ನವದೆಹಲಿ:ಉದ್ಯೋಗ ಸ್ಥಳದಲ್ಲಿ ಮೀಟಿಂಗ್ಗಳು ಉದ್ಯೋಗಿಗಳ ಹೆಚ್ಚಿನ ಬಳಲಿಕೆಗೆ ಕಾರಣವಾಗಲಿವೆ. ದಿನವೊಂದರಲ್ಲಿ ಸಾಕಷ್ಟು ಮೀಟಿಂಗ್ಗಳಲ್ಲಿ ಭಾಗಿಯಾಗುವುದರಿಂದ ಅವರ ಕೆಲಸದ ಉತ್ಸಾಹ ಕುಂದುತ್ತದೆ ಎಂದು ಶೇ 80 ರಷ್ಟು ಭಾರತೀಯ ಉದ್ಯೋಗಿಗಳು ಒಪ್ಪಿಕೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಆಸ್ಟ್ರೇಲಿಯಾ ಮೂಲದ ಅಟ್ಲಾಸಿಯನ್ ಕಾರ್ಪೋರೇಷನ್ ಈ ಸಂಬಂಧ ಅಧ್ಯಯನ ನಡೆಸಿದೆ. ತಮ್ಮ ಎಲ್ಲ ಮೀಟಿಂಗ್ಗಳನ್ನು ಮುಗಿಸಿದ ಬಳಿಕ ಶೇ 90ರಷ್ಟು ಭಾರತೀಯ ಉದ್ಯೋಗಿಗಳು ಮತ್ತೆ ಕೆಲಸಕ್ಕೆ ಮರಳಿ ಆ ಕೆಲಸವನ್ನು ಮುಗಿಸುವುದು ತ್ರಾಸದಾಯಕ ಎಂದು ಭಾವಿಸುತ್ತಾರೆ.
ಈ ಅಧ್ಯಯನಕ್ಕಾಗಿ ಭಾರತ, ಅಮೆರಿಕ, ಆಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್ ದೇಶದಲ್ಲಿ ತಲಾ 1000 ದಂತೆ 5 ಸಾವಿರ ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ವರದಿಯಲ್ಲಿ ಈ ಸಭೆಗಳು ಪರಿಣಾಮಕಾರಿಯಲ್ಲ. ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಶೇ 60ರಷ್ಟು ಸಭೆಗಳು ಸೋತಿವೆ ಎಂಬುದನ್ನು ಉಲ್ಲೇಖಿಸಿದೆ.
ಕೆಲಸಗಾರರು ಮೀಟಿಂಗ್ಗಳಲ್ಲಿ ಸಮಯ ಕಳೆಯುವುದರಿಂದ ಅವರು ತಮ್ಮ ದೈನಂದಿನ ಕೆಲಸಗಳನ್ನು ಮುಗಿಸುವಲ್ಲಿ ಕೂಡ ಹಿನ್ನಡೆ ಅನಭವಿಸುತ್ತಾರೆ. ಮೀಟಿಂಗ್ಗಳ ಬಳಿಕ ಅವರಲ್ಲಿ ಪ್ರೇರಣೆ ಕೊರತೆ, ಗುರಿಯ ಕುರಿತು ಅಸ್ಪಷ್ಟತೆ, ಅಸ್ಪಷ್ಟ ಜವಾಬ್ದಾರಿ ಮತ್ತು ಯಾರ ಜೊತೆಗೆ ಕೆಲಸ ಮಾಡುವುದು ಎಂಬ ಅಸುರಕ್ಷತೆಗೆ ಕಾರಣವಾಗುತ್ತದೆ.
ಶೇ 70ರಷ್ಟು ಭಾರತೀಯ ಉದ್ಯೋಗಿಗಳು ಹಲವಾರು ಮೀಟಿಂಗ್ಗಳಲ್ಲಿ ಭಾಗಿಯಾದರೂ ಕೆಲಸದ ಸ್ಥಳದಲ್ಲಿ ಒಬ್ಬಂಟಿಯಂತೆ ಭಾವಿಸುತ್ತಾರೆ. ಈ ರೀತಿಯ ಭಾವನೆ ಜಾಗತಿಕವಾಗಿ ಶೇ 55ರಷ್ಟಿದೆ. ಶೇ 82ರಷ್ಟು ಉದ್ಯೋಗಿಗಳು ಬಹುತೇಕ ತಮ್ಮ ಮೀಟಿಂಗ್ಗಳಿಗಾಗಿ ಕೆಲಸದ ಅರ್ಧದಷ್ಟು ಸಮಯ ಮುಗಿದು ಹೋಗುತ್ತದೆ ಎಂದು ಭಾವಿಸುತ್ತಾರೆ ಎಂದು ವರದಿ ತಿಳಿಸಿದೆ. ಶೇ 74ರಷ್ಟು ಭಾರತದ ಉದ್ಯೋಗಿಗಳು ಮೀಟಿಂಗ್ಗಳಲ್ಲಿ ಕೆಳಯುವುದರಿಂದ ತಮ್ಮ ಕೆಲಸವನ್ನು ಓವರ್ಟೈಮ್ನಲ್ಲಿ ಮಾಡಬೇಕಾಗುತ್ತದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಒತ್ತಡದ ಕುರಿತು ಮಾತನಾಡಲು ಹಿಂಜರಿಕೆ:ಕೆಲಸದ ಸ್ಥಳದಲ್ಲಿ ಒತ್ತಡ, ಆತಂಕ ಅಥವಾ ಖಿನ್ನತೆಯು ಮಾನಸಿಕ ಆರೋಗ್ಯದ ವಿಷಯವಾಗಿದ್ದು, ಈ ವಿಚಾರ ಕುರಿತು ಮಾತನಾಡಲು ಶೇ 25ರಷ್ಟು ಅಂದರೆ, ಒಟ್ಟಾರೆ ಉದ್ಯೋಗಿಗಳಲ್ಲಿ ಕಾಲು ಭಾಗದಷ್ಟು ಮಂದಿ ಹಿಂಜರಿಯುತ್ತಾರೆ ಎಂದು ವರದಿ ವಿವರಿಸಿದೆ.
ಗ್ರೇಟ್ ಪ್ಲೇಸ್ ಟು ವರ್ಕ್ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ, 2023ರ 18 ಉದ್ಯಮದಲ್ಲಿನ 210 ಕಂಪನಿಗಳ 18.5 ಲಕ್ಷ ಉದ್ಯೋಗಿಗಳನ್ನು ಸಮೀಕ್ಷೆ ಮಾಡಲಾಗಿದೆ. ಸಮೀಕ್ಷೆಯಲ್ಲಿ ನಾಲ್ಕರಲ್ಲಿ ಒಂದು ಉದ್ಯೋಗಿ ಉದ್ಯೋಗ ಸ್ಥಳದಲ್ಲಿ ಒತ್ತಡ, ಬಳಲಿಕೆ, ಆತಂಕ ಅಥವಾ ಖಿನ್ನತೆ ಕುರಿತು ಮಾತನಾಡಲು ಕಷ್ಟ ಪಡುತ್ತಾರೆ ಎಂದು ತಿಳಿದು ಬಂದಿದೆ. (ಐಎಎನ್ಎಸ್)
ಇದನ್ನೂ ಓದಿ: ಕೆಲಸದ ಸ್ಥಳದಲ್ಲಿನ ಒತ್ತಡ ನಿಭಾಯಿಸುವುದೇಗೆ? ಇಲ್ಲಿದೆ ಪರಿಹಾರ