Roasted Gramchana benefits:ಆರೋಗ್ಯವಂತ ದೇಹಕ್ಕೆ ಪೌಷ್ಟಿಕಾಂಶ ಅತ್ಯಗತ್ಯ. ದೈನಂದಿನ ಸಮತೋಲಿತ ಆಹಾರ ಎಂದರೆ ಮಾಂಸ ಮತ್ತು ಮೊಟ್ಟೆಗಳ ಜೊತೆಗೆ ಹಸಿರು ತರಕಾರಿಗಳು, ಕಾಳುಗಳು, ಬೀನ್ಸ್, ಹಾಲು ಮತ್ತು ಮೊಸರು ಮುಂತಾದ ಡೈರಿ ಉತ್ಪನ್ನಗಳನ್ನು ಒಳಗೊಂಡಿರಬೇಕಾಗುತ್ತದೆ. ತರಕಾರಿ, ಹಣ್ಣುಗಳು, ನಮ್ಮ ದೇಹಕ್ಕೆ ಕೊಬ್ಬಿನಾಂಶದ ಜೊತೆಗೆ ಫೈಬರ್ ಅಂಶಗಳನ್ನು ಪೂರೈಸುತ್ತವೆ. ಹಲವು ಬಗೆಯ ತಿಂಡಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದನ್ನುಂಟು ಮಾಡುತ್ತವೆ. ಬೆಳಗಿನ ತಿಂಡಿಯನ್ನು ಮಿತವಾಗಿ ತೆಗೆದುಕೊಂಡರೆ ಉತ್ತಮ ಪ್ರಯೋಜನವನ್ನು ನೀಡುತ್ತದೆ. ಉಪಹಾರದ ಬದಲಿಗೆ ಭರ್ಜರಿ ಭೋಜನವಾಗಿ ಸ್ವೀಕರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ದೇಹಕ್ಕೆ ಉತ್ತಮ ವಿಟಮಿನ್ಗಳನ್ನು ಒದಗಿಸುವ ಹುರಿದ ಕಡಲೆಯನ್ನು ಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳುಂಟು.
ಹುರಿಗಡಲೆಯಲ್ಲಿ ಏನೇನುಂಟು?: ಹುರಿಗಡಲೆಯಲ್ಲಿರುವ ಪ್ರೋಟೀನ್ ಅಂಶವು ಸ್ನಾಯುಗಳ ದುರಸ್ತಿ ಮತ್ತು ಬೆಳವಣಿಗೆಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ವೈದ್ಯರು. ಮಧುಮೇಹಿಗಳಿಗೆ ಹುರಿದ ಕಾಳು ಪ್ರಯೋಜನಕಾರಿ ಅಂತಾರೆ ಪರಿಣತರು. ಹುರಿಗಡಲೆಯಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕಬ್ಬಿಣ, ವಿಟಮಿನ್ ಬಿ ಮತ್ತು ಮೆಗ್ನೀಸಿಯಮ್ ನಂತಹ ಖನಿಜಗಳು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ದೇಹಕ್ಕೆ ಅಗತ್ಯವಾದ ನಾರಿನಂಶ ಹಾಗೂ ಕಡಿಮೆ ಗ್ಲೈಸೆಮಿಕ್ ಗುಣ ಹೊಂದಿದೆ ಎಂದು ಕೇರ್ ಹಾಸ್ಪಿಟಲ್ಸ್ ನ ಅಧ್ಯಕ್ಷ, ಹಿರಿಯ ಹೃದ್ರೋಗ ತಜ್ಞ ಡಾ.ಸೋಮರಾಜು ಹೇಳಿದ್ದಾರೆ.
ಈ ಎಲ್ಲ ವಿಟಮಿನ್ಗಳ ಆಗರ ಹುರಿಗಡಲೆ: ಹುರಿದ ಕಡ್ಲೆಯಲ್ಲಿ ಸಾಕಷ್ಟು ಪ್ರಮಾಣದ ಕಬ್ಬಿಣ, ಸೆಲೆನಿಯಂ, ಮ್ಯಾಂಗನೀಸ್, ವಿಟಮಿನ್ ಬಿ ಕಾಂಪ್ಲೆಕ್ಸ್, ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟಾಶಿಯಂ, ತಾಮ್ರ, ಜಿಂಕ್ ಇದ್ದು, ಹೃದ್ರೋಗ ಬರದಂತೆ ತಡೆಯುತ್ತದೆ ಎಂದು ಡಾ.ಸೋಮರಾಜು ತಿಳಿಸಿದ್ದಾರೆ. ರಕ್ತ ಹೆಪ್ಪುಗಟ್ಟುವಿಕೆಯನ್ನು ಕಡಿಮೆ ಮಾಡುವುದರ ಜೊತೆಗೆ, ಇದು ಅಂಗಾಂಗಳಲ್ಲಿ ರಕ್ತದ ಹರಿವನ್ನು ನಿಯಂತ್ರಿಸುತ್ತದೆ. ಹೃದಯ ಬಡಿತವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಫೈಬರ್ ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿನ ಪ್ರಿ-ಪ್ರೋಬಯಾಟಿಕ್ ಅಂಶಗಳು ಕರುಳಿನ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.