ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಡೆಯುತ್ತಿದೆ. 5 ಪಂದ್ಯಗಳ ಈ ಸರಣಿಯಲ್ಲಿ ಈಗಾಗಲೇ ನಾಲ್ಕು ಪಂದ್ಯಗಳು ಮುಗಿದಿವೆ. 5ನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಜ.5 ರಂದು ಸಿಡ್ನಿ ಮೈದಾನದಲ್ಲಿ ನಡೆಯಲಿದೆ.
WTC ದೃಷ್ಟಿಯಿಂದ 5ನೇ ಪಂದ್ಯ ಭಾರತದ ಪಾಲಿಗೆ ಮಾಡು ಇಲ್ಲ ಮಡಿಯಂತಾಗಿದೆ. ಕಾರಣ ನಾಲ್ಕನೇ ಪಂದ್ಯದಲ್ಲಿ ಹೀನಾಯವಾಗಿ ಸೋಲನ್ನು ಕಂಡಿರುವ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ನೇರವಾಗಿ ಪ್ರವೇಶ ಪಡೆಯುವ ಅರ್ಹತೆ ಕಳೆದುಕೊಂಡಿದೆ. ಆದರೂ ಭಾರತ ಫೈನಲ್ಗೆ ಪ್ರವೇಶಿಸಲು ಅವಕಾಶ ಇದೆ. ಆದರೆ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ಗೆಲುವು ಸಾಧಿಸಬೇಕು. ಹೀಗಾದಲ್ಲಿ ಮಾತ್ರ ಭಾರತ ಫೈನಲ್ಗೆ ತಲುಪಲಿದೆ. ಒಂದು ವೇಳೆ ಆಸ್ಟ್ರೇಲಿಯಾ ಪಂದ್ಯವನ್ನು ಗೆದ್ದರೂ ಭಾರತದ ಫೈನಲ್ ಕನಸು ಭಗ್ನಗೊಳ್ಳಲಿದೆ.
ಈ ಹಿನ್ನೆಲೆ 5ನೇ ಟೆಸ್ಟ್ ಪಂದ್ಯದಲ್ಲಿ ಭಾರಿ ಬದಲಾವಣೆಯೊಂದಿಗೆ ಭಾರತ ತಂಡ ಕಣಕ್ಕಿಳಿಯುವ ಸಾಧ್ಯತೆ ಇದೆ. ಈ ಪಂದ್ಯದಲ್ಲಿ ಜೈಸ್ವಾಲ್ ಜೊತೆ ಆರಂಭಿಕರಾಗಿ ಯಾರು ಆಡಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ. ಅಲ್ಲದೇ ಶುಭಮನ್ ಗಿಲ್ ತಂಡಕ್ಕೆ ಮರಳುವ ಸಾಧ್ಯತೆಗಳಿವೆ. ಮುಂದಿನ ಪಂದ್ಯವನ್ನು ಗೆಲ್ಲುವ ಜೊತೆಗೆ ಈ ಬಾರಿ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಡ್ರಾನಲ್ಲಿ ಅಂತ್ಯಗೊಳಿಸಲಿದೆಯಾ ಎಂದು ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ಆದರೆ, ಇವುಗಳ ನಡುವೆ ಕ್ರಿಕೆಟ್ ಆಸ್ಟ್ರೇಲಿಯಾ 2024ರ ಅತ್ಯುತ್ತಮ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ಹೌದು, ಈ ವರ್ಷದ ಅತ್ಯುತ್ತಮ ತಂಡವನ್ನು ಪ್ರಕಟಿಸಲಾಗಿದ್ದು, ಅದಕ್ಕೆ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ನಾಯಕನನ್ನಾಗಿ ಹೆಸರಿಸಿದೆ. ಅಲ್ಲದೇ ಪ್ರಕಟಗೊಂಡ ಈ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಅವರು ಆರಂಭಿಕ ಬ್ಯಾಟರ್ ಆಗಿ ಸ್ಥಾನ ಪಡೆದುಕೊಂಡಿದ್ದಾರೆ.
CRICKET AUSTRALIA PICKS THE TEST TEAM OF THE YEAR 2024 :
— Richard Kettleborough (@RichKettle07) December 31, 2024
Yashasvi Jaiswal 🇮🇳
Ben Duckett 🏴
Joe Root 🏴
Rachin Ravindra 🇳🇿
Harry Brook 🏴
Kamindu Mendis 🇱🇰
Alex Carey 🇦🇺
Matt Henry 🇳🇿
Jasprit Bumrah (C) 🇮🇳
Josh Hazlewood 🇦🇺
Keshav Maharaj 🇿🇦 pic.twitter.com/hNRcLQRfb8
2024ರ ಟೆಸ್ಟ್ ತಂಡ
ಆರಂಭಿಕ ಜೋಡಿ: ಜೈಸ್ವಾಲ್ ಮತ್ತು ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಬೆನ್ ಡಕೆಟ್ ಅವರನ್ನು ಆರಂಭಿಕ ಜೋಡಿಯಾಗಿ ಹೆಸರಿಸಲಾಗಿದೆ. ಈ ವರ್ಷ ಜೈಸ್ವಾಲ್ ಅವರು 15 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 54.74ರ ಸರಾಸರಿಯಲ್ಲಿ 1,478 ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಮೂರು ಶತಕ ಮತ್ತು ಒಂದು ದ್ವಿಶತಕ ಸಿಡಿಸಿದ್ದಾರೆ. ಇಂಗ್ಲೆಂಡ್ನ ಬೆನ್ ಡಕೆಟ್ 17 ಪಂದ್ಯಗಳನ್ನು ಆಡಿ 37.06ರ ಸರಾಸರಿಯಲ್ಲಿ 1,149 ರನ್ ಕಲೆಹಾಕಿದ್ದಾರೆ. ಇದರಲ್ಲಿ ಎರಡು ಶತಕಗಳು ಸೇರಿವೆ.
3ನೇ ಕ್ರಮಾಂದಲ್ಲಿ ಜೋ ರೂಟ್ ಹೆಸರಿಸಲಾಗಿದೆ. ರೂಟ್ ಈ ವರ್ಷ 17 ಟೆಸ್ಟ್ ಪಂದ್ಯಗಳನ್ನು ಆಡಿ, 1556 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 6 ಶತಕ, ಒಂದು ದ್ವಿಶತಕ ಒಳಗೊಂಡಿದೆ. ಇದಲ್ಲದೇ ಅವರು 11 ವಿಕೆಟ್ಗಳನ್ನು ಪಡೆದಿದ್ದಾರೆ.
ಮಧ್ಯಮ ಕ್ರಮಾಂಕ: ಆಸ್ಟ್ರೇಲಿಯಾ ಕ್ರಿಕೆಟ್ ಹೆಸರಿದ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್, ಕಮಿಂದು ಮೆಂಡೀಸ್, ರಚಿನ್ ರವೀಂದ್ರರನ್ನು ಹೆಸರಿಸಲಾಗಿದೆ. ಈ ವರ್ಷ ರವೀಂದ್ರ (984 ರನ್), ಕಮಿಂದು ಮೆಂಡಿಸ್ (1,049), ಹ್ಯಾರಿ ಬ್ರೂಕ್ 1,100 ರನ್ ಕೆಲೆ ಹಾಕಿದ್ದಾರೆ. ವಿಕೆಟ್ ಕೀಪರ್ ಆಗಿ ಆಸ್ಟ್ರೇಲಿಯಾದ ಅಲೇಕ್ಸ್ ಕ್ಯಾರಿ ಹೆಸರಿಸಲಾಗಿದೆ.
ಬೌಲಿಂಗ್: ಈ ವರ್ಷದ ಅತ್ಯುತ್ತಮ ಟೆಸ್ಟ್ ತಂಡದ ಬೌಲಿಂಗ್ ವಿಭಾಗದಲ್ಲಿ ಬೂಮ್ರಾ, ಮ್ಯಾಥ್ ಹೆನ್ರಿ, ಜೋಶ್ ಹೇಜಲ್ವುಡ್, ಕೇಶವ್ ಮಹಾರಾಜ್ ಅವರನ್ನು ಹೆಸರಿಸಲಾಗಿದೆ. ಈ ವರ್ಷ ಬುಮ್ರಾ 13 ಟೆಸ್ಟ್ ಪಂದ್ಯಗಳನ್ನು ಆಡಿ 71 ವಿಕೆಟ್ ಉರುಳಿಸಿದ್ದಾರೆ. ಉಳಿದಂತೆ ಹೇಜಲ್ವುಡ್ 15 ಪಂದ್ಯಗಳನ್ನು ಆಡಿ 35 ವಿಕೆಟ್ ಪಡೆದಿದ್ದರೇ, ಮ್ಯಥ್ಯೂ ಹೆನ್ರಿ 9 ಪಂದ್ಯಗಳಲ್ಲಿ 48 ವಿಕೆಟ್, ಸ್ಪಿನ್ನರ್ ಕೇಶವ್ ಮಹಾರಾಜ್ 35 ವಿಕೆಟ್ ಪಡೆದಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ 2024ರ ಟೆಸ್ಟ್ ತಂಡ; ಯಶಸ್ವಿ ಜೈಸ್ವಾಲ್, ಬೆನ್ ಡಕೆಟ್, ಜೋ ರೂಟ್, ರಚಿನ್ ರವೀಂದ್ರ, ಹ್ಯಾರಿ ಬ್ರೂಕ್, ಕಮಿಂದು ಮೆಂಡಿಸ್, ಅಲೆಕ್ಸ್ ಕ್ಯಾರಿ (ವಿ,ಕೀ), ಮ್ಯಾಟ್ ಹೆನ್ರಿ, ಜಸ್ಪ್ರೀತ್ ಬುಮ್ರಾ (ನಾಯಕ), ಜೋಶ್ ಹೇಜಲ್ವುಡ್, ಕೇಶವ್ ಮಹಾರಾಜ್.
ಇದನ್ನೂ ಓದಿ: 4ನೇ ಟೆಸ್ಟ್ ಸೋತರೂ WTC ಫೈನಲ್ ತಲುಪಲು ಭಾರತಕ್ಕಿರೋದು ಇದೋಂದೆ ದಾರಿ: ಹೀಗಾದ್ರೆ ಫೈನಲ್ ಫಿಕ್ಸ್!