Military Trick Sleep in Two Minutes:ಬದಲಾಗುತ್ತಿರುವ ಆಧುನಿಕ ಜೀವನಶೈಲಿಯಿಂದಾಗಿ ಅನೇಕ ಜನರು ತಮ್ಮ ಹಲವು ಪ್ರಯತ್ನಗಳ ಹೊರತಾಗಿಯೂ ರಾತ್ರಿಯ ನಿದ್ರೆ ಮಾಡಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ನಮಗೇ ಇಂತಹ ಸಮಸ್ಯೆ ಎದುರಾದರೆ ದೇಶದ ಗಡಿಯಲ್ಲಿ ಸದಾ ಜಾಗೃತರಾಗಿರುವ ಸೈನಿಕರ ಪರಿಸ್ಥಿತಿ ಹೇಗೆ? ಅದಕ್ಕಾಗಿಯೇ ಸೈನಿಕರು ಕೆಲವೇ ಕ್ಷಣಗಳಲ್ಲಿ ನಿದ್ದೆಗೆ ಜಾರಲು ಸಂಶೋಧಕರು ಸಂಶೋಧನೆಯೊಂದನ್ನು ಕೈಗೊಂಡಿದ್ದಾರೆ. ಇದರ ಪರಿಣಾಮವಾಗಿ ಮಿಲಿಟರಿ ನಿದ್ರೆ ಎಂಬ ಈ ವಿಧಾನವನ್ನು ಅನ್ವೇಷಣೆ ಮಾಡಲಾಯಿತು. ಇದನ್ನು ಅನುಸರಿಸಿದರೆ ಸಾಕು ಎರಡೇ ನಿಮಿಷದಲ್ಲಿ ಸುಲಭವಾಗಿ ಗಾಢ ನಿದ್ದೆಗೆ ಜಾರಬಹುದು ಎನ್ನುತ್ತಾರೆ ಸಂಶೋಧಕರು.
ನಿದ್ರಾಹೀನತೆ ಸಮಸ್ಯೆಯನ್ನು ಸಂಶೋಧನೆ ನಡೆಸಿ ಹಾಗೂ ಚಿಕಿತ್ಸೆ ನೀಡುವ ಡಾ. ಬ್ರಿಯಾನ್ ಅವರು, ''ಈ ಮಿಲಿಟರಿ ನಿದ್ರೆ ವಿಧಾನವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ'' ಎಂದು ವಿವರಿಸುತ್ತಾರೆ. 2017ರಲ್ಲಿ ನ್ಯಾಷನಲ್ ಸೆಂಟರ್ ಫಾರ್ ಕಾಂಪ್ಲಿಮೆಂಟರಿ ಅಂಡ್ ಇಂಟಿಗ್ರೇಟಿವ್ ಹೆಲ್ತ್ (National Center for Complementary and Integrative Health) ಪ್ರಕಟಿಸಿದ ಅಧ್ಯಯನದಿಂದ ಮಿಲಿಟರಿ ಸಿಬ್ಬಂದಿಗಾಗಿ ನಿದ್ರೆ ಹಾಗೂ ವಿಶ್ರಾಂತಿ ತಂತ್ರಗಳನ್ನು (Sleep and Relaxation Techniques for Military Personnel) ಕಂಡುಕೊಳ್ಳಲಾಗಿದೆ. ಹಲವು ಪ್ರಯೋಗಗಳ ಫಲವಾಗಿರುವ ಈ ಟೆಕ್ನಿಕ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ವೈರಲ್ ಆಗಿದೆ. ಹಾಗಾದ್ರೆ ಮತ್ತೇಕೆ ವಿಳಂಬ 'ಮಿಲಿಟರಿ ಟ್ರಿಕ್' ಬಗ್ಗೆ ಸಂಪೂರ್ಣವಾಗಿ ತಿಳಿಯೋಣ.
ಮಿಲಿಟರಿ ಟ್ರಿಕ್ ಪ್ರಕಾರ ನಿದ್ರೆಗೆ ಜಾರುವುದು ಹೇಗೆ?
ಈ ಮಿಲಿಟರಿ ನಿದ್ರೆಯ ಟ್ರಿಕ್ ಪ್ರಕಾರ, ಮೊದಲು ನಿಮ್ಮ ಕಣ್ಣುಗಳನ್ನು ಮುಚ್ಚಿ, ಎರಡೂ ಕೈಗಳನ್ನು ನಿಮ್ಮ ಪಕ್ಕದಲ್ಲಿ ಇರಿಸಿ ಮತ್ತು ನಿಮ್ಮ ಹೃದಯದಿಂದ ನಿಧಾನವಾಗಿ ಉಸಿರಾಡಬೇಕು. ಅದಾದ ನಂತರ ಭುಜ ಹಾಗೂ ಕೈಗಳನ್ನು ಸಡಿಲಗೊಳಿಸಬೇಕು. ಅದರ ನಂತರ ವಿಶ್ರಾಂತಿ ಮೋಡ್‌ಗೆ ಹೋಗಿ ಇದರಿಂದ ದೇಹದ ಎಲ್ಲಾ ಸ್ನಾಯುಗಳು ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ. ಇದರ ಪರಿಣಾಮವಾಗಿ ಒತ್ತಡವು ಕ್ರಮೇಣವಾಗಿ ಕಡಿಮೆಯಾಗಲು ಸಾಧ್ಯವಾಗುತ್ತದೆ. ಅದಾದ ನಂತರ, ನಿಮ್ಮ ಮನಸ್ಸನ್ನು ಕಾಲ್ಪನಿಕ ಜಗತ್ತಿನಲ್ಲಿ ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ಶಾಂತ ವಾತಾವರಣದಲ್ಲಿ ನೀಲಿ ಆಕಾಶದ ಕೆಳಗೆ ಹುಲ್ಲುಗಾವಲಿನಲ್ಲಿ ಏಕಾಂಗಿಯಾಗಿ ಮಲಗುವುದನ್ನು ಅಥವಾ ಕತ್ತಲೆಯ ಕೋಣೆಯಲ್ಲಿ ಆರಾಮದಾಕವಾಗಿ ತೂಗಾಡುವುದನ್ನು ಕಲ್ಪಿಸಿಕೊಳ್ಳಬೇಕಾಗುತ್ತದೆ. ಇದು ವಿಶ್ರಾಂತಿ ತಂತ್ರವೆಂದು ಹೇಳಲಾಗುತ್ತದೆ ಹಾಗೂ ಮನಸ್ಸಿನಿಂದ ನಕಾರಾತ್ಮಕ ಆಲೋಚನೆಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ನೆಮ್ಮದಿಯ ನಿದ್ರೆ ಬರುತ್ತದೆ ಎನ್ನುತ್ತಾರೆ ಸಂಶೋಧಕರು.