ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಿಂದ ರಾಮೇಶ್ವರಂ ಸಂಚರಿಸುವ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲುಗಳ ಅವಧಿಯನ್ನು ವಿಸ್ತರಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ರೈಲು ಸಂಖ್ಯೆ 07355: ಎಸ್ಎಸ್ಎಸ್ ಹುಬ್ಬಳ್ಳಿ - ರಾಮೇಶ್ವರಂ ಮಧ್ಯದ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲು ಜನವರಿ 4 ರಿಂದ ಜೂನ್ 28, 2025 ರವರೆಗೆ ತನ್ನ ಸೇವೆ ಮುಂದುವರಿಸಲಿದೆ. ಈ ಮೊದಲು ಡಿಸೆಂಬರ್ 28, 2024ರ ವರೆಗೆ ಈ ರೈಲು ಓಡಿಸಲು ಸೂಚಿಸಲಾಗಿತ್ತು. ಇದೀಗ ಇದನ್ನು ವಿಸ್ತರಿಸಲಾಗಿದೆ.
ರೈಲು ಸಂಖ್ಯೆ 07356: ರಾಮೇಶ್ವರಂನಿಂದ ಎಸ್ಎಸ್ಎಸ್ ಹುಬ್ಬಳ್ಳಿಗೆ ಆಗಮಿಸುವ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲು ಜನವರಿ 5 ರಿಂದ ಜೂನ್ 29, 2025ರ ವರೆಗೆ ತನ್ನ ಸೇವೆ ಮುಂದುವರಿಸಲಿದೆ. ಈ ಮೊದಲು ಡಿಸೆಂಬರ್ 29, 2024ರ ವರೆಗೆ ಓಡಿಸಲು ಸೂಚಿಸಲಾಗಿತ್ತು.
ಮಧುರೈ ವಿಭಾಗದ ವ್ಯಾಪ್ತಿಯಲ್ಲಿ ಬರುವ ಶಿವಗಂಗಾ ನಿಲ್ದಾಣದಲ್ಲಿ ಈ ರೈಲುಗಳಿಗೆ ಹೆಚ್ಚುವರಿ ನಿಲುಗಡೆಯನ್ನು ಒದಗಿಸಲಾಗಿದೆ.
ಜನವರಿ 4, 2025 ರಿಂದ ರೈಲು ಸಂಖ್ಯೆ 07355 ಎಸ್ಎಸ್ಎಸ್ ಹುಬ್ಬಳ್ಳಿ-ರಾಮೇಶ್ವರಂ ಮತ್ತು ಜನವರಿ 5, 2025 ರಿಂದ ರೈಲು ಸಂಖ್ಯೆ 07356 ರಾಮೇಶ್ವರಂ- ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲುಗಳ ಪರಿಷ್ಕೃತ ಸಮಯ ಜಾರಿಗೆ ಬರಲಿದೆ.
ವಿವರವಾದ ಮಾಹಿತಿಗಾಗಿ ಪ್ರಯಾಣಿಕರು ಇಲ್ಲಿನ ಲಿಂಕ್ ಕ್ಲಿಕ್ ಮಾಡಬಹುದಾಗಿದೆ. (https://swr.indianrailways.gov.in/view_detail.jsp?lang=0&dcd=8152&id=0,4,268) ಅಥವಾ ಭಾರತೀಯ ರೈಲ್ವೆ ವೆಬ್ಸೈಟ್ (www.enquiry.indianrail.gov.in) ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು
ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕುಂಭಮೇಳ: ಪ್ರಯಾಗ್ ರಾಜ್ಗೆ ಹುಬ್ಬಳ್ಳಿ, ಮೈಸೂರಿನಿಂದ ವಿಶೇಷ ರೈಲು - ಇಲ್ಲಿದೆ ವೇಳಾಪಟ್ಟಿ