ದೇಶದಲ್ಲಿ ಅತಿ ಹೆಚ್ಚು ಮಾಂಸ ಸೇವಿಸುವ ರಾಜ್ಯ ಯಾವುದೆಂದು ನಿಮಗೆ ಗೊತ್ತಾ? ದೇಶದಲ್ಲಿ ಸಸ್ಯಾಹಾರಿಗಳ ಜೊತೆಗೆ ಮಾಂಸಾಹಾರಿಗಳ ಜನಸಂಖ್ಯೆಯೂ ಹೆಚ್ಚಾಗಿದ್ದು, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5) ಬಿಡುಗಡೆ ಮಾಡಿದ ವರದಿ ಪ್ರಕಾರ, ಅತಿ ಹೆಚ್ಚು ಮಾಂಸ ಸೇವಿಸುವ ಅಗ್ರ 10 ರಾಜ್ಯಗಳ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಅತಿ ಹೆಚ್ಚು ಮಾಂಸ ತಿನ್ನುವ ರಾಜ್ಯ ನಾಗಾಲ್ಯಾಂಡ್. ಇಲ್ಲಿನ ಹೆಚ್ಚಿನ ಜನರು ಮಾಂಸಾಹಾರ ಸೇವಿಸುತ್ತಾರೆ. ರಾಷ್ಟ್ರೀಯ ಆರೋಗ್ಯ ಕುಟುಂಬ ಸಮೀಕ್ಷೆಯ ಪ್ರಕಾರ, ಈ ರಾಜ್ಯದಲ್ಲಿ ಶೇ.99.8ರಷ್ಟು ಜನರು ಮಾಂಸಾಹಾರ ಸೇವಿಸುತ್ತಾರೆ. ಹೀಗಾಗಿ, ಮಾಂಸ ಸೇವನೆಯಲ್ಲಿ ನಾಗಾಲ್ಯಾಂಡ್ ಅಗ್ರ ಸ್ಥಾನದಲ್ಲಿದೆ.
ಪಶ್ಚಿಮ ಬಂಗಾಳವು ಮಾಂಸ ಸೇವನೆ ಮಾಡುವ ರಾಜ್ಯಗಳಲ್ಲಿ 2ನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಇಲ್ಲಿ ಗರಿಷ್ಠ 99.3 ಪ್ರತಿಶತದಷ್ಟು ಜನರು ಮಾಂಸಾಹಾರ ಸವಿಯುತ್ತಾರೆ. ಇಲ್ಲಿನ ಜನರು ಮೀನುಗಳನ್ನು ಹೆಚ್ಚು ಇಷ್ಟಪಡುತ್ತಾರೆ.
ಕೇರಳ ರಾಜ್ಯ ಮಾಂಸ ಸೇವಿಸುವ ಅಗ್ರ 10 ರಾಜ್ಯಗಳಲ್ಲಿ 3ನೇ ಸ್ಥಾನದಲ್ಲಿದೆ. ಸಮುದ್ರಾಹಾರವನ್ನೂ ಹೆಚ್ಚಾಗಿ ಸೇವಿಸುವ ಕೇರಳ, ಮಾಂಸಾಹಾರಿಗಳ ದೊಡ್ಡ ಸಂಖ್ಯೆಯನ್ನೇ ಹೊಂದಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಇಲ್ಲಿ ಶೇ.99.1ರಷ್ಟು ಮಾಂಸಾಹಾರ ಸೇವಿಸುತ್ತಾರೆ.
ಅತಿ ಹೆಚ್ಚು ಮಾಂಸ ಸೇವಿಸುವ ಟಾಪ್ 10 ರಾಜ್ಯಗಳಲ್ಲಿ ಆಂಧ್ರಪ್ರದೇಶ 3ನೇ ಸ್ಥಾನ ಪಡೆದುಕೊಂಡಿದೆ. ಇಲ್ಲಿ, ಶೇ.98.25ರಷ್ಟು ಜನರು ಕೋಳಿ ಮತ್ತು ಕುರಿ ಮಾಂಸವನ್ನು ತಿನ್ನುತ್ತಾರೆ ಎನ್ನುತ್ತೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ. ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಮೀನುಗಳನ್ನು ಸೇವಿಸುತ್ತಾರೆ.
ಈ ಪಟ್ಟಿಯಲ್ಲಿ ತಮಿಳುನಾಡು ರಾಜ್ಯ ಅಗ್ರ 5ರಲ್ಲಿದೆ. ಈ ರಾಜ್ಯದಲ್ಲಿ ಶೇ.97.65ರಷ್ಟು ಜನರು ಮಾಂಸಾಹಾರ ಸೇವಿಸುತ್ತಾರೆ. ಅವರು ಕೋಳಿ, ಕುರಿಮರಿ ಮತ್ತು ಸಮುದ್ರಾಹಾರವನ್ನು ತಿನ್ನಲು ಇಷ್ಟಪಡುತ್ತಾರೆ ಎನ್ನುತ್ತದೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ.
ಒಡಿಶಾ ರಾಜ್ಯವು ಈ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇವರು ಸಮುದ್ರಾಹಾರವನ್ನು ಸೇವಿಸುವುದು ಹೆಚ್ಚು, ಅವರಿಗೆ ಸೀಗಡಿ ಎಂದರೆ ತುಂಬಾ ಇಷ್ಟ ಎಂಬ ಮಾಹಿತಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಉಲ್ಲೇಖವಾಗಿದೆ. ಇಲ್ಲಿನ ಜನಸಂಖ್ಯೆಯ ಶೇ.97.35ರಷ್ಟು ಮಾಂಸಾಹಾರಿಗಳು ಇದ್ದಾರೆ.
ದೇಶದಲ್ಲಿ ಅತಿ ಹೆಚ್ಚು ಮಾಂಸ ಸೇವಿಸುವ ಟಾಪ್ 10 ರಾಜ್ಯಗಳಲ್ಲಿ ತೆಲಂಗಾಣ ರಾಜ್ಯವು ಏಳನೇ ಸ್ಥಾನದಲ್ಲಿದೆ. ಇಲ್ಲಿ ಮಟನ್, ಕೋಳಿ ಮತ್ತು ಮೀನು ತಿನ್ನುವವರ ಸಂಖ್ಯೆ ಹೆಚ್ಚು. ರಾಜ್ಯದ ಜನಸಂಖ್ಯೆಯ 97.4 ಪ್ರತಿಶತದಷ್ಟು ಜನರು ಮಾಂಸವನ್ನು ತಿನ್ನುತ್ತಾರೆ ಎಂದು ಸಮೀಕ್ಷೆ ಉಲ್ಲೇಖಿಸಿದೆ.
ಈ ಪಟ್ಟಿಯಲ್ಲಿ ಜಾರ್ಖಂಡ್ 8ನೇ ಸ್ಥಾನ ಪಡೆದಿದೆ. ಜಾರ್ಖಂಡ್ ರಾಜ್ಯದ ಶೇ.97ರಷ್ಟು ಜನರು ಮಾಂಸ ಸೇವಿಸುತ್ತಾರೆ. ಇಲ್ಲಿನ ಬಹುಪಾಲು ಮಾಂಸಾಹಾರ ಪ್ರಿಯರ ನೆಚ್ಚಿನ ಖಾದ್ಯವೆಂದರೆ ಕೋಳಿ ಎಂಬ ಮಾಹಿತಿಯನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಉಲ್ಲೇಖಿಸಿದೆ.
ಈಶಾನ್ಯ ರಾಜ್ಯವಾದ ತ್ರಿಪುರಾದಲ್ಲಿ, ಶೇ.95ರಷ್ಟು ಜನರು ಮಾಂಸಾಹಾರಿಗಳಾಗಿದ್ದಾರೆ. ಇಲ್ಲಿನ ಜನರು ಹೆಚ್ಚಾಗಿ ಮೀನು, ಹಂದಿಮಾಂಸ ಮತ್ತು ಕೋಳಿ ಮಾಂಸವನ್ನು ತಿನ್ನುತ್ತಾರೆ. ದೇಶದಲ್ಲಿ ಅತಿ ಹೆಚ್ಚು ಮಾಂಸ ಸೇವಿಸುವ ಟಾಪ್ 10 ರಾಜ್ಯಗಳಲ್ಲಿ ತ್ರಿಪುರಾ 9ನೇ ಸ್ಥಾನದಲ್ಲಿದೆ.
ದೇಶದಲ್ಲಿ ಅತಿ ಹೆಚ್ಚು ಮಾಂಸ ಸೇವಿಸುವ ಟಾಪ್ 10 ರಾಜ್ಯಗಳಲ್ಲಿ 10ನೇ ಸ್ಥಾನದಲ್ಲಿರುವುದು ಗೋವಾ. ಇಲ್ಲಿನ ಶೇ.93.8ರಷ್ಟು ಜನರು ಮಾಂಸಾಹಾರಿ ಆಹಾರವನ್ನು ಸೇವಿಸುತ್ತಾರೆ. ಹೆಚ್ಚಿನ ಆಹಾರಪ್ರಿಯರು ಮೀನು ಮತ್ತು ಏಡಿಗಳಂತಹ ಸಮುದ್ರಾಹಾರವನ್ನು ಸೇವಿಸುತ್ತಾರೆ ಎನ್ನುತ್ತದೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ.
ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳು ಅತಿ ಕಡಿಮೆ ಮಾಂಸಾಹಾರಿಗಳನ್ನು ಹೊಂದಿರುವ ರಾಜ್ಯಗಳಾಗಿವೆ.