ಹೈದರಾಬಾದ್: TWO SPOONS OF GHEE A DAY - ಈಗಾಗಲೇ ಬಳಕೆ ಮಾಡಿದ ಅಡುಗೆ ಎಣ್ಣೆಯನ್ನು ಮತ್ತೊಮ್ಮೆ ಬಳಸಬಾರದು ಎಂಬ ನಿಯಮ ಮನೆಗಳಿಗೂ ಅನ್ವಯ. ಕರಿದ ಎಣ್ಣೆಗಳನ್ನು ಹಲವು ಅಡುಗೆಗಳ ಒಗ್ಗರಣೆಗೆ ಬಳಕೆ ಮಾಡಲಾಗುವುದು. ಆದರೆ, ಈ ಎಣ್ಣೆಗಳನ್ನು ದೀರ್ಘಕಾಲ ಸಂಗ್ರಹಿಸಬಾರದು ಎಂದು ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (ಎನ್ಐಎನ್) ತಿಳಿಸಿದೆ.
ಕೊಬ್ಬು ಸಂಬಂಧಿತ ಆಹಾರ ಕುರಿತು ಹೊಸ ಮಾರ್ಗಸೂಚಿ ಹೊರಡಿಸಿರುವ ಎನ್ಐಎನ್, ವಾರಕ್ಕೆ 200 ಗ್ರಾಂ ಮೀನು ಬಳಕೆ ಮಾಡಬಹುದು. ಸಿದ್ದ ಆಹಾರ, ಫಾಸ್ಟ್ ಫುಡ್ಗಳನ್ನು ತಪ್ಪಿಸಿ. ಡ್ರೈಫ್ರೂಟ್ಸ್, ಎಣ್ಣೆ ಬೀಜ, ಮೀನಿನ ಎಣ್ಣೆ, ಕೋಳಿ ಮೊಟ್ಟೆ ಬಳಕೆ ಮಾಡಿ. ತುಪ್ಪ, ಬೆಣ್ಣೆಯನ್ನು ದಿನಕ್ಕೆ ಎರಡು ಸ್ಪೂನ್ ಬಳಕೆ ಮಾಡಬಹುದು. ಕಾರ್ಯನಿರತ ಪುರುಷರು ದಿನಕ್ಕೆ 40 ರಿಂದ 50 ಗ್ರಾಂ ಕೊಬ್ಬು ಸೇವಿಸಿದರೆ, ಮಹಿಳೆಯರು 30 ರಿಂದ 40 ಗ್ರಾಂ ಸೇವನೆ ಮಾಡಬಹುದು. ಕೆಲಸದಿಂದ ದೂರ ಇರುವವರು 20 ರಿಂದ 30 ಗ್ರಾಂ ಕೊಬ್ಬು ಸೇವನೆ ಮಾಡಿದರೆ ಸಾಕು ಎಂದು ತಿಳಿಸಿದೆ.
ಮಾರ್ಗಸೂಚಿಯ ಮುಖ್ಯಾಂಶಗಳು:10 ರಿಂದ 15 ನಿಮಿಷ ನೀರು ಕುದಿಸಿದರೆ ಉತ್ತಮ: ನೀರು ಕಾಯಿಸಿ ಕುಡಿಯುವುದರಿಂದ ಆರೋಗ್ಯ ಸಮಸ್ಯೆ ತಡೆಯಬಹುದು. ನೀರನ್ನು 10 ರಿಂದ 15 ನಿಮಿಷ ಕಾಯಿಸುವುದು ಉತ್ತಮ. ಇದರಿಂದ ನೀರಿನಲ್ಲಿ ಸೂಕ್ಷ್ಮಜೀವಿಗಳು ಉಳಿಯುವುದಿಲ್ಲ. ಜೊತೆಗೆ 20 ಲೀಟರ್ ನೀರಿಗೆ 0.5 ಎಂಜಿ ಕ್ಲೋರಿನ್ ಟಾಬ್ಲೆಟ್ ಸೇರಿಸುವುದು ಉತ್ತಮವಾದ ಮಾರ್ಗ, ಇದು ರಾಸಾಯನಿಕದ ಬೆದರಿಕೆಯನ್ನು ತಪ್ಪಿಸುತ್ತದೆ. ಒಂದು ಲೀ ನೀರಿನಲ್ಲಿ 1.5 ಎಂಜಿಗಿಂತ ಹೆಚ್ಚಿನ ಫ್ಲೋರೈಡ್ ಇರಬಾರದು. ಇದಕ್ಕಿಂತ ಹೆಚ್ಚಿದ್ದರೆ, ಎಚ್ಚರ ಅಗತ್ಯ ಎಂದಿದೆ.
ಜ್ಯೂಸ್ ಬೇಡ ಹಣ್ಣು ತಿನ್ನಿ: ಹಣ್ಣನ್ನು ಜ್ಯೂಸ್ ಬದಲಾಗಿ ಹಾಗೇ ಸೇವಿಸುವುದರಿಂದ ಆರೋಗ್ಯಕ್ಕೆ ಪ್ರಯೋಜನ. 100 ರಿಂದ 150 ಎಂಎಲ್ ಜ್ಯೂಸ್ ಸೇವಿಸಬಹುದು. ಕಬ್ಬಿನ ಜ್ಯೂಸ್ನಲ್ಲಿ ಸಕ್ಕರೆ ಅಂಶ ಹೆಚ್ಚಿರುವ ಹಿನ್ನೆಲೆಯಲ್ಲಿ 13 ರಿಂದ 15 ಗ್ರಾಂ ಸೇವನೆ ಮಾಡಬೇಕು. ಪ್ಯಾಕೇಜ್ ಆಹಾರ ಉತ್ಪನ್ನದ ಮೇಲೆ ಫುಡ್ ಲೇಬಲ್ ಇರಬೇಕು. ಹಣ್ಣಿನ ಜ್ಯೂಸ್ ಸೇವನೆ ಮಾಡುವುದಾದರೆ ಅದಕ್ಕೆ ಸಕ್ಕರೆ ಸೇರಿಸಬೇಡಿ.