ETV Bharat / business

ನೀವು 10 ವರ್ಷ ಕೆಲಸ ಮಾಡಿದ್ದೀರಾ?: ಇನ್ಮುಂದೆ ಪ್ರತಿ ತಿಂಗಳು ಬರುತ್ತೆ ಇಷ್ಟು ಕನಿಷ್ಠ ಇಪಿಎಫ್ ಪಿಂಚಣಿ ಹಣ - EPFO PENSION WITH 10 YEARS SERVICE

ಕನಿಷ್ಠ 10 ವರ್ಷಗಳ ಕಾಲ ಕೆಲಸ ಮಾಡಿದರೆ ಇಪಿಎಸ್ ಪಿಂಚಣಿ ಸೌಲಭ್ಯ - ತಿಂಗಳಿಗೆ ರೂ.1,000 ರಿಂದ ರೂ.7,500 ವರೆಗೆ ಪಿಂಚಣಿ ಪಡೆಯುವ ಸಾಧ್ಯತೆ

epfo-pension-how-much-pension-will-you-get-under-eps
ನೀವು 10 ವರ್ಷ ಕೆಲಸ ಮಾಡಿದ್ದೀರಾ?: ಇನ್ಮುಂದೆ ಪ್ರತಿ ತಿಂಗಳು ಬರುತ್ತೆ ಇಷ್ಟು ಕನಿಷ್ಠ ಇಪಿಎಫ್ ಪಿಂಚಣಿ ಹಣ (ETV Bharat)
author img

By ETV Bharat Karnataka Team

Published : Jan 19, 2025, 2:35 PM IST

EPFO PENSION WITH 10 YEARS SERVICE: ನೌಕರರ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್​​​​ಒ,ನೌಕರರ ಪಿಂಚಣಿ ಯೋಜನೆ ಇಪಿಎಸ್ ನಿರ್ವಹಣೆ ಮಾಡುತ್ತಿದೆ. ನವೆಂಬರ್ 16, 1995 ರಿಂದ ಜಾರಿಯಲ್ಲಿರುವ ಈ ಯೋಜನೆಯ ಮೂಲಕ ನೌಕರರು ಪ್ರತಿ ತಿಂಗಳು ಪಿಂಚಣಿ ಪಡೆಯುತ್ತಿದ್ದಾರೆ. ಅಂದ ಹಾಗೆ ಮಾಸಿಕ ಪಿಂಚಣಿ ಎಷ್ಟು ಇರಬೇಕು? ಉದ್ಯೋಗಿ ಪಡೆದ ಸೇವೆಯ ಅವಧಿ ಮತ್ತು ಸಂಬಳದ ಆಧಾರದ ಮೇಲೆ ಆತನ ಪಿಂಚಣಿ ನಿರ್ಧಾರವಾಗುತ್ತದೆ. ಕನಿಷ್ಠ ಹತ್ತು ವರ್ಷ ಕೆಲಸ ಮಾಡಿದವರು ಮಾತ್ರ ಇಪಿಎಸ್ ಪಿಂಚಣಿಗೆ ಅರ್ಹರಾಗಿರುತ್ತಾರೆ.

ಉದ್ಯೋಗಿಯೊಬ್ಬ ಈ ಸೌಲಭ್ಯ ಪಡೆಯಲು ಕಂಪನಿಯಲ್ಲಿ ಕೆಲಸ ಮಾಡಿದ ವರ್ಷಗಳವರೆಗೆ ಇಪಿಎಸ್ ಯೋಜನೆಗೆ ಮಾಸಿಕ ಪಾವತಿಗಳನ್ನು ಮಾಡಿರಬೇಕಾಗುತ್ತದೆ. ನೌಕರರ ಮೂಲ ವೇತನದ ಶೇಕಡಾ 12 ರಷ್ಟು ಮತ್ತು ಸಂಬಂಧಪಟ್ಟ ಕಂಪನಿಯ ಬ್ಯಾಂಕ್ ಖಾತೆಯಿಂದ ಸಮಾನ ಮೊತ್ತವನ್ನು ಪ್ರತಿ ತಿಂಗಳು ಇಪಿಎಸ್ ಯೋಜನೆಗೆ ಪಾವತಿಸಬೇಕು. ಕಂಪನಿಯು ಪಾವತಿಸುವ ಶೇ 12ರಷ್ಟು ಹಣದಲ್ಲಿ , 8.33 ಪ್ರತಿಶತವನ್ನು ಇಪಿಎಸ್‌ಗೆ ಮತ್ತು ಶೇ 3.67ರಷ್ಟು ಇಪಿಪಿ ಯೋಜನೆಗೆ ಪಾವತಿಸಲಾಗುತ್ತಿದೆ.

ನಿವೃತ್ತಿಯ ನಂತರ ಉದ್ಯೋಗಿಗೆ ತಿಂಗಳಿಗೆ ಕನಿಷ್ಠ ರೂ.1,000 ಮತ್ತು ತಿಂಗಳಿಗೆ ಗರಿಷ್ಠ ರೂ.7,500 ನೀಡಲಾಗುತ್ತದೆ. 58ನೇ ವರ್ಷದಿಂದ ಈ ಪಿಂಚಣಿ ಲಭ್ಯವಾಗಲಿದೆ. ಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ನಿವೃತ್ತಿಯ ನಂತರ ಇಪಿಎಸ್ ಯೋಜನೆಯಿಂದ ಈ ಪ್ರಯೋಜನ ಪಡೆಯಬಹುದು. ಆದರೆ, ಕೇವಲ ಹತ್ತು ವರ್ಷ ಕೆಲಸ ಮಾಡಿ ಕೆಲಸ ಬಿಟ್ಟಿದ್ದರೆ, ಪಿಂಚಣಿ ಎಷ್ಟು ಬರುತ್ತದೆ? ಇಪಿಎಸ್ ಮಾಸಿಕ ಪಿಂಚಣಿ ಲೆಕ್ಕಾಚಾರದ ಸೂತ್ರವೇನು ಎಂಬುದನ್ನು ಈಗ ತಿಳಿದುಕೊಳ್ಳೋಣ.

ಮಾಸಿಕ ಪಿಂಚಣಿ =(ಕಳೆದ 60 ತಿಂಗಳ ಸಂಬಳದ ಸರಾಸರಿ ಮೊತ್ತ × ಇಪಿಎಸ್‌ಗೆ ಕೊಡುಗೆಗಳ ವರ್ಷಗಳು) / 70

ಉದಾಹರಣೆಗೆ, ಕಳೆದ 60 ತಿಂಗಳಲ್ಲಿ ಉದ್ಯೋಗಿಯ ಸರಾಸರಿ ವೇತನ ರೂ.15 ಸಾವಿರ ಎಂದು ಭಾವಿಸೋಣ. ಅವರು ನಿಖರವಾಗಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಎಂದು ಭಾವಿಸೋಣ. ನಂತರ ಮಾಸಿಕ ಪಿಂಚಣಿ => (ರೂ.15,000 × 10) / 70 = ರೂ.2,143 ಆಗಿರುತ್ತದೆ.

ಉದ್ಯೋಗಿ ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿದರೆ, ಮಾಸಿಕ ಪಿಂಚಣಿ ಮೊತ್ತವನ್ನು ಹೆಚ್ಚಿಸಿಕೊಂಡು ಹೋಗಲಾಗುತ್ತದೆ.

ಇಪಿಎಸ್ ಪಿಂಚಣಿ ವಿಧಗಳು

  • ನಿವೃತ್ತಿ ಪಿಂಚಣಿ: ಈ ಪಿಂಚಣಿಯು 58 ವರ್ಷಗಳು ಪೂರ್ಣಗೊಂಡಾಗ ಲಭ್ಯ ಇರುತ್ತದೆ.
  • ಮುಂಗಡ ಪಿಂಚಣಿ: 50 ರಿಂದ 58 ವರ್ಷ ವಯಸ್ಸಿನ ಜನರು ಈ ಪಿಂಚಣಿ ಪಡೆಯುತ್ತಾರೆ. ಆದಾಗ್ಯೂ ಕೆಲವು ಕಡಿತಗಳನ್ನು ಮಾಡಲಾಗುತ್ತದೆ.
  • ವಿಧವಾ ಪಿಂಚಣಿ: ಮೃತ ನೌಕರನ ಸಂಗಾತಿಗೆ ಈ ಪಿಂಚಣಿ ನೀಡಲಾಗುತ್ತದೆ.
  • ಮಕ್ಕಳ ಪಿಂಚಣಿ: ಮೃತ ನೌಕರನ ಮಕ್ಕಳು ಈ ಪಿಂಚಣಿಗೆ ಅರ್ಹರಾಗಿರುತ್ತಾರೆ.
  • ಅನಾಥ ಪಿಂಚಣಿ: ತಂದೆ - ತಾಯಿಯನ್ನು ಕಳೆದುಕೊಂಡವರಿಗೆ ಈ ಪಿಂಚಣಿ ಲಭ್ಯವಿದೆ.
  • ಅಂಗವಿಕಲರ ಪಿಂಚಣಿ: ಶಾಶ್ವತವಾಗಿ ಅಂಗವಿಕಲರಾದವರಿಗೆ ಈ ಪಿಂಚಣಿ ನೀಡಲಾಗುತ್ತದೆ.

ಮುಂಗಡ ನಿವೃತ್ತಿ ಸೌಲಭ್ಯ ಪಡೆಯುವುದು ಹೇಗೆ?: ಕೆಲವರು 58 ವರ್ಷಕ್ಕಿಂತ ಮೊದಲು ಮಾಸಿಕ ಇಪಿಎಸ್ ಪಿಂಚಣಿ (ಆರಂಭಿಕ ಪಿಂಚಣಿ) ಪಡೆಯಲು ಬಯಸುತ್ತಾರೆ. ಪಿಂಚಣಿ ಪಡೆಯಲು ಅರ್ಹರಾಗಿರುವ ನೌಕರರು ಕನಿಷ್ಠ 50 ವರ್ಷ ಪೂರೈಸಿರಬೇಕು. ಕನಿಷ್ಠ ಹತ್ತು ವರ್ಷ ಕೆಲಸ ಮಾಡಿರಬೇಕು. ನಿವೃತ್ತಿ ಮುಂಚಿನ ಪಿಂಚಣಿ ತೆಗೆದುಕೊಳ್ಳುವುದರಿಂದ ಪ್ರತಿ ವರ್ಷ ಪಿಂಚಣಿ ಮೊತ್ತದಲ್ಲಿ 4 ಪ್ರತಿಶತದಷ್ಟು ಕಡಿತವಾಗುತ್ತದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು.

ಇದರಿಂದ ನಮಗೆ ಬರಬೇಕಾದ ಮಾಸಿಕ ಪಿಂಚಣಿ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ಇದಲ್ಲದೇ, ಇಪಿಎಸ್ ಪಿಂಚಣಿ ಹೆಚ್ಚಿಸಲು ಕೆಲವು ಮಾರ್ಗಗಳಿವೆ. ನಿಮ್ಮ ಉದ್ಯೋಗದ ಅವಧಿಯು ಸಾಧ್ಯವಾದಷ್ಟು ಹೆಚ್ಚಿಸಿಕೊಳ್ಳಬೇಕು. ಅದು ಹೆಚ್ಚಾದಷ್ಟೂ ನಿಮಗೆ ಸಿಗುವ ಪಿಂಚಣಿ ಮೊತ್ತವೂ ಹೆಚ್ಚಾಗುತ್ತದೆ. ನಿವೃತ್ತಿಯ ಸಮಯದಲ್ಲಿ ನಿಮ್ಮ ಮಾಸಿಕ ಸಂಬಳ ಹೆಚ್ಚಾದಷ್ಟೂ ಪಿಂಚಣಿ ಹೆಚ್ಚಾಗುತ್ತದೆ. ಉದ್ಯೋಗ ಅವಧಿಯ ನಡುವೆ ಯಾವುದೇ ವಿರಾಮವಿಲ್ಲದೇ ಪಿಂಚಣಿ ಹಣ ಪ್ರತಿ ತಿಂಗಳು ಇಪಿಎಸ್ ಯೋಜನೆಯಲ್ಲಿ ಠೇವಣಿ ಮಾಡಿದಷ್ಟು ಉತ್ತಮ.

ನಿಮ್ಮ ಕಂಪನಿ ಏನಾದರೂ ಅನುಮತಿಸಿದರೆ 'ಉನ್ನತ ಪಿಂಚಣಿ ಯೋಜನೆ'ಗೆ ಅರ್ಜಿ ಸಲ್ಲಿಸಿ. ಇದರಿಂದ ನೀವು ಇಪಿಎಸ್ ಪಾವತಿಗೆ ಪ್ರತಿ ತಿಂಗಳು ನಿಮ್ಮ ಸಂಬಳದಿಂದ ಸ್ವಲ್ಪ ಹೆಚ್ಚು ಮೊತ್ತವನ್ನು ನಿಯೋಜಿಸಬಹುದು. ಈ ಸಲಹೆಗಳನ್ನು ಅನುಸರಿಸಿ ಮತ್ತು ನಿವೃತ್ತಿಯ ನಂತರ ನೀವು ಪ್ರತಿ ತಿಂಗಳು ಆಕರ್ಷಕ ಪಿಂಚಣಿ ಪಡೆಯುತ್ತೀರಿ. EPFO ಪೋರ್ಟಲ್‌ಗೆ ಹೋಗುವ ಮೂಲಕ ನಿಮ್ಮ ಇಪಿಎಸ್ ಪಿಂಚಣಿ ನೀವು ಪರಿಶೀಲಿಸಬಹುದು.

EPSನ ಪ್ರಯೋಜನಗಳು:

  • ಇಪಿಎಸ್ ಮೂಲಕ, 58 ವರ್ಷದ ಬಳಿಕ ನಿಮ್ಮ ಜೀವನದ ಉದ್ದಕ್ಕೂ ಪ್ರತಿ ತಿಂಗಳು ಆದಾಯ ಪಡೆಯಬಹುದು.
  • EPS ಸದಸ್ಯರು ಮರಣ ಹೊಂದಿದರೆ, ಕುಟುಂಬ/ನಾಮನಿರ್ದೇಶಿತರು ಪಿಂಚಣಿ ಹಣ ಪಡೆಯುತ್ತಾರೆ.
  • ಇಪಿಎಸ್ ಸದಸ್ಯ ಅಂಗವೈಕಲ್ಯದ ಸಂದರ್ಭದಲ್ಲಿ ಹೆಚ್ಚುವರಿ ಪಿಂಚಣಿ ಪಡೆಯುತ್ತಾನೆ.
  • ನೀವು ತೆರಿಗೆ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇಪಿಎಸ್ ಪಿಂಚಣಿಗೆ ಆದಾಯ ತೆರಿಗೆ ವಿನಾಯಿತಿ ಇದೆ

ಇದನ್ನು ಓದಿ: ದಾಖಲೆಯ ಕುಸಿತದ ಬಳಿಕ ಡಾಲರ್​ ಎದುರು ತುಸು ಚೇತರಿಸಿಕೊಂಡ ರೂಪಾಯಿ ಮೌಲ್ಯ; ಷೇರುಪೇಟೆಯಲ್ಲೂ ಏರಿಕೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.