ಜೀರಿಗೆ ನೀರು ಕುಡಿದರೆ ಶುಗರ್ ನಿಯಂತ್ರಣ, ತೂಕವೂ ಕಡಿಮೆಯಾಗುತ್ತೆ: ಸಂಶೋಧನೆ - JEERA WATER IN THE MORNING BENEFITS
Jeera Water Benefits for Weight Loss: ಬೆಳಗ್ಗೆ ಜೀರಿಗೆ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳು ಲಭಿಸುತ್ತವೆ. ಹೃದಯದ ಕಾಯಿಲೆಗಳು ಹಾಗೂ ಚರ್ಮದ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಜೀರಿಗೆ ನೀರು ಕುಡಿಯುವುದರಿಂದ ಲಭಿಸುವ ಲಾಭಗಳು (Getty Images)
Jeera Water Benefits for Weight Loss: ಪ್ರಸ್ತುತ ಅನೇಕ ಜನರು ಶುಗರ್ ಹಾಗೂ ಅಧಿಕ ತೂಕದ ಸಮಸ್ಯೆಗೆ ಒಳಗಾಗಿದ್ದಾರೆ. ಈ ಆರೋಗ್ಯದ ತೊಂದರೆ ಇರುವವರು ರಾತ್ರಿಯಿಡೀ ಜೀರಿಗೆ ನೀರಿನಲ್ಲಿ ನೆನೆಸಿ ಮರುದಿನ ನೀರನ್ನು ಕುಡಿಯಬೇಕು. ಇದರಿಂದ ತೂಕ ಇಳಿಕೆಯಾಗುವುದಲ್ಲದೇ, ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇಡಲು ಸಾಧ್ಯವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಜೀರಿಗೆ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ನಿಂಬೆ ರಸದೊಂದಿಗೆ ರಾತ್ರಿ ನೆನೆಸಿಟ್ಟ ಜೀರಿಗೆ ನೀರನ್ನು ಕುಡಿಯಬೇಕು. ಈ ರೀತಿ ಮಾಡುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಗೆ ಹೋಗುತ್ತವೆ. ಹೊಟ್ಟೆಯ ಸುತ್ತಲಿನ ಕೊಬ್ಬು ಕರಗುತ್ತದೆ ಎನ್ನುತ್ತಾರೆ ತಜ್ಞರು.
ಜೀರಿಗೆ ಚಯಾಪಚಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿನ ಕ್ಯಾಲೊರಿಗಳನ್ನು ಕರಗಿಸುತ್ತದೆ ಹಾಗೂ ತೂಕ ಇಳಿಸಲು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯಬೇಕು ಎಂದು ತಜ್ಞರು ಹೇಳುತ್ತಾರೆ.
ಪ್ರಮುಖವಾಗಿ ಜೀರಿಗೆಯಲ್ಲಿ ಥೈಮೋಲ್ ಹೇರಳವಾಗಿದೆ. ಜೀರ್ಣಕ್ರಿಯೆಗೆ ಸಮಸ್ಯೆಗಳನ್ನು ಪರಿಹರಿಸುತ್ತದೆ. ತೇಗುವಿಕೆ, ಅಜೀರ್ಣ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.
ಜೀರಿಗೆಯಲ್ಲಿರುವ ಆ್ಯಂಟಿ - ಆಕ್ಸಿಡೆಂಟ್‌ಗಳು ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ. ತ್ವಚೆಯನ್ನು ಆರೋಗ್ಯವನ್ನು ಕಾಪಾಡುತ್ತದೆ. ಮುಖ್ಯವಾಗಿ ವಯಸ್ಸಾದ ತ್ವಚೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಚರ್ಮವನ್ನು ಕಾಂತಿಯುತವಾಗಿಸುತ್ತದೆ. ಕೂದಲಿನಲ್ಲಿರುವ ಕಿರುಚೀಲಗಳು ಬಲಗೊಳ್ಳುತ್ತವೆ ಹಾಗೂ ಪ್ರಕಾಶಮಾನ ಕಾಣುತ್ತವೆ.
ಜೀರಿಗೆಯಲ್ಲಿ ಕಬ್ಬಿಣ, ಪೊಟ್ಯಾಶಿಯಂ, ಮೆಗ್ನೀಷಿಯಂ ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಜೀರಿಗೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಉರಿಯೂತ ನಿವಾರಕ ಗುಣಗಳು ಉಸಿರಾಟ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಜೀರಿಗೆ ನೀರನ್ನು ಕುಡಿಯುವುದರಿಂದ ದೇಹವು ಹೈಡ್ರೇಟ್ ಆಗುತ್ತದೆ. ಇದು ಮೂತ್ರಪಿಂಡಗಳ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ ಎಂದು ತಜ್ಞರು ಹೇಳುತ್ತಾರೆ.
ಪ್ರತಿನಿತ್ಯವೂ ಜೀರಿಗೆ ನೀರನ್ನು ಕುಡಿಯುವುದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಬರುವುದನ್ನು ತಡೆಯುತ್ತದೆ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಹಾಗೂ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನೂ ಬರದಂತೆ ತಡೆಯುತ್ತದೆ ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.