ಹೈದರಾಬಾದ್: ಒಬ್ಬಂಟಿತನ ಅಥವಾ ಏಕಾಂಗಿತನ ಎಂಬುದು ಕೇವಲ ಮನಸಿನ ಸ್ಥಿತಿಯಲ್ಲ. ಇದು ವ್ಯಕ್ತಿಯ ಜೀವನ ಮತ್ತು ಸಾವಿನ ವಿಚಾರದಲ್ಲೂ ಪ್ರಮುಖವಾದ ಪ್ರಭಾವ ಬೀರುವ ಅಂಶವಾಗಿದೆ. ಇದು ನಮ್ಮ ದೇಹ ಮತ್ತು ಆರೋಗ್ಯದ ಮೇಲೆ ಅಧಿಕ ಪರಿಣಾಮ ಬೀರುತ್ತದೆ ಎಂದು ಹಾರ್ವಡ್ ಯುನಿರ್ವಸಿಟಿಯ ಹೊಸ ಅಧ್ಯಯನ ತಿಳಿಸಿದೆ. ಏಕಾಂಗಿತನವೂ ವಯಸ್ಸಾದಂತೆ ಸಾಮಾನ್ಯ ಎನ್ನಲಾಗುತ್ತದೆ. ಆದರೆ, ಈ ಏಕಾಂಗಿತನವೂ ಮಧ್ಯಮ ವಯಸ್ಸಿನ ಮತ್ತು ಹಿರಿಯರಲ್ಲಿ ಗಂಭೀರ ಪಾರ್ಶ್ವವಾಯುವಿನ ಅಪಾಯಕ್ಕೆ ಕಾರಣವಾಗುತ್ತದೆ. ಅದರಲ್ಲೂ ದೀರ್ಘಕಾಲದ ಏಕಾಂಗಿತನ ಅನುಭವಿಸುತ್ತಿರುವವರಲ್ಲಿ ಇದರ ಸಾಧ್ಯತೆ ಅಧಿಕ ಇರುತ್ತದೆ ಎಂದಿದ್ದಾರೆ.
ಇತರರೊಂದಿಗೆ ನಾವು ಸಂಬಂಧಗಳು ಹೊರತಾಗಿ ವ್ಯಕ್ತಿಯೊಬ್ಬನಲ್ಲಿ ನಾನು ಒಬ್ಬನೇ ಏಕಾಂಗಿ ಎಂಬ ಭಾವ ಮೂಡುವುದೇ ಈ ಏಕಾಂಗಿತನವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, 45 ವರ್ಷದ ದಾಟಿದ ಮೂರರಲ್ಲಿ ಒಬ್ಬರು ಈ ರೀತಿಯ ಭಾವದಿಂದ ಬಳಲುತ್ತಿರುತ್ತಾರೆ. ಈ ಅಧ್ಯಯನಕ್ಕಾಗಿ 50 ವರ್ಷ ಮತ್ತು ಅಧಿಕ ವಯಸ್ಸಿನ 12 ಸಾವಿರ ಜನರ ಆರೋಗ್ಯ ಮಾಹಿತಿಯನ್ನು ಪಡೆದು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಭಾಗಿದಾರರಿಗೆ ನಿಮಗೆ ಯಾರೂ ಇಲ್ಲ. ಯಾರೂ ನಮ್ಮ ಬಗ್ಗೆ ಕಾಳಜಿವಹಿಸುವುದಿಲ್ಲ. ಏಕಾಂಗಿ ಎಂಬ ಭಾವ ಕಾಡುತ್ತದೆಯಾ? ಹಾಗೇ ನೀವು ಇತರರು ನಿಮ್ಮೊಂದಿಗೆ ಅಂತರ ಕಾಪಾಡುತ್ತಿದ್ದಾರೆ ಎನ್ನಿಸುತ್ತಿದೆಯಾ ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ.