Low Blood Pressure:ಅಧಿಕ ರಕ್ತದೊತ್ತಡವನ್ನು ಎಲ್ಲರೂ ಅಪಾಯಕಾರಿ ಎಂದು ಪರಿಗಣಿಸುತ್ತಾರೆ. ಹೃದಯಾಘಾತದಿಂದ ಹಿಡಿದು ಪಾರ್ಶ್ವವಾಯು, ಕಿಡ್ನಿ ವೈಫಲ್ಯದವರೆಗೆ ಎಲ್ಲವೂ ಕಾರಣ ಎಂದು ಹೇಳಲಾಗುತ್ತದೆ. ಈ ಕ್ರಮದಲ್ಲಿ.. ಕಡಿಮೆ ರಕ್ತದೊತ್ತಡ ಇದ್ದರೆ ಒಳ್ಳೆಯದು ಎಂದು ಹಲವರು ನಂಬುತ್ತಾರೆ. ಆದ್ರೆ, ಲೋ ಬಿಪಿ ಕೂಡ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಹೈ - ಬಿಪಿ, ಲೋ-ಬಿಪಿ ಕೂಡ ಅಪಾಯಕಾರಿ ಎನ್ನುತ್ತಾರೆ ವೈದ್ಯರು. ಹಾಗಾದ್ರೆ.. ಬಿಪಿ ಯಾಕೆ ಹೆಚ್ಚುತ್ತದೆ? ಕಡಿಮೆ ರಕ್ತದೊತ್ತಡದಿಂದ ಯಾವೆಲ್ಲಾ ಸಮಸ್ಯೆಗಳು ಎದುರಾಗುತ್ತವೆ? ಬಿಪಿ ನಿಯಂತ್ರಣಕ್ಕೆ ತರಬೇಕಾದರೆ ವಹಿಸಬೇಕಾದ ಮುನ್ನೆಚ್ಚರಿಕೆಗಳೇನು? ಎಂಬುದನ್ನು ಇಲ್ಲಿ ತಿಳಿಯೋಣ.
ಸಾಮಾನ್ಯವಾಗಿ, 120/80 mmHg ಬಿಪಿ ಇರಬೇಕಾಗುತ್ತದೆ. ಆದರೆ, ಅದಕ್ಕಿಂತ ಹೆಚ್ಚಾದರೆ ಅದನ್ನು ಹೈ ಬಿಪಿ (ಅಧಿಕ ರಕ್ತದೊತ್ತಡ) ಎನ್ನುತ್ತಾರೆ. ಹಾಗೆಯೇ.. ಅದಕ್ಕಿಂತ ಕಡಿಮೆಯಾದರೆ ಲೋ-ಬಿಪಿ (ಹೈಪೋ ಟೆನ್ಷನ್) ಎನ್ನುತ್ತಾರೆ. ಇಲ್ಲದಿದ್ದರೆ.. ವೈದ್ಯಕೀಯವಾಗಿ 90/60 mmHg ಗಿಂತ ಕಡಿಮೆ ಇದ್ದರೆ ಲೋ-ಬಿಪಿ ಎಂದು ಪರಿಗಣಿಸಲಾಗುವುದು ಎನ್ನುತ್ತಾರೆ ಸಾಮಾನ್ಯ ವೈದ್ಯ ಡಾ.ಡಿ. ಪ್ರಮೋದ್ ಕುಮಾರ್.
ಲೋ ಬಿಪಿಗೆ ಕಾರಣಗಳೇನು?:ಬಿಪಿಗೆ ಹಲವು ಕಾರಣಗಳಿವೆ ಎನ್ನುತ್ತಾರೆ ಡಾ.ಪ್ರಮೋದ್ ಕುಮಾರ್. ಅದರಲ್ಲೂ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾದಾಗ ರಕ್ತದೊತ್ತಡ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಅಲ್ಲದೇ, ಗರ್ಭಾವಸ್ಥೆಯಲ್ಲಿ ಲೋ ಬಿಪಿ ಸಮಸ್ಯೆ ಬರುವ ಸಾಧ್ಯತೆಯೂ ಇದೆ. ಥೈರಾಯ್ಡ್ ಸಮಸ್ಯೆಗಳಿರುವ ಜನರಲ್ಲಿ ಹಾರ್ಮೋನ್ ಅಸಮತೋಲನದಿಂದಲೂ ಲೋ ಬಿಪಿ ಉಂಟಾಗುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾದಾಗಲೂ ಈ ಸಮಸ್ಯೆ ಬರುವ ಸಾಧ್ಯತೆ ಇದೆ ಎಂದು ಅವರು ತಿಳಿಸುತ್ತಾರೆ.