ETV Bharat / business

ಐಆರ್​ಸಿಟಿಸಿ ವೆಬ್​ಸೈಟ್, ಆ್ಯಪ್ ಡೌನ್: ತತ್ಕಾಲ್ ಟಿಕೆಟ್​ ಬುಕ್ ಮಾಡಲಾಗದೆ ಗ್ರಾಹಕರ ಪರದಾಟ - IRCTC WEBSITE

ಗುರುವಾರ ಬೆಳಗ್ಗೆ ಐಆರ್​ಸಿಟಿಸಿ ವೆಬ್​ಸೈಟ್ ಡೌನ್ ಆಗಿದ್ದರಿಂದ ಪ್ರಯಾಣಿಕರು ಪರದಾಡಿದರು.

ಐಆರ್​ಸಿಟಿಸಿ ವೆಬ್​ಸೈಟ್, ಆ್ಯಪ್ ಡೌನ್
ಐಆರ್​ಸಿಟಿಸಿ ವೆಬ್​ಸೈಟ್, ಆ್ಯಪ್ ಡೌನ್ (IANS)
author img

By ETV Bharat Karnataka Team

Published : 14 hours ago

ನವದೆಹಲಿ: ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್​ಸಿಟಿಸಿ)ದ ವೆಬ್ ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಗುರುವಾರ ಸ್ಥಗಿತಗೊಂಡಿದ್ದು, ರೈಲು ಟಿಕೆಟ್ ಖರೀದಿಸಲು ಗ್ರಾಹಕರು ಪರದಾಡುವಂತಾಗಿದೆ. ಐಆರ್​ಸಿಟಿಸಿಯ ಮೊಬೈಲ್ ಅಪ್ಲಿಕೇಶನ್ ಈ ತಿಂಗಳಲ್ಲಿ ಎರಡನೇ ಬಾರಿಗೆ ಡೌನ್ ಆಗಿದೆ.

ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ ಸೈಟ್ ಡೌನ್ ಆಗಿದ್ದರಿಂದ ತತ್ಕಾಲ್ ಟಿಕೆಟ್​ಗಳ ರಿಸರ್ವೇಶನ್​ಗೆ ಅಡ್ಡಿಯುಂಟಾಗಿತ್ತು. ಗ್ರಾಹಕರು ಟಿಕೆಟ್ ಬುಕ್ ಮಾಡಲು ವೆಬ್ ಸೈಟ್​ಗೆ ಲಾಗ್ ಇನ್ ಮಾಡಿದ ತಕ್ಷಣ, "ಮೇಂಟೆನನ್ಸ್​ ನಡೆಯುತ್ತಿರುವುದರಿಂದ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಾಗುತ್ತಿಲ್ಲ" ಎಂಬ ಸಂದೇಶ ಕಾಣಿಸುತ್ತಿದೆ.

ಐಆರ್​ಸಿಟಿಸಿ ಅಪ್ಲಿಕೇಶನ್ ಮತ್ತು ವೆಬ್​ಸೈಟ್ ಡೌನ್ ಆಗಿರುವ ಬಗ್ಗೆ ಹಲವಾರು ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. "ಬುಕಿಂಗ್ ಆರಂಭವಾದ ಕ್ಷಣದಲ್ಲೇ ಸರ್ವರ್​ಗಳು ಕ್ರ್ಯಾಶ್ ಆಗುತ್ತವೆ. ಇದು ನಾನು ನೋಡಿದ ಅತ್ಯಂತ ಕೆಟ್ಟ ವೆಬ್ ಸೈಟ್ ಆಗಿದೆ. ಪದೇ ಪದೆ ದೂರು ನೀಡಿದರೂ ಇದನ್ನು ಏಕೆ ಸರಿಪಡಿಸುತ್ತಿಲ್ಲ?" ಎಂದು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಬಳಕೆದಾರರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೆಬ್​ಸೈಟ್​ನ ಸ್ಕ್ರೀನ್ ಶಾಟ್​ ಅನ್ನು ಸಹ ಅವರು ಪೋಸ್ಟ್ ಮಾಡಿದ್ದಾರೆ.

"ಬೆಳಿಗ್ಗೆ 10:11 ಗಂಟೆ ಆಗಿದೆ. ಇನ್ನೂ ಐಆರ್​ಸಿಟಿಸಿ ಬುಕಿಂಗ್ ಓಪನ್ ಆಗುತ್ತಿಲ್ಲ. ಐಆರ್​ಸಿಟಿಸಿಯ ಬಗ್ಗೆ ತನಿಖೆ ನಡೆಯಬೇಕಿದೆ. ಇಲ್ಲೇನೋ ಹಗರಣ ನಡೆಯುತ್ತಿದೆ. ಬುಕಿಂಗ್ ಓಪನ್ ಆಗುವ ಹೊತ್ತಿಗೆ ಎಲ್ಲಾ ಟಿಕೆಟ್ ಮುಗಿದು ಹೋಗಿರುತ್ತವೆ" ಎಂದು ಮತ್ತೊಬ್ಬ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.

ಐಆರ್​ಸಿಟಿಸಿ ವೆಬ್ ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಸುಮಾರು ಒಂದೂವರೆ ಗಂಟೆಗಳ ಕಾಲ ಸ್ಥಗಿತಗೊಂಡ ನಂತರ ಈಗ ಮತ್ತೆ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಸೇವೆಗಳನ್ನು ಸಂಪೂರ್ಣವಾಗಿ ಪುನಃಸ್ಥಾಪಿಸಲಾಗಿದೆ.

ಇದನ್ನೂ ಓದಿ : ಬ್ಯೂಟಿಫುಲ್ ಕೋಳಿಗಳ ಸಾಕಾಣಿಕೆ ಗೊತ್ತೇ? ಇವುಗಳ ಬೆಲೆ ಕೇಳಿದರೆ ದಂಗಾಗುವಿರಿ! - CHICKENS WORTH LAKHS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.