Overthinking Side Effects: ನೀವು ಅತಿಯಾಗಿ ಆಲೋಚನೆ ಮಾಡುವ ಸಮಸ್ಯೆಯಿಂದ ಬಳಲುತ್ತಿದ್ದೀರಾ? ನೀವು ಅತಿಯಾಗಿ ಯೋಚಿಸುತ್ತಿದ್ದೀರಾ ಮತ್ತು ಅನಗತ್ಯವಾಗಿ ಚಿಂತಿಸುತ್ತಿದ್ದೀರಾ? ಇದರಿಂದ ಒತ್ತಡ, ಆತಂಕ ಹೆಚ್ಚಿ ನಿದ್ರಾಹೀನತೆ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. 2020ರಲ್ಲಿ ಜರ್ನಲ್ ಆಫ್ ಕ್ಲಿನಿಕಲ್ ಸೈಕಾಲಜಿಯಲ್ಲಿ (Journal of Clinical Psychology) ಪ್ರಕಟವಾದ "ಮಾನಸಿಕ ಆರೋಗ್ಯದ ಮೇಲೆ ಅತಿಯಾದ ಚಿಂತನೆಯ ಪರಿಣಾಮಗಳು: ವ್ಯವಸ್ಥಿತ ವಿಮರ್ಶೆ" (The Effects of Overthinking on Mental Health: A Systematic Review) ಎಂಬ ಅಧ್ಯಯನದಲ್ಲಿ ಈ ವಿಷಯ ಕಂಡುಬಂದಿದೆ.
ಅತಿಯಾಗಿ ಯೋಚಿಸುವುದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹಲವು ಅಧ್ಯಯನಗಳು ಎಚ್ಚರಿಕೆ ನೀಡಿವೆ. ಅತಿಯಾಗಿ ಯೋಚಿಸುವುದರಿಂದ ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಉದ್ಭವಿಸುತ್ತವೆ ಎನ್ನುತ್ತಾರೆ ತಜ್ಞರು. ಇದಕ್ಕೆ ತಜ್ಞರು ಸೂಚಿಸಿದಂತಹ ಪರಿಹಾರ ಕಂಡುಹಿಡಿಯೋಣ (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).
- ವಯಸ್ಕರು ಅತಿಯಾಗಿ ಯೋಚಿಸುವುದರಿಂದ ವರ್ತಮಾನದಲ್ಲಿ ಬದುಕುವ ಸಮಯ ಮತ್ತು ಅವಕಾಶವನ್ನು ಕಸಿದುಕೊಳ್ಳಬಹುದು ಎನ್ನುತ್ತಾರೆ ತಜ್ಞರು.
- ಪದೇ ಪದೇ ಆಲೋಚಿಸುವುದರಿಂದ ಕೆಲಸ ಕಾರ್ಯಗಳ ಮೇಲೆ ಏಕಾಗ್ರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಧ್ಯಾನ ಮತ್ತು ಯೋಗ ಮಾಡುವ ಮೂಲಕ ಶಾಂತವಾಗಿರಲು ಪ್ರಯತ್ನಿಸಲು ಸಲಹೆ ನೀಡಲಾಗುತ್ತದೆ.
- ಅತಿಯಾಗಿ ಯೋಚಿಸುವುದು ನಮ್ಮ ಆಹಾರದ ಮೇಲೂ ಪರಿಣಾಮ ಬೀರುತ್ತದೆ ಎಂದು ತಿಳಿಸುತ್ತಾರೆ ತಜ್ಞರು. ಹೆಚ್ಚು ಯೋಚಿಸಿದರೆ ಹಸಿವಾಗುವುದಿಲ್ಲ ಎಂದು ಸ್ವಲ್ಪ ತಿಂದರೆ ಹೊಟ್ಟೆ ತುಂಬುತ್ತದೆ. ನಿಜವಾದ ಊಟದ ಮೇಲೆ ಗಮನವಿಲ್ಲ ಎಂದು ಅವರು ವಿವರಿಸುತ್ತಾರೆ.
- ಅತಿಯಾದ ಯೋಚನೆಯಿಂದ ಸದಾ ಮೂಡಿಯಾಗಿರುತ್ತಾರೆ. ಇದರಿಂದ ಸುತ್ತಮುತ್ತಲಿನವರೊಂದಿಗೆ ಬೆರೆಯಲು ಆಗುವುದಿಲ್ಲ. ಒಂಟಿಯಾಗುತ್ತಾರೆ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.
- ಈ ಸಮಸ್ಯೆ ಪರಿಹಾರಕ್ಕೆ ಚಿಂತನೆಯೇ ಉತ್ತಮ ಮಾರ್ಗ ಎನ್ನುತ್ತಾರೆ ತಜ್ಞರು. ಇಲ್ಲವಾದರೆ ದಿನವಿಡೀ ಒಂದೇ ವಿಚಾರದಲ್ಲಿ ಯೋಚಿಸಿದರೆ ಸಮಯ ವ್ಯಯವಾಗುತ್ತದೆ ಹಾಗೂ ಯಾವುದೇ ಫಲಿತಾಂಶ ಬರುವುದಿಲ್ಲ.
- ಎಷ್ಟೇ ಸಮಸ್ಯೆಗಳಿದ್ದರೂ ನಗುಮುಖದಿಂದ ಎದುರಿಸಬೇಕು. ಸದಾ ಶಾಂತವಾಗಿರಬೇಕು. ಇದರಿಂದ ಚಿಂತನೆಯ ವ್ಯಾಪ್ತಿ ವಿಸ್ತಾರವಾಗುತ್ತದೆ. ಪರಿಣಾಮವಾಗಿ, ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು ಎನ್ನುತ್ತಾರೆ ತಜ್ಞರು.
- ಹಿಂದೆ ಏನಾಯಿತು, ಮುಂದೆ ಏನಾಗುತ್ತದೆ ಎಂದು ಯೋಚಿಸದೆ ಪ್ರಸ್ತುತ ಕ್ಷಣವನ್ನು ಆನಂದಿಸಿ. ಸಕಾರಾತ್ಮ ಮನೋಭಾವದಿಂದ ಮುನ್ನಡೆಯಬೇಕು. ಯಾವುದೇ ಸವಾಲುಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಿದರೆ ಜೀವನ ಸುಖಮಯವಾಗಿರುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ವೀಕ್ಷಿಸಿ: https://pmc.ncbi.nlm.nih.gov/articles/PMC4689615/
ಓದುಗರಿಗೆ ಪ್ರಮುಖ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.