ಲಂಡನ್: ಸಾಮಾಜಿಕ ಮಾಧ್ಯಮ ಬಳಕೆ ಅಪಾಯದೊಂದಿಗೆ ಸಂಬಂಧ ಹೊಂದಿದೆ. ಅದರಲ್ಲೂ ವಿಶೇಷವಾಗಿ, ಭೌತಿಕ ಮನಸ್ಥಿತಿ ಹೊಂದಿರುವ ಜನರಲ್ಲಿ ಸ್ಕ್ರಾಲ್ ಮಾಡುತ್ತಿದ್ದಂತೆ ಬೇಸರ ಮತ್ತು ಒತ್ತಡಗಳು ಹೆಚ್ಚಾಗುತ್ತವೆ ಎಂದು ಸಂಶೋಧನೆ ತಿಳಿಸಿದೆ. ಈ ಅಧ್ಯಯನ ವರದಿಯನ್ನು ಟೆಲಿಮ್ಯಾಟಿಕ್ಸ್ ಆ್ಯಂಡ್ ಇನ್ಫಾರ್ಮೆಟಿಕ್ಸ್ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.
ಜರ್ಮನಿಯ ರುಹ್ರ್ ವಿಶ್ವವಿದ್ಯಾನಿಲಯ ಬೋಚುಮ್‌ನಲ್ಲಿ ಸೈಕಾಲಜಿ ವಿಭಾಗದ ಸಿಬ್ಬಂದಿ ಡಾ.ಫಿಲಿಪ್ ಓಜಿಮೆಕ್ ನೇತೃತ್ವದಲ್ಲಿ ಅಧ್ಯಯನ ನಡೆಸಲಾಗಿದೆ. ಇದಕ್ಕಾಗಿ ಅವರು 1,230 ಮಂದಿಯನ್ನು ನೇಮಕ ಮಾಡಿದ್ದರು. ಭಾಗಿದಾರರು ವಾರಕ್ಕೊಮ್ಮೆಯಾದರೂ ಕನಿಷ್ಠ ಒಂದು ಸಾಮಾಜಿಕ ಮಾಧ್ಯಮ ಚಾನಲ್ ಬಳಸಬೇಕು. ಭಾಗಿದಾರರು ದಿನಕ್ಕೆ ಎರಡು ಗಂಟೆಗಳ ಕಾಲ ಸಾಮಾಜಿಕ ಮಾಧ್ಯಮಗಳಲ್ಲಿ ಕಾಲ ಕಳೆಯುವುದಾಗಿ ತಿಳಿಸಿದ್ದಾರೆ.
ಅಭ್ಯರ್ಥಿಗಳು ಎಷ್ಟು ಪ್ರಮಾಣದ ಭೌತಿಕ ಮನೋಭಾವ ಹೊಂದಿದ್ದಾರೆ. ಅದನ್ನು ಹೆಚ್ಚು ಸಕ್ರಿಯವಾಗಿ ಅಥವಾ ನಿಷ್ಕ್ರಿಯವಾಗಿ ಬಳಸುತ್ತಾರೆ ಎಂದು ತಿಳಿಯಲು ಆರು ವಿಭಿನ್ನ ಪ್ರಶ್ನಾವಳಿ ತಂತ್ರ ಬಳಸಲಾಗಿದೆ. ಈ ವೇಳೆ ಅವರ ಸಾಮಾಜಿಕ ಮಾಧ್ಯಮದ ಚಟ ಮತ್ತು ಹೊಂದಿರುವ ತೃಪ್ತಿ ಕುರಿತು ತಿಳಿಯಲಾಗಿದೆ.