ಹೈದರಾಬಾದ್: ಮಹಿಳೆಯರ ಋತುಬಂಧದಲ್ಲಿನ ಕಳಂಕ ಮತ್ತು ಲಿಂಗಾಧಾರಿತ ವಯೋಮಾನದ ಸವಾಲಿನ ಕುರಿತು ಆರೋಗ್ಯಕರ ಚರ್ಚೆ ಮಾಡುವ ಅಶ್ಯಕತೆ ಇದೆ ಎಂದು ಲ್ಯಾನ್ಸೆಟ್ ವರದಿ ತಿಳಿಸಿದೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆ ಮೆನೋಪಾಸ್ (ಮಹಿಳೆಯರ ಮುಟ್ಟು ನಿಲ್ಲುವ ಅವಧಿ) ಕುರಿತು ಚರ್ಚೆ ನಡೆಸಲಾಗಿದೆ.
ವಯಸ್ಸಾಗುವಿಕೆಯಿಂದ ಮಹಿಳೆಯರಲ್ಲಿ ಉಂಟಾಗುವ ನೈಸರ್ಗಿಕ ರೂಪಾಂತರವೇ ಈ ಮೆನೋಪಾಸ್ ಆಗಿದೆ. ಮೆನೋಪಾಸ್ ಎಂಬುದು ಪ್ರತಿಯೊಬ್ಬ ಮಹಿಳೆಯಲ್ಲಿ ಭಿನ್ನವಾಗಿರುತ್ತದೆ. ಈ ಸಮಯದಲ್ಲಿ ಅನೇಕ ಮಹಿಳೆಯರು ಒಂದೊಂದು ರೀತಿಯ ಸಮಸ್ಯೆ ಅನುಭವಿಸುತ್ತಾರೆ. ಕೆಲವರು ದೀರ್ಘಕಾಲದ ಅಥವಾ ತೀವ್ರತರದ ಸಮಸ್ಯೆ ಅನುಭವಿಸಿದರೆ, ಮತ್ತೆ ಕೆಲವರಿಗೆ ಮಾಹಿತಿ, ಬೆಂಬಲ ಮತ್ತು ವೈದ್ಯಕೀಯ ಚಿಕಿತ್ಸೆಯ ಬೆಂಬಲ ಬೇಕಾಗುತ್ತದೆ.
ಈ ಸರಣಿಯ ಒಂದು ಪತ್ರಿಕೆಯಲ್ಲಿ ತಿಳಿಸಿರುವಂತೆ ಈ ಸಮಸ್ಯೆಯ ತೀವ್ರತೆಗೆ ಕೇವಲ ಒಂದೇ ಅಂಶವೂ ಕಾರಣವಾಗಿರುವುದಿಲ್ಲ. ಇದರ ಜೊತೆಗೆ ಮನೋವೈಜ್ಞಾನಿಕ, ಸಾಮಾಜಿಕ ಮತ್ತು ಸಂದರ್ಭಗಳು ಕಾರಣವಾಗುತ್ತವೆ. ಲ್ಯಾನ್ಸೆಟ್ ಪ್ರಕಾರ ಮೆನೋಪಾಸ್ ಸಮಯದಲ್ಲಿ ಕಾಡುವ ಸಾಮಾನ್ಯ ಲಕ್ಷಣ ಹಾಟ್ ಫ್ಲಶ್ ಮತ್ತು ರಾತ್ರಿ ಬೆವರುವಿಕೆ, ವಾಸೋಮೋಟರ್ ನಿದ್ದೆಗೆ ಅಡೆತಡೆ, ಯೋನಿ ಒಣಗುವಿಕೆ ಮತ್ತು ಸ್ನಾಯು ಮತ್ತು ಕೀಲು ನೋವು. ಕಳಪೆ ಮಾನಸಿಕ ಆರೋಗ್ಯದ ಜತೆಗೆ ಇದು ಸಂಬಂಧ ಹೊಂದಿದೆ. ಆದರೂ, ಈ ಅವಧಿಯ ಆರಂಭದಲ್ಲಿ ಖಿನ್ನತೆ ಅಪಾಯ ಹೆಚ್ಚಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ.
ಈ ಮೆನೋಪಾಸ್ ಅವಧಿಯು ಮಹಿಳೆಯರ ವ್ಯಕ್ತಿತ್ವವನ್ನು ಮರು ಮೌಲ್ಯಮಾಪನ ಮಾಡಲು ಮತ್ತು ಋತುಚಕ್ರ ಮತ್ತು ಋತುಚಕ್ರದ ನೋವಿನಿಂದ ಸ್ವಾತಂತ್ರ್ಯರಾಗುವ ಸಮಯವಾಗಿದೆ. ಈ ಬಗ್ಗೆಗಿನ ನಕಾರಾತ್ಮಕ ಗ್ರಹಿಕೆ ಬದಲಾಯಿಸಬೇಕಿದೆ. ಈ ರೀತಿಯ ಗ್ರಹಿಕೆ ಇನ್ನು ಸಮಾಜದಲ್ಲಿದೆ ಎಂದು ವರದಿ ತಿಳಿಸಿದೆ.