ETV Bharat / state

ಮೈಕ್ರೋ ಫೈನಾನ್ಸ್ ಕಿರುಕುಳ ಸಂಬಂಧ ಕಠಿಣ ಕಾನೂನು ತರುತ್ತೇವೆ: ಸಚಿವ ಜಿ. ಪರಮೇಶ್ವರ್ - G PARAMESHWARA

ಮೈಕ್ರೋ ಫೈನಾನ್ಸ್​ ಕಿರುಕುಳ ಆರೋಪಕ್ಕೆ ಸಂಬಂಧಿಸಿ ಕಠಿಣ ಕಾನೂನು ತರುವ ಕೆಲಸ ಮಾಡುತ್ತೇವೆ. ಕಿರುಕುಳ ಆಗುತ್ತಿರುವುದನ್ನು ನಿಲ್ಲಿಸಲಾಗುತ್ತದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.

REGARDING MICROFINANCE TORTURE  ಮೈಕ್ರೋ ಫೈನಾನ್ಸ್  BENGALURU  MINISTER G PARAMESHWARA
ಮೈಕ್ರೋ ಫೈನಾನ್ಸ್ ಕಿರುಕುಳ ಸಂಬಂಧ ಕಠಿಣ ಕಾನೂನು ತರುವ ಕೆಲಸ ಮಾಡುತ್ತೇವೆ ಎಂದ ಸಚಿವ ಜಿ. ಪರಮೇಶ್ವರ್ (IANS)
author img

By ETV Bharat Karnataka Team

Published : Jan 24, 2025, 1:08 PM IST

ಬೆಂಗಳೂರು: "ಮೈಕ್ರೋ ಫೈನಾನ್ಸ್​ ಕಿರುಕುಳ ಸಂಬಂಧ ಕಠಿಣ ಕಾನೂನು ತರುವ ಕೆಲಸ ಮಾಡುತ್ತೇವೆ" ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, "ಈಗಾಗಲೇ ಸಾಕಷ್ಟು ದೂರುಗಳು ಬಂದಿವೆ. ಕಾನೂನು ಇಬ್ಬರಿಗೂ ಇದೆ. ಬ್ಯಾಂಕ್​ ನಿಯಮ ಪ್ರಕಾರ ರಿಕವರಿಗೆ ಕಾನೂನು ಇದೆ. ಅವರ ರಕ್ಷಣೆ ಮಾಡೋಕೆ ಕಾನೂನು ಇದೆ. ಕಾನೂನು ಕಠಿಣವಾಗಿಲ್ಲ ಎಂಬ ವರದಿ ಇದೆ. ಕಠಿಣ ಕಾನೂನು ತರುವ ಕೆಲಸ ಮಾಡುತ್ತೇವೆ. ಕಿರುಕುಳ ಆಗುತ್ತಿರುವುದನ್ನು ನಿಲ್ಲಿಸಲಾಗುತ್ತದೆ" ಎಂದು ಭರಸವೆ ನೀಡಿದರು.

ಸಚಿವ ಡಾ. ಜಿ. ಪರಮೇಶ್ವರ್ (ETV Bharat)

"ಸಾಲ ವಾಪಸ್​ ಕಟ್ಟದೆ ಹೋದರೆ ಹೀಗೆ ಆಗುತ್ತದೆ. ಬ್ಯಾಂಕ್​ ಸಾಲ ಪಡೆದಾಗ ಹತ್ತಾರು ಕಡೆ ಸಹಿ ಹಾಕಲಾಗುತ್ತದೆ. ಯಾಕೆ ಸಹಿ ಮಾಡುತ್ತೇವೆ ಅಂತ ಗ್ರಾಹಕರಿಗೆ ಗೊತ್ತಾಗಲ್ಲ. ಅದು ಕಮಿಟ್ಮೆಂಟ್​ ಆಗಿರುತ್ತದೆ. ಅದರ ಮೇಲೆ ಮನೆ ರೇಡ್​, ಸೀಜ್​ ಮಾಡುತ್ತಾರೆ. ಕಾನೂನಿನಲ್ಲಿ ಪರಿಹಾರ ಕಂಡು ಹಿಡಿಯಬೇಕು. ಸಿಎಂ ಸಹ ಹೇಳಿಕೆ ಕೊಟ್ಟಿದ್ದಾರೆ. ಒಂದು ಸಭೆ ಕರೆಯುತ್ತೇವೆ ಅಂದಿದ್ದಾರೆ. ಎಷ್ಟು ಕೇಸ್ ಇದೆ ನೋಡುತ್ತೇವೆ" ಎಂದರು.

ಸುಪ್ರೀಂನಲ್ಲಿ ದರ್ಶನ್​ ಕೇಸ್​ ವಿಚಾರವಾಗಿ ಮಾತನಾಡಿ, "ನಮ್ಮ ಪೊಲೀಸರು ಏನು‌ ಮಾಡಬೇಕೋ ಮಾಡಿದ್ದಾರೆ. ಮಾಹಿತಿ ಸೇರಿ ಹಲವು ದಾಖಲೆ ಕೊಟ್ಟಿದ್ದಾರೆ. ಇವತ್ತು ಏನು ತೀರ್ಪು ಬರುತ್ತೆ ನೋಡಬೇಕು‌. ನಂತರ ಮುಂದುವರಿಯಬೇಕಾಗುತ್ತದೆ" ಎಂದು ತಿಳಿಸಿದರು.

ಶ್ರೀರಾಮುಲು ಕಾಂಗ್ರೆಸ್​ಗೆ ಬರುವ ವಿಚಾರವಾಗಿ ಪ್ರತಿಕ್ರಿಯಿಸಿ, "ಅದರ ಬಗ್ಗೆ ನನಗೆ ಗೊತ್ತಿಲ್ಲ. ಅವರ ಪಕ್ಷದಲ್ಲಿ ಗಲಾಟೆ ಆಗುತ್ತಿದೆ. ನಮ್ಮಲ್ಲಿ ಆ ಬಗ್ಗೆ ಪ್ರಸ್ತಾಪ ಬಂದಿಲ್ಲ. ಅಧ್ಯಕ್ಷರು ಉತ್ತರ ಕೊಡುತ್ತಾರೆ" ಎಂದರು‌.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್​​​ ಕಿರುಕುಳ: ಸಿಎಂಗೆ ಮಾಂಗಲ್ಯ ಸರ ಕಳುಹಿಸಿ ನೊಂದ ಮಹಿಳೆಯರಿಂದ ಅಭಿಯಾನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.