ಬೇಸಿಗೆ ಆರಂಭವಾದರೆ ಸಾಕು ಹೆಚ್ಚಿನ ಜನರು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಬಯಸುತ್ತಾರೆ. ಚಾರಣ, ಸಮುದ್ರ ತೀರಗಳಿಗೆ ತೆರಳುವುದೆಲ್ಲ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಮೈಮರೆತು ಬಿರು ಬಿಸಿಲಿನಲ್ಲಿ ಹೆಚ್ಚು ಓಡಾಟ ಮಾಡಿದರೆ ಅಥವಾ ಸುಡು ಬಿಸಿಲಿಗೆ ಮೈಯೊಡ್ಡಿದರೆ ಸ್ಕಿನ್ ಟ್ಯಾನ್ ಆಗುವ ಸಾಧ್ಯತೆ ಹೆಚ್ಚು. ಆದರೆ, ಇಂತಹ ಸ್ಕಿನ್ ಟ್ಯಾನಿಂಗ್‌ನಿಂದ ತಪ್ಪಿಸಿಕೊಳ್ಳುವುದು ಸುಲಭ. ಮನೆಯಲ್ಲೇ ಮಾಸ್ಕ್ ತಯಾರಿಸಿ ಈ ಟ್ಯಾನಿಂಗ್‌ನಿಂದ ತ್ವಚೆಯ ರಕ್ಷಣೆ ಪಡೆಯಬಹುದು.
ಸನ್ ಟ್ಯಾನ್ ರಿಮೂವ್ ಫೇಸ್ ಮಾಸ್ಕ್:ಸನ್ ಟ್ಯಾನ್ ಸಮಸ್ಯೆ ಹೋಗಲಾಡಿಸುವಲ್ಲಿ ನಿಂಬೆ ರಸದ ಪ್ಯಾಕ್ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ನಿಂಬೆ ರಸದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ತ್ವಚೆಯನ್ನು ತೆಳುವಾಗಿಯೂ ಕಾಂತಿಯುತವಾಗಿಯೂ ಇರಿಸಲು ಬಹಳಷ್ಟು ಸಹಾಯಕಾರಿ.
ತಯಾರಿಸುವುದು ಹೇಗೆ?: ಒಂದು ಚಮಚ ನಿಂಬೆ ರಸ ತೆಗೆದುಕೊಂಡು ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದನ್ನು ನಿಮ್ಮ ಮುಖದ ಮೇಲೆ ಹಚ್ಚಿ ಮತ್ತು ಹತ್ತು ನಿಮಿಷಗಳ ಕಾಲ ಇರಿಸಿ. ನಂತರ ನೀರಿನಿಂದ ತೊಳೆಯಿರಿ.
ಅರಿಶಿಣ, ಮೊಸರು ಫೇಸ್ ಪ್ಯಾಕ್:ಟ್ಯಾನ್ ತೆಗೆದುಹಾಕಲು ಅತ್ಯಂತ ಪರಿಣಾಮಕಾರಿ ಫೇಸ್ ಪ್ಯಾಕ್‌ಗಳಲ್ಲಿ ಇದೂ ಒಂದು. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆ್ಯಸಿಡ್ ತ್ವಚೆಯನ್ನು ಮೃದುವಾಗಿ ಮತ್ತು ತೇವವಾಗಿಡುವುದಲ್ಲದೇ ಮುಖದ ಹೊಳಪು ಹೆಚ್ಚಿಸುತ್ತದೆ ಎನ್ನುತ್ತಾರೆ ತಜ್ಞರು. ಇದು ಸನ್ ಟ್ಯಾನ್ ತೆಗೆದುಹಾಕುತ್ತದೆ ಎಂದು ಕೂಡ ಹೇಳಲಾಗುತ್ತದೆ. ಅರಿಶಿಣದ ನೈಸರ್ಗಿಕ ಗುಣಗಳು ಚರ್ಮವನ್ನು ಹಗುರಗೊಳಿಸಲು ನೆರವಾಗುತ್ತದೆ.
ಈ ಪ್ಯಾಕ್ ತಯಾರಿಕೆ ಹೇಗೆ?:ಮೊದಲು ಒಂದು ಬೌಲ್‌ನಲ್ಲಿ ಎರಡು ಚಮಚ ಮೊಸರು ತೆಗೆದುಕೊಂಡು ಒಂದು ಚಮಚ ಅರಿಶಿಣ ಸೇರಿಸಿ ಮಿಶ್ರಣ ಮಾಡಿ. ನಂತರ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ 15 ನಿಮಿಷಗಳ ಕಾಲ ಇರಿಸಿ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
ಕಡಲೆ ಹಿಟ್ಟು, ಅರಿಶಿಣ ಮತ್ತು ಮೊಸರು ಫೇಸ್ ಪ್ಯಾಕ್:ಇದು ಸನ್ ಟ್ಯಾನ್ ಹೋಗಲಾಡಿಸಲು ತುಂಬಾ ಉಪಯುಕ್ತ ಎಂದು ತಜ್ಞರು ಹೇಳುತ್ತಾರೆ. ಅಲ್ಲದೇ ಕಡಲೆ ಹಿಟ್ಟು ತ್ವಚೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಬ್ಲೀಚಿಂಗ್ ಗುಣಗಳನ್ನು ಹೊಂದಿದೆ.
ಹೀಗೆ ತಯಾರಿಸಿ:ಒಂದು ಬೌಲ್‌ನಲ್ಲಿ 1/4 ಚಮಚ ಅರಿಶಿಣ, 2 ಚಮಚ ಮೊಸರು ಮತ್ತು ಒಂದು ಚಮಚ ಕಡಲೆ ಹಿಟ್ಟು ತೆಗೆದುಕೊಂಡು ಮೃದುವಾದ ಪೇಸ್ಟ್‌ನಂತೆ ತಯಾರಿಸಿ. ನಂತರ ಅದನ್ನು ಮುಖಕ್ಕೆ ಹಚ್ಚಿ ಮತ್ತು ಸಂಪೂರ್ಣವಾಗಿ ಒಣಗುವವರೆಗೂ ಇರಿಸಿ. ಅದರ ನಂತರ ನಿಮ್ಮ ಮುಖವನ್ನು ತಂಪಾದ ನೀರಿನಿಂದ ತೊಳೆಯಿರಿ. ಈ ಫೇಸ್ ಮಾಸ್ಕ್‌ಗಳಿಂದ ಸುಲಭವಾಗಿ ಆರೋಗ್ಯಕರ ಹಾಗೂ ಸುಂದರ ತ್ವಚೆ ಪಡೆಯಬಹುದು.
ಸೇಬಿನ ಪೇಸ್ಟ್:ಸಿಪ್ಪೆ ಸುಲಿದ ಸೇಬನ್ನು ಮಿಕ್ಸರ್‌ಗೆ ಸೇರಿಸಿ ಮತ್ತು ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಒಂದು ಕಪ್‌ನಲ್ಲಿ ತೆಗೆದುಕೊಂಡು ಅದರಲ್ಲಿ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಬಾರ್ಲಿ ಹಿಟ್ಟನ್ನು ಮಿಶ್ರಣ ಮಾಡಿ. ಮಿಶ್ರಣ ಮಾಡಿದ ನಂತರ, ಮಿಶ್ರಣವನ್ನು ಟ್ಯಾನ್ ಪ್ರದೇಶದ ಮೇಲೆ ಅನ್ವಯಿಸಬೇಕು. ಇದನ್ನು ಮಾಡಿದ ನಂತರ 20 ನಿಮಿಷಗಳ ಕಾಲ ಇರಿಸಿ. ನಂತರ ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಕೆಲವೇ ತಿಂಗಳುಗಳಲ್ಲಿ ಉತ್ತಮ ಫಲಿತಾಂಶವನ್ನು ಕಾಣಬಹುದು. ಇದು ಆಗದೇ ಇದ್ದಲ್ಲಿ ಸೇಬು, ಬಾರ್ಲಿ ಹಿಟ್ಟಿನ ಬದಲಿಗೆ ಅಕ್ಕಿಹಿಟ್ಟು, ಆಲೂಗಡ್ಡೆ ಪೇಸ್ಟ್ ಕೂಡಾ ಬಳಸಬಹುದಾಗಿದೆ.
ಇದನ್ನೂ ಓದಿ:ಹೋಳಿ ಹಬ್ಬದಲ್ಲಿ ಯಾವ ಬಣ್ಣ ಬಳಸುತ್ತಿದ್ದೀರಿ: ಇವುಗಳನ್ನು ಉಪಯೋಗಿಸಿದ್ರೆ ನಿಮ್ಮ ಕಥೆ ಅಷ್ಟೇ! - Holi Colours Harmful Side Effects