ETV Bharat / health

ನೀವು ತುಂಬಾ ಹೊತ್ತು ನಿಂತುಕೊಳ್ಳುತ್ತೀರಾ?: ಹಾಗಾದರೆ ಇರಲಿ ಎಚ್ಚರಿಕೆ - ಬಿಪಿ, ಹೃದ್ರೋಗದ ಬಗ್ಗೆ ಎಚ್ಚರಿಕೆ ಕೊಟ್ಟ ತಜ್ಞರು

Long Time Standing Side Effects: ದೀರ್ಘಕಾಲದವರೆಗೆ ನಿಂತು ಕೆಲಸ ಮಾಡುತ್ತಿರುವವರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸುತ್ತವೆ. ಅದರಲ್ಲಿ ಕಾಲು, ಕೀಲು ನೋವು ಹಾಗೂ ಹೃದ್ರೋಗದ ತೊಂದರೆ ಹೆಚ್ಚು ಕಾಡುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

IS STANDING FOR A LONG TIME GOOD  LONG TIME STANDING DISEASE  LONG TIME STANDING CAUSES  LONG TIME STANDING SIDE EFFECTS
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : 2 hours ago

Long Time Standing Side Effects: ನಮ್ಮಲ್ಲಿ ಅನೇಕರು ಬೆಳಗ್ಗೆ ಎದ್ದ ಸಮಯದಿಂದ ಮಲಗುವ ತನಕ ಬಹಳ ಹೊತ್ತು ನಿಂತುಕೊಂಡೇ ಇರುತ್ತಾರೆ. ಇನ್ನೂ ಕೆಲವರು ನಿಂತುಕೊಂಡೇ ಕೆಲಸ ಮಾಡುತ್ತಾರೆ. ಹೆಚ್ಚು ಹೊತ್ತು ನಿಂತುಂಕೊಂಡರೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಹೆಚ್ಚು ಹೊತ್ತು ನಿಲ್ಲುವುದರಿಂದ ಆಗುವ ಆರೋಗ್ಯ ತೊಂದರೆಗಳೇನು? ಇದಕ್ಕಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು ಎಂಬುದರ ಬಗ್ಗೆ ಇದೀಗ ತಿಳಿದುಕೊಳ್ಳೋಣ.

ಹೃದಯದ ಕಾಯಿಲೆಗಳು: ದೀರ್ಘಕಾಲದವರೆಗೆ ನಿಂತುಕೊಳ್ಳುವುದು ಹೃದಯಕ್ಕೆ ರಕ್ತ ಪೂರೈಕೆ ಕಡಿಮೆ ಮಾಡುತ್ತದೆ. ಹೆಚ್ಚು ಹೊತ್ತು ನಿಂತರೆ ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆಯೂ ಹೆಚ್ಚಿದೆ ಎಂಬುದರ ಬಗ್ಗೆ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. "The Relationship Between Occupational Standing and Cardiovascular Disease Risk" ಎಂಬ ವಿಷಯದ ಅಧ್ಯಯನದಲ್ಲಿ ಇದು ಬಹಿರಂಗವಾಗಿದೆ. ಅಮೆರಿಕನ್ ಜರ್ನಲ್ ಆಫ್ ಎಪಿಡೆಮಿಯಾಲಜಿಯಲ್ಲಿ (American Journal of Epidemiology) ಪ್ರಕಟವಾದ ಅಧ್ಯಯನದಲ್ಲಿ ಡಾ.ಪೀಟರ್ ಸ್ಮಿತ್ ಪಾಲ್ಗೊಂಡಿದ್ದರು.

ರಕ್ತ ಪರಿಚಲನೆಯಲ್ಲಿ ತುಂಬಾ ವ್ಯತ್ಯಾಸ: ತಜ್ಞರು ಹೇಳುವಂತೆ ಹೆಚ್ಚು ಹೊತ್ತು ನಿಂತರೆ ಕಾಲುಗಳಲ್ಲಿ ರಕ್ತ ಸಂಚಾರ ತುಂಬಾ ನಿಧಾನವಾಗುತ್ತದೆ. ಇದರ ಪರಿಣಾಮವಾಗಿ ಕಾಲುಗಳು ತೀವ್ರ ನೋವು ಕಾಣಿಸುತ್ತದೆ ಎಂದು ಹೇಳಲಾಗುತ್ತದೆ.

ವೆರಿಕೋಸ್ ವೇನ್ಸ್: ಹೆಚ್ಚು ಹೊತ್ತು ನಿಂತರೆ ವೆರಿಕೋಸ್ ವೇನ್ಸ್ ಬರಬಹುದು ಸಾಧ್ಯತೆ ಹೆಚ್ಚಿದೆ. ಇದರಿಂದ ನರಗಳು ನೀಲಿ ಮತ್ತು ಕೆಂಪು ಬಣ್ಣಕ್ಕೆ ತಿರುಗುತ್ತವೆ. ವಿಶೇಷವಾಗಿ ರಾತ್ರಿಯಲ್ಲಿ ಆ ಪ್ರದೇಶದಲ್ಲಿ ನೋವು, ಸೆಳೆತ, ತುರಿಕೆ ಉಂಟಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ಕಾಲುಗಳು, ಕೀಲು ನೋವು: ಹೆಚ್ಚು ಹೊತ್ತು ನಿಂತರೆ ಇಡೀ ದೇಹದ ಭಾರ ಕಾಲುಗಳ ಮೇಲೆ ಬೀಳುತ್ತದೆ. ಇದರಿಂದ ಮೊಣಕಾಲು ಮತ್ತು ಕೀಲು ನೋವು ಉಂಟಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಊತ: ಕಾಲುಗಳ ಹಿಂಭಾಗದಲ್ಲಿ ರಕ್ತ ಪರಿಚಲನೆಯು ನಿರ್ಬಂಧಿಸಲ್ಪಟ್ಟಿದೆ ಹಾಗೂ ಊತ ಉಂಟಾಗುತ್ತದೆ. ಇದರಿಂದಾಗಿ ನೋವು ಉಂಟಾಗುತ್ತದೆ. ಈ ಸಮಸ್ಯೆ ಉಲ್ಬಣಗೊಂಡರೆ ಕೆಲ ದಿನಗಳ ಕಾಲ ಚರ್ಮವು ನೀಲಿ ಬಣ್ಣಕ್ಕೆ ತಿರುಗುತ್ತದೆ. ಮೊಣಕಾಲುಗಳು ಮತ್ತು ಪಾದಗಳಲ್ಲಿ ತೀವ್ರ ಊತ ಕಂಡು ಬರುತ್ತದೆ ಎಂದು ತಜ್ಞರು ಮಾಹಿತಿ ನೀಡುತ್ತಾರೆ.

ಸುಸ್ತು ಹಾಗೂ ತಲೆಸುತ್ತು: ಹೆಚ್ಚು ಹೊತ್ತು ನಿಂತರೆ ದೇಹ ಸಂಪೂರ್ಣ ದಣಿದು ಸುಸ್ತಾಗುತ್ತದೆ. ಜೊತೆಗೆ ತಲೆ ತಿರುಗುತ್ತಿರುವಂತೆ ಕಾಣುತ್ತಿದೆ ಎಂದು ಹೇಳಲಾಗುತ್ತದೆ.

ಪರಿಹಾವೇನು?: ನೀವು ದೀರ್ಘಕಾಲದವರೆಗೆ ನಿಂತು ಕೆಲಸ ಮಾಡಬೇಕಾದರೆ, ನೀವು 8 ನಿಮಿಷಗಳಿಗಿಂತ ಹೆಚ್ಚು ಕಾಲ ಒಂದೇ ಸ್ಥಾನದಲ್ಲಿ ಇರಬಾರದು. ಅದರಂತೆಯೇ ಕುಳಿತುಕೊಳ್ಳಬೇಕಾದ ಸಂದರ್ಭದಲ್ಲೂ 20 ನಿಮಿಷಕ್ಕಿಂತ ಹೆಚ್ಚು ಕಾಲ ಸುಮ್ಮನೆಯು ಕುಳಿತುಕೊಳ್ಳಬಾರದು. ಕೆಲಸದ ಸಾಮರ್ಥ್ಯಕ್ಕೆ ಅನುಗುಣವಾಗಿ ಡೆಸ್ಕ್ ಅನ್ನು ಸ್ಥಾಪಿಸಿಕೊಳ್ಳಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಮಧ್ಯದಲ್ಲಿ ಹಿಂದೆ ಮತ್ತು ಮುಂದೆ ಓಡಾಡಬೇಕು. ದೇಹದ ವಿವಿಧ ಭಾಗಗಳ ಕಾರ್ಯಕ್ಷಮತೆ ಸುಧಾರಿಸಲು ಅಂಗಗಳನ್ನು ಚಲಿಸುವಂತೆ ಮಾಡುವುದು ತುಂಬಾ ಉತ್ತಮ ಎಂದು ಸಂಶೋಧಕರು ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಿ: https://www.ncbi.nlm.nih.gov/books/NBK83160/

ಓದುಗರಿಗೆ ಪ್ರಮುಖ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

ಇದನ್ನೂ ಓದಿ:

ನೋವು ನಿವಾರಕ ಅತಿಯಾದ ಬಳಕೆಯಿಂದ ಜೀರ್ಣಾಂಗದಲ್ಲಿ ಸಮಸ್ಯೆ; ತಜ್ಞರ ಸಲಹೆಯಲ್ಲಿದೆ ಪರಿಹಾರ!

ಈ ರೋಗಲಕ್ಷಣಗಳು ನಿಮಗಿದೆಯೇ? ಗರ್ಭಕೋಶದ ಸೋಂಕು ಆಗಿರಬಹುದು: ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ!

ಕಚೇರಿ ಕೆಲಸದಲ್ಲಿ ಸಹೋದ್ಯೋಗಿಗಳು ಅಪಹಾಸ್ಯ, ಟೀಕೆ ಮಾಡುತ್ತಿದ್ದಾರೆಯೇ?; ಅದನ್ನು ಹೇಗೆ ಎದುರಿಸೋದು?

ಉಪವಾಸ Vs ಕಡಿಮೆ ತಿನ್ನುವುದು Vs ಬೇಗ ಊಟ ಮಾಡುವುದು: ತೂಕ ಇಳಿಕೆಗೆ ಯಾವುದು ಉತ್ತಮ ಆಯ್ಕೆ?

ಮುಖದ ಹೊಳಪಿಗಾಗಿ ಐಸ್‌ಕ್ಯೂಬ್​ನಿಂದ ಮಸಾಜ್ ಮಾಡಬಹುದೇ? ತಜ್ಞರ ಉತ್ತರ ಹೀಗಿದೆ ನೋಡಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.