ಕರ್ನಾಟಕ

karnataka

ETV Bharat / health

ಹಿರಿಯರ ಆರೈಕೆಯಲ್ಲಿ ಎಐ ಮತ್ತು ತಂತ್ರಜ್ಞಾನ ಬಳಕೆಗೆ ನೀತಿ ಆಯೋಗ ಕರೆ

ಹಿರಿಯರ ಆರೈಕೆಗಾಗಿ ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನದ ಅಪ್ಲಿಕೇಷನ್​​ಗಳಿಗೆ ಹೆಚ್ಚಿನ ಪ್ರಧಾನ್ಯತೆ ನೀಡುವುದು ಅವಶ್ಯವಾಗಿದೆ ಎಂದು ವರದಿ ತಿಳಿಸಿದೆ.

Niti Aayog Report on Senior Care Reforms
Niti Aayog Report on Senior Care Reforms

By ETV Bharat Karnataka Team

Published : Feb 19, 2024, 5:08 PM IST

ನವದೆಹಲಿ: ಹಿರಿಯ ನಾಗರಿಕರ ಆರೈಕೆಗಾಗಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಗೆ (ಎಐ) ಆದ್ಯತೆ ನೀಡುವುದು ಮುಖ್ಯ ಎಂದು ನೀತಿ ಆಯೋಗ ತಿಳಿಸಿದೆ.

'ಸೀನಿಯರ್​ ಕೇರ್​​ ರಿಫಾರ್ಮ್ಸ್​​​ ಇನ್​ ಇಂಡಿಯಾ; ರಿಇಮೇಜಿಂಗ್​​ ದ ಸಿನೀಯರ್​​ ಕೇರ್​​ ಪಾರಡೈಮ್'​ ಎಂಬ ಹೆಸರಿನಲ್ಲಿ ಭಾರತದಲ್ಲಿನ ಹಿರಿಯ ಆರೈಕೆ ಸುಧಾರಣೆಗಳ ವರದಿಯನ್ನು ಪ್ರಕಟಿಸಿದೆ. ಆರೋಗ್ಯಕರ ವಯಸ್ಸಾದ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಕುಟುಂಬ ಮತ್ತು ಕುಟುಂಬದ ಮೌಲ್ಯಗಳ ಪಾತ್ರವು ಪ್ರಮುಖವಾಗಿದೆ. ವರದಿಯು ಭಾರತದಲ್ಲಿ ಆರೋಗ್ಯಕರ ವಯಸ್ಸಾಗುವಿಕೆಗೆ ಸೂಕ್ತವಾದ ನೀತಿ ನಿರ್ದೇಶನಗಳನ್ನು ನೀಡಿದೆ.

ಈ ವರದಿಯ ಬಿಡುಗಡೆಯುವ ವಿಕಸಿತ್​​ ಭಾರತ್​​@2047 ಗುರಿ ಸಾಧನೆಯತ್ತ ಭಾರತದ ಬದ್ಧತೆಯ ಹೆಜ್ಜೆಯಾಗಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ಸುಮನ್​ ಬೆರಿ ತಿಳಿಸಿದ್ದಾರೆ.

ಹಿರಿಯರ ಆರೈಕೆಗಾಗಿ ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನದ ಅಪ್ಲಿಕೇಷನ್​​ಗಳಿಗೆ ಹೆಚ್ಚಿನ ಪ್ರಧಾನ್ಯತೆ ನೀಡುವುದು ಅತ್ಯಂತ ಪ್ರಮುಖವಾಗಿದೆ. ವೈದ್ಯಕೀಯ ಮತ್ತು ಸಾಮಾಜಿಕ ಆಯಾಮಗಳ ಜೊತೆಗೆ ಹಿರಿಯ ಆರೈಕೆಯ ವಿಶೇಷ ಆಯಾಮಗಳ ಬಗ್ಗೆ ಯೋಚಿಸಲು ಪ್ರಾರಂಭಿಸಬೇಕಿದೆ ಎಂದಿದ್ದಾರೆ.

ಅಧ್ಯಯನದ ಶಿಫಾರಸು ಮಾಡುವಂತೆ ನಾಲ್ಕು ಪ್ರಮುಖ ಪ್ರದೇಶಗಳಾದ ಆರೋಗ್ಯ, ಸಾಮಾಜಿಕ, ಆರ್ಥಿಕತೆ ಮತ್ತು ಡಿಜಿಟಲ್​​ ಅಡಿಯಲ್ಲಿ ಸಬಲೀಕರಣ, ಸೇವಾ ವಿತರಣೆ ಮತ್ತು ಅವುಗಳ ಸೇರ್ಪಡೆಗಳ ವಿಷಯದಲ್ಲಿ ಅಗತ್ಯವಿರುವ ನಿರ್ದಿಷ್ಟ ಮಧ್ಯಸ್ಥಿಕೆ ನಡೆಸಬೇಕಿದೆ ಎಂದು ತಿಳಿಸುತ್ತದೆ.

ವಯಸ್ಸಾದವರ ಘನತೆ, ಸುರಕ್ಷತೆ ಮತ್ತು ಉತ್ಪಾದಕತೆಯ ಕುರಿತು ಗಂಭೀರವಾಗಿ ಚರ್ಚೆಗಳು ಆಗಬೇಕಿದೆ. ಹಿರಿಯ ನಾಗರಿಕ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು. ಅವರ ಯೋಗಕ್ಷೇಮ ಮತ್ತು ಕಾಳಜಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ನೀತಿ ಆಯೋಗದ ಸದಸ್ಯ ಡಾ ವಿಕೆ ಪೌಲ್​ ತಿಳಿಸಿದ್ದಾರೆ.

ವೈದ್ಯಕೀಯ ಮತ್ತು ವೈದ್ಯಕೀಯೇತರ ಅಗತ್ಯವನ್ನು ಗುರುತಿಸುವುದು ಮುಖ್ಯವಾಗುತ್ತದೆ. ಹೀಗಾಗಿ ಪರಿಣಾಮಕಾರಿ ಮತ್ತು ಸಿನರ್ಜೈಸ್ಡ್ ಹಿರಿಯ ಆರೈಕೆ ನೀತಿಯನ್ನು ವಿನ್ಯಾಸಗೊಳಿಸುವುದು ಮುಖ್ಯವಾಗಿದೆ. ವರದಿಯು ಹಿರಿಯರ ಆರೈಕೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕು ಎಂದು ತಿಳಿಸಿದ್ದು, ಈ ಸಂಬಂಧ ಯಾವ ಕಾರ್ಯದ ಅವಶ್ಯಕತೆ ಬೇಕು ಎಂಬುದನ್ನು ತಿಳಿಸುತ್ತದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ವಿಭಾಗದ ಕಾರ್ಯದರ್ಶಿ ಸೌರಭ್​ ಗರ್ಗ್ ತಿಳಿಸಿದ್ದಾರೆ.

ಡಿಒಎಸ್​​ಜೆಇಯು ಗೌರವಯುತ ವಯಸ್ಸಾಗುವಿಕೆ, ಮನೆಯಲ್ಲಿ ವಯಸ್ಸಾಗುವಿಕೆ ಮತ್ತು ಉತ್ಪಾದಕ ವಯಸ್ಸಾಗುವಿಕೆ ವಿಶಾಲ ಗುರಿಯನ್ನು ಹೊಂದಿದೆ. ಇದು ಸಾಮಾಜಿಕ, ಆರ್ಥಿಕ ಮತ್ತು ಆರೋಗ್ಯ ಅಂಶಗಳನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ:ಭಾರತದಲ್ಲಿ ಮಧ್ಯವಯಸ್ಸಿನ 22 ಕೋಟಿ ಜನರನ್ನು ಕಾಡುತ್ತಿದೆ ದುರ್ಬಲತೆ; ಅಧ್ಯಯನ

ABOUT THE AUTHOR

...view details