ETV Bharat / health

ಶುಗರ್ ನಿಯಂತ್ರಿಸಲು ಪ್ರತಿದಿನ ಎಷ್ಟು ಹೊತ್ತು ವಾಕಿಂಗ್​ ಮಾಡಬೇಕು ಗೊತ್ತೇ?: ತಜ್ಞರು ಹೇಳೋದು ಹೀಗೆ - HOW MUCH DIABETICS WALK DAILY

WALKING HEALTH BENEFITS: ಮಧುಮೇಹ ಪೀಡಿತರು ವಾಕಿಂಗ್ ಮಾಡುವುದು ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ವಾಕಿಂಗ್​ನಿಂದ ಅನೇಕ ಪ್ರಯೋಜನಗಳು ಲಭಿಸುತ್ತವೆ. ಹಾಗಾದ್ರೆ, ಪ್ರತಿದಿನ ಇಷ್ಟು ಸಮಯ ನಡೆಯಬೇಕಾಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ..

TIPS FOR WALKING WITH DIABETES  HOW MUCH SHOULD DIABETICS WALK  HEALTH BENEFITS OF WALKING  HOW MUCH WALK PER DAY FOR DIABETES
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Dec 31, 2024, 11:12 AM IST

How much should diabetics walk: ಇತ್ತೀಚಿನ ವರ್ಷಗಳಲ್ಲಿ ಟೈಪ್-2 ಮಧುಮೇಹ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ರೋಗ ಬಂದರೆ, ಜೀವನದುದ್ದಕ್ಕೂ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಜೀವನಶೈಲಿಯ ಬದಲಾವಣೆಗಳು ಹಾಗೂ ಸರಿಯಾದ ಆಹಾರ ಪದ್ಧತಿ ಈ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ.

ಮಧುಮೇಹಿಗಳು ದಿನನಿತ್ಯದ ತುಂಬಾ ಪ್ರಯೋಜನಕಾರಿಯಾಗಿದೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ನೀವು ದಿನಕ್ಕೆ ಎಷ್ಟು ಕಾಲ ವಾಕಿಂಗ್​ ಮಾಡಬೇಕು? ವಾರಕ್ಕೆ ಎಷ್ಟು ಸಮಯವನ್ನು ನಿಗದಿಪಡಿಸಬೇಕು? ಜೊತೆಗೆ ಯಾವೆಲ್ಲಾ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎಂಬುದರ ವಿವರಗಳನ್ನು ತಿಳಿದುಕೊಳ್ಳೋಣ.

TIPS FOR WALKING WITH DIABETES  HOW MUCH SHOULD DIABETICS WALK  HEALTH BENEFITS OF WALKING  HOW MUCH WALK PER DAY FOR DIABETES
ಸಾಂದರ್ಭಿಕ ಚಿತ್ರ (freepik)

ಸಂಶೋಧನೆ ಏನು ಹೇಳುತ್ತೆ?: ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ದಿನಕ್ಕೆ 30 ನಿಮಿಷಗಳ ಕಾಲ ವಾಕಿಂಗ್​ ಮಾಡಬೇಕಾಗುತ್ತದೆ. ಜೊತೆಗೆ ಇಡೀ ವಾರವಲ್ಲದಿದ್ದರೆ, ವಾರದಲ್ಲಿ ಕನಿಷ್ಠ 5 ದಿನ, ದಿನಕ್ಕೆ 30 ನಿಮಿಷಗಳ ಕಾಲ ನಡೆಯುವುದು ಒಳ್ಳೆಯದು ಅಭ್ಯಾಸವಾಗಿದೆ. ಈ ಕುರಿತ ಮಾಹಿತಿಯನ್ನು ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಶನ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).

ಸಾಂದರ್ಭಿಕ ಚಿತ್ರ (Getty Images)

ಹೀಗೆ ವಿಂಗಡಿಸಿ ವಾಕಿಂಗ್​ ಮಾಡಿ: ಅರ್ಧ ಗಂಟೆ ನಡೆಯಲು ಸಮಯವಿಲ್ಲದವರು, ಆಗದವರು.. ಭಾಗಗಳಾಗಿ ವಿಂಗಡಿಸಿ ವಾಕಿಂಗ್​ ಮಾಡಲು ತಿಳಿಸಲಾಗುತ್ತದೆ. ನೀವು ನಡೆಯುವಾಗಲೆಲ್ಲಾ 10 ನಿಮಿಷಗಳ ಕಾಲ ನಡೆಯಲು ತಜ್ಞರು ಸೂಚಿಸುತ್ತಾರೆ. ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಂತರ ಕನಿಷ್ಠ ಹತ್ತು ನಿಮಿಷ ನಡೆದರೆ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರಲು ಸಾಧ್ಯವಾಗುತ್ತದೆ.

ಊಟವಾದ ನಂತರ ಹತ್ತು ನಿಮಿಷಗಳ ಕಾಲ ಸ್ವಲ್ಪ ವಾಕಿಂಗ್​ ಮಾಡಬೇಕು. ಇದರಿಂದ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು. ಜೊತೆಗೆ ಗಂಟೆಗೆ ಮೂರರಿಂದ ನಾಲ್ಕು ಮೈಲುಗಳ ವೇಗದಲ್ಲಿ ನಡೆಯುವುದರಿಂದ ಇನ್ಸುಲಿನ್ ಮಟ್ಟ ಹೆಚ್ಚಿಸಲು ಕೂಡ ಸಾಧ್ಯವಾಗುತ್ತದೆ. ಜೊತೆಗೆ ಹೃದಯ ಸಂಬಂಧಿ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಬಹುದು ಎಂದು ತಜ್ಞರು ವಿವರಿಸುತ್ತಾರೆ.

ಮುನ್ನೆಚ್ಚರಿಕೆಗಳು: ವಾಕಿಂಗ್​ ಮಾಡುವ ಮೊದಲು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೀಲುಗಳ ಮೇಲೆ ಒತ್ತಡವನ್ನು ತಪ್ಪಿಸಲು ಸಮತಟ್ಟಾದ ನೆಲದ ಮೇಲೆ ನಡೆಯುವುದನ್ನು ಮುಂದುವರಿಸಬೇಕು. ಅದರ ನಂತರ ಕಲ್ಲುಗಳು ಮತ್ತು ಮೆಟ್ಟಿಲುಗಳನ್ನು ಹತ್ತಬೇಕು ಮತ್ತು ಇಳಿಯಬೇಕಾಗುತ್ತದೆ. ಹವಾಮಾನವು ಅನುಕೂಲಕರವಾದಾಗ ಬೆಳಿಗ್ಗೆ ಅಥವಾ ಸಂಜೆ ವಾಕಿಂಗ್‌ಗೆ ವಿಶೇಷ ಸಮಯ ಮೀಸಲಿಡಬೇಕು ಎಂದು ತಜ್ಞರು ತಿಳಿಸುತ್ತಾರೆ.

ವಾಕಿಂಗ್​ನ ಮತ್ತಷ್ಟು ಪ್ರಯೋಜನಗಳು:

ದೇಹವು ಸದೃಢ: ನಿಯಮಿತವಾಗಿ ವಾಕಿಂಗ್​ ಮಾಡುವುದರಿಂದ ಸ್ನಾಯುಗಳನ್ನು ಬಲಪಡಿಸಲು ಹಾಗೂ ದೇಹದ ಆಕಾರವನ್ನು ಬದಲಾಯಿಸಲು ಸಹಾಯ ಮಾಡುತ್ತದೆ. ದೇಹವು ಬಾಗದೆ ನೇರವಾಗಿ ನಿಲ್ಲುತ್ತದೆ. ಸೂಪರ್ ಆಗಿರುವ ಮೈಕಟ್ಟು ಹೊಂದಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.

ತೂಕ ಇಳಿಕೆ ಉತ್ತಮ: ದಿನನಿತ್ಯ ವಾಕಿಂಗ್ ಮಾಡುವುದರಿಂದ ತೂಕ ಕಡಿಮೆಯಾಗುತ್ತದೆ. ವಾಕಿಂಗ್​ನಿಂದ ಕ್ಯಾಲೊರಿಗಳನ್ನು ಬರ್ನ್​ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ತೂಕವನ್ನು ಕಡಿಮೆ ಮಾಡುತ್ತದೆ ಹಾಗೂ ಕೊಬ್ಬನ್ನು ಕರಗಿಸಲು ಸುಲಭವಾಗುತ್ತದೆ.

ಚರ್ಮಕ್ಕೆ ಹೊಳಪು: ವಾಕಿಂಗ್​ನಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಚರ್ಮಕ್ಕೆ ಸರಿಯಾದ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಲಭಿಸುತ್ತದೆ. ಪರಿಣಾಮವಾಗಿ, ಮುಖದ ಮಂದತೆ ಮಾಯವಾಗುತ್ತದೆ. ಅದು ನೈಸರ್ಗಿಕ ಬೆಳಕಿನಿಂದ ರಿಫ್ರೆಶ್ ಆಗುತ್ತದೆ. ಜೊತೆಗೆ ಚರ್ಮಕ್ಕೆ ಹೊಳಪು ಬರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ ವೀಕ್ಷಿಸಬಹುದು:

https://diabetes.org/health-wellness/fitness/benefits-walking

ಓದುಗರಿಗೆ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಹಾಗೂ ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.