ್ಲಿ ವಿಪರೀತ ಬೆವರುತ್ತಾರೆ. ಸಣ್ಣ ಸಮಸ್ಯೆ ಎಂಬ ಕಾರಣಕ್ಕೆ ಅನೇಕರು ನಿರ್ಲಕ್ಷಿಸುತ್ತಾರೆ. ಆದರೆ, ಇದು ವಿವಿಧ ರೋಗಗಳ ಸಂಕೇತ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ. ಸಮಸ್ಯೆಯು ಗಂಭೀರವಾಗುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಈ ಹಿನ್ನೆಲೆಯಲ್ಲಿ ನಾವೇಕೆ ರಾತ್ರಿ ಬೆವರುತ್ತೇವೆ? ಇದಕ್ಕಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು ಎಂಬುದನ್ನು ನೋಡೋಣ.
ಹೈಪರ್ ಥೈರಾಯ್ಡಿಸಮ್:ಥೈರಾಯ್ಡ್ ಗ್ರಂಥಿಯು ಚಯಾಪಚಯ ಮತ್ತು ಇತರ ದೈಹಿಕ ಕಾರ್ಯಗಳನ್ನು ನಿರ್ವಹಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಆದರೆ, ಇದು ತುಂಬಾ ಸಕ್ರಿಯವಾದಾಗ, ಹೈಪರ್ ಥೈರಾಯ್ಡಿಸಮ್ ಪರಿಣಾಮ ಬೀರುತ್ತದೆ. ಇದರಿಂದಾಗಿ ದೇಹವು ಶಾಖ ಮತ್ತು ಬೆವರುವಿಕೆ ಸಹಿಸುವುದಿಲ್ಲ ಎಂದು ತಜ್ಞರು ತಿಳಿಸುತ್ತಾರೆ. 2017ರಲ್ಲಿ ಯುರೋಪಿಯನ್ ಥೈರಾಯ್ಡ್ ಜರ್ನಲ್‌ನಲ್ಲಿ (European Thyroid Journal) ಪ್ರಕಟವಾದ "ಹೈಪರ್ ಥೈರಾಯ್ಡಿಸಮ್ ಹೊಂದಿರುವ ರೋಗಿಗಳಲ್ಲಿ ಥೈರಾಯ್ಡ್-ಸಂಬಂಧಿತ ರೋಗಲಕ್ಷಣಗಳು" (Thyroid-Associated Symptoms in Patients with Hyperthyroidism) ಎಂಬ ಶೀರ್ಷಿಕೆಯ ಅಧ್ಯಯನವು ತೋರಿಸಿದೆ. (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ಒತ್ತಡ, ಆತಂಕ:ಕೆಲವೊಮ್ಮೆ ನಾವು ಇದ್ದಕ್ಕಿದ್ದಂತೆ ಒತ್ತಡ ಮತ್ತು ಆತಂಕಕ್ಕೆ ಒಳಗಾಗುತ್ತೇವೆ. ಆದರೆ, ಅವುಗಳ ಪರಿಣಾಮವು ಮೆದುಳು ಮತ್ತು ದೇಹದ ಮೇಲೆ ಬೀರುತ್ತದೆ. ನಿದ್ರೆಯ ಸಮಯದಲ್ಲಿ ಬೆವರುವಿಕೆಗೆ ಕಾರಣವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಮಾನಸಿಕ ಅಸ್ವಸ್ಥತೆ: ಕೆಲವು ರೀತಿಯ ಮಾನಸಿಕ ಅಸ್ವಸ್ಥತೆಗಳು ನಿದ್ರೆಯ ಬೆವರುವಿಕೆಗೆ ಕಾರಣವಾಗುತ್ತವೆ. ಈ ರೀತಿ ಅಸ್ವಸ್ಥತೆ ಸಂಭವಿಸಿದಾಗ, ಮನಸ್ಸಿನಲ್ಲಿ ಒಂದು ರೀತಿಯ ಒತ್ತಡ, ಆತಂಕ ಹಾಗೂ ನಿದ್ರೆಯ ಸಮಯದಲ್ಲಿ ಬೆವರು ಉಂಟಾಗುತ್ತದೆ.
ಋತುಬಂಧ: 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ರಾತ್ರಿ ಬೆವರುವಿಕೆ? ಆದಾಗ್ಯೂ, ಇವೆಲ್ಲವೂ ಋತುಬಂಧ ಸಮೀಪಿಸುತ್ತಿರುವ ಸಂಕೇತವೆಂದು ಪರಿಗಣಿಸಬಹುದು ಎಂದು ತಜ್ಞರು ಮಾಹಿತಿ ನೀಡುತ್ತಾರೆ.
ಹೆಚ್ಐವಿ:ಟಿಬಿ, ಹೆಚ್ಐವಿ, ಲ್ಯುಕೇಮಿಯಾದಂತಹ ಸಮಸ್ಯೆಗಳಿರುವವರಲ್ಲಿಯೂ ದೇಹದ ಉಷ್ಣತೆಯು ಹಠಾತ್ ಏರಿಕೆಯಾಗುತ್ತದೆ. ಇದರಿಂದ ರಾತ್ರಿ ಬೆವರುವಿಕೆಯೂ ಉಂಟಾಗುತ್ತದೆ ಎನ್ನುತ್ತಾರೆ ವೈದ್ಯರು.