ಕರ್ನಾಟಕ

karnataka

ETV Bharat / health

ಏಕಾಏಕಿ ತೂಕನಷ್ಟವು ಕ್ಯಾನ್ಸರ್​​​ ಅಪಾಯದ ಲಕ್ಷಣ; ಅಧ್ಯಯನ - ಉತ್ತಮ ಆರೋಗ್ಯಕರ ಲಕ್ಷಣ

ಏಕಾಏಕಿ ತೂಕನಷ್ಟಕ್ಕೆ ಒಳಗಾಗುವುದು ಉತ್ತಮ ಆರೋಗ್ಯಕರ ಲಕ್ಷಣವಲ್ಲ. ಇದು ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

Sudden weight loss associated with risk of a cancer
Sudden weight loss associated with risk of a cancer

By ETV Bharat Karnataka Team

Published : Jan 27, 2024, 10:40 AM IST

ಲಂಡನ್​: ದಿಢೀರ್​​​ ಮತ್ತು ಉದ್ದೇಶಪೂರ್ವಕವಲ್ಲದ ತೂಕ ನಷ್ಟವು ಭವಿಷ್ಯದಲ್ಲಿನ ಕ್ಯಾನ್ಸರ್​ ಉಂಟಾಗುವ ಲಕ್ಷಣ ಎಂದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಸ್ವೀಡನ್​ನ ಕರೋಲಿನ್ಸ್ಕಾ ಸಂಸ್ಥೆ ಸಂಶೋಧಕರು ಈ ಅಧ್ಯಯನ ನಡೆಸಿದ್ದು, ದಿಢೀರ್​​ ತೂಕ ನಷ್ಟವು ಜಠರ, ಕರುಳಿನ ಕ್ಯಾನ್ಸರ್​, ಹೆಮಟೊಲಾಜಿಕಲ್ ಕ್ಯಾನ್ಸರ್, ಕೊಲೊರೆಕ್ಟಲ್ ಕ್ಯಾನ್ಸರ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಿಸುವ ಅಪಾಯವನ್ನು ಹೊಂದಿದೆ. ಈ ನಡುವೆ, ಸ್ತನ ಕ್ಯಾನ್ಸರ್​ ಮತ್ತು ಮೂತ್ರನಾಳದ ಕ್ಯಾನ್ಸರ್​, ಬ್ರೈನ್​ ಕ್ಯಾನ್ಸರ್​ ಅಥವಾ ಮೆಲನೊಮಾ ಕ್ಯಾನ್ಸರ್​ ರೋಗಿಗಳಲ್ಲಿ ಈ ದಿಢೀರ್​ ತೂಕನಷ್ಟ ಕಂಡುಬಂದಿಲ್ಲ.

ತಂಡವೂ ರೋಗಿಗಳು ದಿಢೀರ್​ ಅಥವಾ ಯಾವುದೇ ಸಮಸ್ಯೆಯಿಲ್ಲದೆ, ಉದ್ದೇಶ ಪೂರ್ವಕವಲ್ಲದೆ, ತೂಕ ನಷ್ಟ ಹೊಂದಿದರೆ ಹೆಚ್ಚಿನ ಗಮನ ಹರಿಸುವಂತೆ ಒತ್ತಾಯಿಸಿದೆ.

ಡಯಟ್​​ನಲ್ಲಿ ಮತ್ತು ವ್ಯಾಯಾಮದ ದಿನಚರಿಯಲ್ಲಿ ಯಾವುದೇ ಬದಲಾವಣೆ ಮಾಡದೇ ದಿಢೀರ್​ ಎಂದು ತೂಕನಷ್ಟವಾದಲ್ಲಿ ವೈದ್ಯರ ಭೇಟಿ ಅವಶ್ಯವಾಗಿದೆ. ಈ ಸಂಬಂಧ ಅವರು ಕಾರಣ ಪತ್ತೆ ಮಾಡಬಹುದು. ಏಕಾಏಕಿ ತೂಕ ನಷ್ಟವಾಗುವುದರ ಹಿಂದೆ ಅನೇಕ ಕಾರಣಗಳು ಇರುತ್ತವೆ. ಈ ಸಂಬಂಧ ಹೆಚ್ಚಿನ ತನಿಖೆ ಮಾಡಬೇಕಾಗುತ್ತದೆ ಎಂದು ಕರೋಲಿನ್ಸ್ಕಾ ಸಂಸ್ಥೆಯ ಸಂಶೋಧಕ ಕ್ವಿಯೋಲಿ ವಾಂಗ್​ ತಿಳಿಸಿದ್ದಾರೆ.

ಈ ಹೊಸ ಅಧ್ಯಯನವನ್ನು ಜಾಮಾದಲ್ಲಿ ಪ್ರಕಟಿಸಲಾಗಿದೆ. 40 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 474 ಮಂದಿಯನ್ನು ಅಧ್ಯಯನದಲ್ಲಿ ಭಾಗಿಯಾಗಿಸಲಾಗಿದೆ. ಇವರನ್ನು 30 ವರ್ಷಗಳ ಕಾಲ ಗಮನಿಸಲಾಗಿದೆ. ಪ್ರತಿ ಎರಡು ವರ್ಷಗಳಿಗೆ ಒಮ್ಮೆ ಅವರ ತೂಕ, ವ್ಯಾಯಾಮದ ವಿವರವನ್ನು ಪಡೆದರೆ, ಆಹಾರ ಪದ್ಧತಿ ಕುರಿತು ನಾಲ್ಕು ವರ್ಷಕ್ಕೊಮ್ಮೆ ದತ್ತಾಂಶ ಪಡೆಯಲಾಗಿದೆ.

ಸಂಶೋಧಕರು ಅಧ್ಯಯನದಲ್ಲಿ ಭಾಗವಹಿಸುವವರ ಆಹಾರ ಮತ್ತು ವ್ಯಾಯಾಮದಲ್ಲಿನ ಬದಲಾವಣೆಗಳನ್ನು ಮೌಲ್ಯಮಾಪನ ಮಾಡುವ ಮೂಲಕ ತೂಕ ನಷ್ಟ ಉತ್ತೇಜಿಸುವ ನಡವಳಿಕೆಗಳನ್ನು ನಿರ್ಣಯಿಸಿದ್ದಾರೆ. ಅಲ್ಲದೇ ಈ ವೇಳೆ ಹೆಚ್ಚಿನ ದೈಹಿಕ ಚಟುವಟಿಕೆ ಮತ್ತು ಡಯಟ್​ ಸುಧಾರಣೆಯಿಂದ ತೂಕ ನಷ್ಟವಾದವರು ಅಧಿಕ, ಕೇವಲ ಒಂದು ಅಂಶ ಬದಲಾವಣೆ ಮಾಡಿದರೆ, ಮಧ್ಯಮ ಎಂದು ಮತ್ತು ಡಯಟ್​ ಹಾಗೂ ಚಟುವಟಿಕೆಯಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೆ ಕಡಿಮೆ ಎಂದು ವರ್ಗೀಕರಿಸಲಾಗಿದೆ.

ನಂತರದ ಗುಂಪಿನಲ್ಲಿ ಎರಡು ವರ್ಷದಲ್ಲಿ ಯಾವುದೇ ತೂಕ ನಷ್ಟಕ್ಕೆ ಒಳಗಾಗದವರಿಗೆ ಹೋಲಿಕೆ ಮಾಡಿದಾಗ ಶೇ 10ಕ್ಕಿಂತ ಹೆಚ್ಚಿನ ತೂಕ ನಷ್ಟಕ್ಕೆ ಒಳಗಾದವರಲ್ಲಿ ಕ್ಯಾನ್ಸರ್​ ಅಪಾಯ ದುಪ್ಪಟ್ಟು ಇದೆ.

ಅಧ್ಯಯನವು ಇತ್ತೀಚಿಗೆ ತೂಕಷ್ಟಕ್ಕೆ ಒಳಗಾದವರನ್ನು ಅಧ್ಯಯನದಲ್ಲಿ ಬಳಸಿಕೊಂಡಿದೆ. ವಿಶೇಷವಾಗಿ ಯಾವುದೇ ಉದ್ದೇಶವಿಲ್ಲದೇ ತೂಕನಷ್ಟಕ್ಕೆ ಒಳಗಾದವರು ವೈದ್ಯರ ತಪಾಸಣೆಗೆ ಒಳಗಾದಾಗ ಕ್ಯಾನ್ಸರ್​ ಸಾಧ್ಯತೆ ಕಂಡು ಬಂದಿದೆ. (ಐಎಎನ್​ಎಸ್​)

ಇದನ್ನೂ ಓದಿ:ನಿಂತುಕೊಂಡೇ ಊಟ ಮಾಡೋದು ರೂಢಿನಾ? ಆ ಅಪಾಯಕಾರಿ ಅಭ್ಯಾಸ ಬದಲಿಸಿಕೊಳ್ಳಿ

ABOUT THE AUTHOR

...view details