ಹೈದರಾಬಾದ್: ತಾಂತ್ರಿಕ ಕೌಶಲ್ಯಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, 2030ರ ಹೊತ್ತಿಗೆ ಉದಯೋನ್ಮುಖ ತಂತ್ರಜ್ಞಾನ ವಲಯದಲ್ಲಿ 10 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಕ್ಯೂಸ್ ಐಟಿ ಸ್ಟಾಫಿಂಗ್ನ ಟೆಕ್ನಾಲಜೀಸ್ ಸ್ಕಿಲ್ ರಿಪೋರ್ಟ್ 2024 ತಿಳಿಸಿದೆ.
ಈ ವರದಿಯಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್, ಜೆನರೇಟಿವ್ ಎಐ, ಮಷಿನ್ ಲರ್ನಿಂಗ್, ಸೈಬರ್ ಸೆಕ್ಯೂರಿಟಿ, ಕ್ಲೌಡ್ ಕಂಪ್ಯೂಟಿಂಗ್, ಡೇಟಾ ಸೈನ್ಸ್, ಬ್ಲಾಕ್ಚೈನ್ ತಂತ್ರಜ್ಞಾನ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಲಿದೆ ಎಂದು ತಿಳಿಸಿದೆ. ಈ ಕೌಶಲ್ಯಗಳು ಉದ್ಯಮ ಕಾರ್ಯಾಚರಣೆ ಮತ್ತು ಉದ್ಯಮದೆಲ್ಲೆಡೆ ನಿರ್ವಹಣೆ ಹಾಗೂ ಆರ್ಥಿಕತೆಗೆ ಮತ್ತಷ್ಟು ಬಲ ತುಂಬಲಿದೆ.
ಈ ತಂತ್ರಜ್ಞಾನದ ಯೋಜನೆಗಳು ಭಾರತೀಯ ಜಿಡಿಪಿಗೆ 2030ರ ಹೊತ್ತಿಗೆ ಹೆಚ್ಚುವರಿಯಾಗಿ 150 ಬಿಲಿಯನ್ ಡಾಲರ್ ಅಂದರೆ ಅಂದಾಜು 12.75 ಲಕ್ಷ ಕೋಟಿ ರೂಪಾಯಿಯಷ್ಟು ಕೊಡುಗೆ ನೀಡಲಿದೆ ಎಂದು ಅಂದಾಜಿಸಲಾಗಿದೆ.
ಪ್ರಮುಖ ಟೆಕ್ ಹಬ್ಗಳು: ಟೆಕ್ ಉದ್ಯೋಗ ಸೃಷ್ಟಿಸುವಲ್ಲಿ ಬೆಂಗಳೂರು ಪ್ರಮುಖ ಮತ್ತು ಮೊದಲ ನಗರವಾದರೆ, ಹೈದರಾಬಾದ್ ಮತ್ತು ಪುಣೆ ನಂತರದ ಸ್ಥಾನದಲ್ಲಿವೆ. ಈ ಟೆಕ್ ಹಬ್ಗಳು ಭಾರತದ ತಂತ್ರಜ್ಞಾನದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ನಿರೀಕ್ಷೆ ಇದೆ.
ಎಐ ಚಾಲಿಕ ಯುಗದ ಜಾಗತಿಕ ಪರಿವರ್ತನೆಯಲ್ಲಿ ಕೌಶಲ್ಯಯುತ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಿದ್ದು, ಇದರ ಬೆಳವಣಿಗೆ ನಿರಂತರವಾಗಿ ಸಾಗಲಿದೆ. ಇದು ಉದ್ಯೋಗ ಬಯಸುವ ಅತ್ಯುತ್ಸಾಹಿ ಟಿಕ್ಕಿಗಳಿಗೆ ಅದ್ಭುತ ಅವಕಾಶಗಳನ್ನು ನೀಡಲಿದೆ.
ಇದನ್ನೂ ಓದಿ: ದೇಶವನ್ನೇ ಬೆಚ್ಚಿಬೀಳಿಸಿದ ಟೆಕ್-ಸೈಬರ್ ಸ್ಕ್ಯಾಮ್ಗಳ ಹಿನ್ನೋಟ ಇದು