ಕರ್ನಾಟಕ

karnataka

ETV Bharat / health

ಮನೆಯಲ್ಲಿ ತರಕಾರಿ ಇಲ್ಲ ಎಂಬ ಚಿಂತೆ ಏಕೆ? ಹತ್ತೇ ನಿಮಿಷದಲ್ಲಿ ಮಾಡಿ ಈರುಳ್ಳಿ ಚಟ್ನಿ, ಸವಿದರೆ ದಿಲ್‌ಖುಷ್‌! - Onion Chutney Recipe

Onion Chutney Recipe: ಕೆಲವೊಮ್ಮೆ ಮನೆಯಲ್ಲಿ ತರಕಾರಿ ಇರುವುದಿಲ್ಲ. ಮಾರುಕಟ್ಟೆಗೆ ಹೋಗಲು ಸಮಯ ಮತ್ತು ತಾಳ್ಮೆಯೂ ಇರದು. ಇಂಥ ಸಂದರ್ಭದಲ್ಲಿ ನೀವು 10 ನಿಮಿಷದಲ್ಲಿ ಈರುಳ್ಳಿ ಚಟ್ನಿ ಮಾಡಬಹುದು. ಈ ಚಟ್ನಿ ಸಿದ್ಧಪಡಿಸುವುದು ಹೇಗೆ?. ಇಲ್ಲಿದೆ ರೆಸಿಪಿ.

NION CHUTNEY RECIPE IN Kannada  ONION CHUTNEY  HOW TO MAKE ONION PICKLE  ONION CHUTNEY RECIPE
ಈರುಳ್ಳಿ ಚಟ್ನಿ (ETV Bharat)

By ETV Bharat Health Team

Published : Sep 19, 2024, 1:07 PM IST

Updated : Sep 19, 2024, 1:21 PM IST

How To Make Onion Chutney:ಮನೆಯಲ್ಲಿ ತರಕಾರಿ ಇಲ್ಲದೇ ಇದ್ದಾಗ ಈರುಳ್ಳಿಯೊಂದಿಗೆ ರುಚಿಕರವಾದ ಚಟ್ನಿ ಮಾಡಬಹುದು. ಹೌದು. ಒಮ್ಮೆ ಸಖತ್​ ಟೇಸ್ಟಿಯಾಗಿರುವ ಈರುಳ್ಳಿಯ ಚಟ್ನಿಯ ರುಚಿ ನೋಡಿದ್ರೆ, ಮತ್ತೆ ಮತ್ತೆ ಮಾಡಬೇಕೆನಿಸುತ್ತದೆ. ಈ ಚಟ್ನಿ ತಯಾರಿಸುವುದು ತುಂಬಾ ಸುಲಭ. ಈರುಳ್ಳಿ ಚಟ್ನಿಯನ್ನು ಬಿಸಿ ಅನ್ನದೊಂದಿಗೆ ಸೇವಿಸಿದರೆ ದಿಲ್ ಖುಷ್​ ಖಂಡಿತ. ಹಾಗಂತ, ಅನ್ನದಲ್ಲಷ್ಟೇ ಅಲ್ಲದೇ ಇಡ್ಲಿ, ದೋಸೆ, ವಡೆ.. ಮುಂತಾದವುಗಳಲ್ಲೂ ಇದು ಸೂಪರ್ ಟೇಸ್ಟ್​ ನೀಡುತ್ತದೆ. ಹಾಗಾದ್ರೆ ಮತ್ತೇಕೆ ತಡ? ಟೇಸ್ಟಿ ಮತ್ತು ಮಸಾಲೆಯುಕ್ತ ಈರುಳ್ಳಿ ಚಟ್ನಿ ಮಾಡುವುದು ಹೇಗೆ? ಇದನ್ನು ತಯಾರಿಸಲು ಬೇಕಾದ ಪದಾರ್ಥಗಳು ಯಾವುವು? ತಿಳಿದುಕೊಳ್ಳೋಣ.

ಈರುಳ್ಳಿ ಚಟ್ನಿಗೆ ಬೇಕಾಗುವ ಸಾಮಾಗ್ರಿ:

  • ಒಣ ಮೆಣಸಿನಕಾಯಿ - 6
  • ದೊಡ್ಡ ಈರುಳ್ಳಿ - 3
  • ಸಾಸಿವೆ- ಒಂದು ಚಮಚ
  • ಜೀರಿಗೆ - ಒಂದು ಚಮಚ
  • ಉದ್ದಿನ ಬೇಳೆ- ಒಂದು ಚಮಚ
  • ಹಸಿ ಮೆಣಸಿನಕಾಯಿ- 3
  • ಹುಣಸೆಹಣ್ಣು ಸ್ವಲ್ಪ
  • ಉಪ್ಪು - ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  • 2 ಚಮಚ ಎಣ್ಣೆ
  • ಅರ್ಧ ಚಮಚ - ಸಾಸಿವೆ
  • ಒಂದು ಚಿಟಿಕೆ ಜೀರಿಗೆ
  • 2 ಕರಿಬೇವಿನ ಎಲೆಗಳು

ತಯಾರಿಸುವ ವಿಧಾನ:

  • ಚಟ್ನಿ ತಯಾರಿಸುವ ಮುನ್ನ- ಮೊದಲು ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಸಣ್ಣಗೆ ಕತ್ತರಿಸಿ ಪಕ್ಕಕ್ಕಿಡಿ.
  • ನಂತರ ಒಲೆ ಮೇಲೆ ಬಾಣಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ.
  • ಈಗ ಬಾಣಲೆಗೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಹಾಕಿ ಹುರಿಯಿರಿ. ಜೊತೆಗೆ, ಒಣ ಮೆಣಸಿನಕಾಯಿ ಮತ್ತು ಹಸಿ ಮೆಣಸಿನಕಾಯಿ ಸೇರಿಸಿ ಮತ್ತು ಒಂದು ನಿಮಿಷ ಫ್ರೈ ಮಾಡಿ.
  • ನಂತರ ಈ ಮಿಶ್ರಣವನ್ನು ಒಂದು ತಟ್ಟೆಯಲ್ಲಿ ತೆಗೆದುಕೊಂಡು ತಣ್ಣಗಾಗಲು ಬಿಡಿ. ಈಗ ಅದೇ ಬಾಣಲೆಯಲ್ಲಿ ಈರುಳ್ಳಿ ಚೂರುಗಳನ್ನು ಹಾಕಿ ಸ್ವಲ್ಪ ಎಣ್ಣೆ ಸುರಿದು 2 ನಿಮಿಷ ಫ್ರೈ ಮಾಡಿ. ಈಗ ಹುಣಸೆಹಣ್ಣು ಸೇರಿಸಿ ಮತ್ತು ಇನ್ನೊಂದು ನಿಮಿಷ ಫ್ರೈ ಮಾಡಿ.
  • ಹುರಿದ ಸಾಸಿವೆ, ಜೀರಿಗೆ ಮತ್ತು ಉದ್ದಿನ ಬೇಳೆಯನ್ನು ಮಿಕ್ಸಿ ಜಾರ್​ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
  • ಹಾಗೆಯೇ ಹುರಿದ ಈರುಳ್ಳಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ ರುಬ್ಬಿ.
  • ಈಗ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಇಂಗು ಮತ್ತು ಎರಡು ಕರಿಬೇವಿನ ಎಲೆಗಳನ್ನು ಸೇರಿಸಿ ಒಗ್ಗರಣೆ ಕೊಡಿ.
  • ಈಗ ನೀವು ಒಗ್ಗರಣೆಯನ್ನು ರುಬ್ಬಿಕೊಂಡಿರುವ ಈರುಳ್ಳಿಗೆ ಸೇರಿಸಿದರೆ ಅಷ್ಟೇ ಸಾಕು. ಬಾಯಲ್ಲಿ ನೀರೂರಿಸುವ ಈರುಳ್ಳಿ ಚಟ್ನಿ ರೆಡಿ.

ಇದನ್ನೂ ಓದಿ:

Last Updated : Sep 19, 2024, 1:21 PM IST

ABOUT THE AUTHOR

...view details