ನಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಒಳ್ಳೆಯ ಆಹಾರವನ್ನು ಸೇವಿಸುವುದು ಎಷ್ಟು ಮುಖ್ಯವೋ ಹಾಗೆಯೇ ನಾವು ಅಡುಗೆಯಲ್ಲಿ ಬಳಸುವ ಎಣ್ಣೆಯೂ ಪ್ರಮುಖವಾಗಿರುತ್ತದೆ. ಕೆಲವರು ತೆಂಗಿನ ಎಣ್ಣೆ, ಇನ್ನೂ ಕೆಲವರು ಪಾಮ್ ಆಯಿಲ್, ಕೆಲವರು ಸನ್ ಫ್ಲವರ್ ಬೀಜದ ಎಣ್ಣೆ, ಇನ್ನೂ ಕೆಲವರು ಶೇಂಗಾ ಎಣ್ಣೆ, ಸಾಸಿವೆ ಎಣ್ಣೆಗಳನ್ನು ಅಡುಗೆಯಲ್ಲಿ ಬಳಸುತ್ತಾರೆ. ಹಾಗಾದರೆ ಈ ಸಾಸಿವೆ ಎಣ್ಣೆಯನ್ನು ಅಡುಗೆಯಲ್ಲಿ ಬಳಸುವುದರಿಂದ ಆಗುವ ಪ್ರಯೋಜನೆಗಳು ಏನು? ಸಾಸಿವೆ ಎಣ್ಣೆಯಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆಯಾ? ಅಥವಾ ಕಡಿಮೆಯಾಗುತ್ತದೆಯಾ? ಈ ಎಣ್ಣೆ ಬಳಸಿದರೆ ನಿಮ್ಮ ಆರೋಗ್ಯ ಹೇಗಿರುತ್ತದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ..
ಸಾಸಿವೆ ಎಣ್ಣೆಯಲ್ಲಿ ಹೆಚ್ಚಿನ ಪ್ರಮಾಣದ ಮೊನೊಸಾಚುರೇಟೆಡ್ ಮತ್ತು ಬಹುಅಪರ್ಯಾಪ್ತ ( polyunsaturated fats) ಕೊಬ್ಬುಗಳಿವೆ. ಇವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿವೆ ಎಂದ ತಜ್ಞರು ಹೇಳುತ್ತಾರೆ.
ಸಾಸಿವೆ ಎಣ್ಣೆಯ ಆರೋಗ್ಯ ಪ್ರಯೋಜನಗಳು:ಪ್ರತಿ ಅಡುಗೆ ಮನೆಯಲ್ಲಿ ಈ ಎಣ್ಣೆ ಇಲ್ಲದೇ ಅಡುಗೆ ಪೂರ್ಣಗೊಳ್ಳುವುದು ಬಹಳ ಅಪರೂಪ. ಹೆಚ್ಚಿನ ಜನರು ತಮ್ಮ ಆಹಾರದಲ್ಲಿ ಸಂಸ್ಕರಿಸಿದ ಎಣ್ಣೆಯನ್ನು ಬಳಸುತ್ತಾರೆ. ಆದರೆ, ಸಾಸಿವೆ ಎಣ್ಣೆಯಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಶುದ್ಧ ಮತ್ತು ಕಚ್ಚಾ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲಗಳು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಸಾಸಿವೆ ಎಣ್ಣೆ ಎಷ್ಟು ಪ್ರಯೋಜನಕಾರಿ?: ಸಾಸಿವೆ ಎಣ್ಣೆಯಲ್ಲಿರುವ ಗುಣಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಸಾಸಿವೆ ಎಣ್ಣೆಯಲ್ಲಿ ಪ್ರೋಟೀನ್, ಖನಿಜಗಳು, ಕಾರ್ಬೋಹೈಡ್ರೇಟ್‌ಗಳು, ಕ್ಯಾಲೋರಿಗಳು, ವಿಟಮಿನ್ ಎ ಮತ್ತು ವಿಟಮಿನ್ ಸಿ ಇರುತ್ತವೆ. ಇಷ್ಟು ಮಾತ್ರವಲ್ಲದೇ ಸಾಸಿವೆ ಎಣ್ಣೆಯಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಮಿನ್ ಇ ಮತ್ತು ಒಮೆಗಾ 5 ಕೊಬ್ಬಿನಾಮ್ಲಗಳು ಇವೆ. ಸಾಸಿವೆ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸಹ ಕಂಡುಬರುತ್ತವೆ ಎಂದು ತಜ್ಞರು ಹೇಳುತ್ತಾರೆ.
ಕೊಲೆಸ್ಟ್ರಾಲ್ ಕಡಿಮೆ ಮಾಡುವ ಸಾಸಿವೆ ಎಣ್ಣೆ: ಇಂದು ಪ್ರತಿಯೊಬ್ಬರಲ್ಲೂ ಕೊಲೆಸ್ಟ್ರಾಲ್ ವೇಗವಾಗಿ ಹೆಚ್ಚುತ್ತಿದೆ. ಆದ್ದರಿಂದ ಅಡುಗೆ ಎಣ್ಣೆಯ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಸಂಸ್ಕರಿಸಿದ ಮತ್ತು ಇತರ ಅಡುಗೆ ಎಣ್ಣೆಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ. ಆದರೆ ಸಾಸಿವೆ ಎಣ್ಣೆಯಲ್ಲಿ ಕಡಿಮೆ ಸ್ಯಾಚುರೇಟೆಡ್ ಕೊಬ್ಬು ಇವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.