ಸ್ಯಾನ್ ಫ್ರಾನ್ಸಿಸ್ಕೋ(ಅಮೆರಿಕ): ಪಾರ್ಶ್ವವಾಯುಗೆ ತುತ್ತಾದ ಬಳಿಕ ಬಹಳಷ್ಟು ಮಂದಿ ದೈಹಿಕ ಚಟುವಟಿಕೆಯಲ್ಲಿ ತೊಡಗುತ್ತಾರೆ. ಅದರಲ್ಲೂ ಅವರೇನಾದರೂ ಫಿಟ್ನೆಸ್ ಅಥವಾ ಮನೋರಂಜನಾ ಸೌಲಭ್ಯದ ಬಳಿ ನೆಲ್ಲೆಸಿದ್ದರೆ, ಈ ರೀತಿಯ ವ್ಯಾಯಾಮಗಳಲ್ಲಿ ತೊಡಗುವುದೇ ಹೆಚ್ಚು. ಈ ಕೇಂದ್ರಗಳು ಅವರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಜರ್ನಲ್ ಅಮೆರಿಕನ್ ಸ್ಟ್ರೋಕ್ ಅಸೋಸಿಯೇಷನ್ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ನ್ಯೂಯಾರ್ಕ್ನಲ್ಲಿನ ಕಡಿಮೆ ಮಟ್ಟದ ಪಾರ್ಶ್ವವಾಯುಗೆ ಒಳಗಾದ ಮಂದಿ ತಮ್ಮ ಸುತ್ತಮುತ್ತಲಿನ ಸ್ಥಳದಲ್ಲಿ ಮನೋರಂಜನಾ ಕೇಂದ್ರ ಅಥವಾ ಫಿಟ್ನೆಸ್ ಕೇಂದ್ರಗಳು ಇದ್ದಾಗ ಅವರು ಈ ಸಮಸ್ಯೆಗೆ ತುತ್ತಾಗುವ ಮೊದಲು ನಿರ್ವಹಣೆ ಮಾಡುತ್ತಿದ್ದ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿದ್ದಾರೆ. ಮತ್ತು ಅದಕ್ಕಿಂತ ಹೆಚ್ಚಿನ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ನಮ್ಮ ಅಧ್ಯಯನದ ಮೂಲಕ ಪಾರ್ಶ್ವವಾಯುಗೆ ತುತ್ತಾದ ಜನರು ಅವರಿಗೆ ಲಭ್ಯವಿರುವ ದೈಹಿಕ ಚಟುವಟಿಕೆ ಸಂಪನ್ಮೂಲವನ್ನು ಬಳಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವೂ ಈ ರೀತಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ. ಇದು ಅಧ್ಯಯನದ ಪ್ರಮುಖವೂ ಅಂಶ ಆಗಿದೆ ಎಂದು ತಿಳಿಸಿದೆ ಎಂದು ಅಧ್ಯಯನದ ಪ್ರಮುಖ ಲೇಖಕ ಹಾಗೂ ಕೊಲಂಬಸ್ನ ಓಹಿಯೋ ಸ್ಟೇಟ್ ಯುನಿವರ್ಸಿಟಿಯ ಅಸಿಸ್ಟೆಂಟ್ ಪ್ರೊಫೆಸರ್ ಜೆಫ್ರಿ ವಿಂಗ್ ತಿಳಿಸಿದ್ದಾರೆ.
ಅಧ್ಯಯನದಲ್ಲಿ ಸಂಶೋಧಕರು ಫಿಟ್ನೆಸ್ ಕೇಂದ್ರ, ಈಜುಕೊಳ ಅಥವಾ ಜಿಮ್ನಂತಹ ದೈಹಿಕ ಚಟುವಟಿಕೆ ಕೇಂದ್ರದ ನಡುವಣ ಸಂಬಂಧವನ್ನು ಗಮನಿಸಿದ್ದಾರೆ. ಅಧ್ಯಯನದಲ್ಲಿ ಸೌಮ್ಯ ಪಾರ್ಶ್ವವಾಯುವಿಗೆ ತುತ್ತಾದ ನ್ಯೂಯಾರ್ಕ್ನ 333 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.