ಹೈದರಾಬಾದ್: ಋತುಚಕ್ರದ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ಸ್ಗೆ ಬದಲಾಗಿ ಬಳಕೆ ಮಾಡುವ ಮುಟ್ಟಿನ ಕಪ್ಗಳು ಆರಾಮದಾಯಕವಾಗಿದ್ದು, ಆರೋಗ್ಯ ಪ್ರಯೋಜನ ಹೊಂದಿದೆ. ಈ ಮುಟ್ಟಿನ ಕಪ್ ಅನ್ನು ಬಿಹಾರ ರಾಜ್ಯಕ್ಕೆ ಹೊಸದಾಗಿದೆ. ದೇಶದ ಕೆಲವು ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಈ ಮುಟ್ಟಿನ ಕಪ್ ಬಳಕೆ ಕುರಿತು ಇದೀಗ ಬಿಹಾರದ ಮಹಿಳೆಯರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ವೈದ್ಯರಾದ ಡಾ ವಿವೇಕಾನಂದ ಮಿಶ್ರಾ, ಮುಟ್ಟಿನ ಕಪ್ ಬಳಕೆ ಅನೇಕ ವಿಧದಲ್ಲಿ ಪ್ರಯೋಜನಕಾರಿಯಾಗಿದೆ. ಇದನ್ನು ಮಹಿಳೆಯರು ಸುಲಭವಾಗಿ ಬಳಕೆ ಮಾಡಬಹುದು. ಇದರ ಬಹು ಮುಖ್ಯ ಪ್ರಯೋಜನ ಎಂದರೆ ಇದು ಸೋಂಕು ತಗ್ಗಿಸುತ್ತದೆ. ಯಾವುದೇ ರೀತಿಯ ಮಹಿಳಾ ಕಾರ್ಮಿಕರು ಇದನ್ನು ಆರಾಮದಾಯಕವಾಗಿ ಬಳಸಬಹುದು.
ಮುಟ್ಟಿನ ಕಪ್ ಪ್ರಯೋಜನ: ಇದರ ಬಳಕೆಯಿಂದ ಹಲವು ಪ್ರಯೋಜವಿದೆ. 300 ರಿಂದ 400 ರೂನಲ್ಲಿ ಇದು ಲಭ್ಯವಿದೆ. ಇದನ್ನು 10 ವರ್ಷಗಳ ಕಾಲ ಬಳಕೆ ಮಾಡಬಹುದು. ಇದರಿಂದ ದುಬಾರಿ ಸ್ಯಾನಿಟರಿ ಪ್ಯಾಡ್ ಕೊಳ್ಳುವ ಹಣ ಉಳಿಯಲಿದೆ. ಜೊತೆಗೆ ಪದೇ ಪದೆ ಸ್ಯಾನಿಟರಿ ಪ್ಯಾಡ್ ಬದಲಾಯಿಸುವ ಕಿರಿ ಕಿರಿ ತಪ್ಪಲಿದೆ. ಸಿಲಿಕಾನ್ನಿಂದ ಮಾಡಲಾದ ಈ ಕಪ್ಗಳು ಮೃದುವಾಗಿದ್ದು, ಋತುಚಕ್ರ ಸಮಯದಲ್ಲಿ ಬಳಕೆ ಮಾಡುವಾಗ ಯಾವುದೇ ಕಿರಿಕಿರಿ ಉಂಟು ಮಾಡುವುದಿಲ್ಲ.
ಸಂಪೂರ್ಣವಾಗಿ ತಿಳಿದು ಬಳಸಿ: ಋತುಚಕ್ರದ ಸಮಯದಲ್ಲಿ ಇದನ್ನು ಹೇಗೆ ಬಳಕೆ ಮಾಡಬೇಕು. ಎಂಬ ಮಾಹಿತಿ ತಿಳಿಯುವುದು ಅವಶ್ಯವಾಗಿದೆ. ಇದರ ಬಳಕೆಯು ಋತುಚಕ್ರ ಸಮಯದಲ್ಲಿ ಉಂಟಾಗುವ ಸೋಂಕಿನಂತ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಅನೇಕ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಪ್ಯಾಡ್ ತ್ಯಾಜ್ಯಗಳ ವಿಲೇವಾರಿ ಸಮಸ್ಯೆಯನ್ನು ಇದು ತಪ್ಪಿಸುತ್ತದೆ. ಈ ಮುಟ್ಟಿನ ಕಪ್ ಅನ್ನು ಚೆನ್ನಾಗಿ ಸ್ಟಿರೆಲೈಜ್ ಮಾಡಿದ ಬಳಿಕವೇ ಮಾಡುವುದು ಅವಶ್ಯ.