ಹೈದರಾಬಾದ್:ಇಂದಿನ ಡಿಜಿಟಲ್ ಜಗತ್ತಿನಲ್ಲಿ ಬಹುತೇಕರಿಗೆ ಕಾಡುತ್ತಿರುವ ಸಮಸ್ಯೆ ಬೆನ್ನು ನೋವು. ನಿತ್ಯ ನಡೆಸುವ ನಿಯಮಿತ ವ್ಯಾಯಾಮಗಳು ನಿಮ್ಮ ಬೆನ್ನನ್ನು ಬಲಗೊಳಿಸುತ್ತದೆ. ಸಕ್ರಿಯವಾಗಿ ಮತ್ತು ದೈನಂದಿನ ವ್ಯಾಯಾಮ ಚಟುವಟಿಕೆಯು ದೇಹವನ್ನು ಬಲಗೊಳಿಸಿ, ತೊಂದರೆ ಮುಕ್ತವಾಗಿಸುತ್ತದೆ. ವ್ಯಾಯಾಮ ಎಂಬುದು ಸ್ನಾಯುವನ್ನು ಸರಿಯಾದ ಆಕಾರದಲ್ಲಿ ತರುವ ನಿಟ್ಟಿನಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ. ಆದರೆ, ಬಹುತೇಕರು ಈ ವ್ಯಾಯಾಮ ಮಾಡಲು ಸೋಮಾರಿಯಾಗುತ್ತಾರೆ. ನೀವು ಇದನ್ನು ಮಾಡಿಲ್ಲ ಎಂದರೆ ನಿಮ್ಮ ಬೆನ್ನಿನ ಪ್ರಮುಖ ಭಾಗವನ್ನು ಹಾನಿ ಮಾಡಿಕೊಳ್ಳುತ್ತೀರಾ ಅಂತಾನೇ ಅರ್ಥ. ಸಣ್ಣ ಸಮಸ್ಯೆ ಕೂಡ ಬೆನ್ನು ನೋವಿನಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಜೊತೆಗೆ ಇದು ಜಿಮ್ ಮತ್ತು ಫಿಟ್ನೆಸ್ ಕ್ಲಬ್ ಮೇಲೆ ಹಣ ಸುರಿಯುವಂತೆ ಮಾಡುತ್ತದೆ. ಈ ನಿಟ್ಟಿನಲ್ಲಿ ಭವಿಷ್ಯದಲ್ಲಿ ಬೆನ್ನು ನೋವಿನ ಸಮಸ್ಯೆ ತಪ್ಪಿಸಿ, ಅದನ್ನು ಬಲಗೊಳಿಸಲು ಮನೆಯಲ್ಲಿಯೇ ಈ ಸಣ್ಣ ವ್ಯಾಯಾಮ ಮಾಡುವುದು ಸೂಕ್ತ.
ಡೆಡ್ಲಿಫ್ಟ್: ದೇಹದ ಎಲ್ಲ ಭಾಗದ ಸುಧಾರಣೆಯಲ್ಲಿ ಈ ವ್ಯಾಯಾಮ ಪ್ರಮುಖ ಪಾತ್ರವಹಿಸುತ್ತದೆ. ಇದು ಬೆನ್ನನ್ನು ಬಲವಾಗಿರಿಸಿ, ಬೆನ್ನುನೋವನ್ನು ಕಡಿಮೆ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ದೀರ್ಘಕಾಲ ಕುಳಿತುಕೊಳ್ಳುವರರಿಗೆ ಇದು ಪ್ರಯೋಜನಕಾರಿಯಾಗಿದೆ.
ಪುಷ್ ಅಪ್: ಅನೇಕ ಬಗೆಯ ಪುಷ್ ಅಪ್ಗಳಿವೆ. ಆದರೆ, ಇದು ದೇಹದ ಎಲ್ಲ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಈ ವ್ಯಾಯಾಮ ವಿಶೇಷವಾಗಿ ಬೆನ್ನು, ಭುಜ, ಮೊಣಕೈ ಮತ್ತು ಹೊಟ್ಟೆ ಸ್ನಾಯುವನ್ನು ಬಲಗೊಳಿಸುತ್ತದೆ. ನಿಮ್ಮ ದೇಹವನ್ನು ಸರಿಯಾದ ಆಕಾರದಲ್ಲಿಡಲು ಹೆಚ್ಚಿನ ಪ್ರಯೋಜನ ನೀಡುವ ವ್ಯಾಯಾಮವಾಗಿದೆ.
ಪ್ಲಾಂಕ್ಸ್: ಮನೆಯಲ್ಲಿ ಮಾಡಬಹುದಾದ ವ್ಯಾಯಾಮ ಇದಾಗಿದ್ದು, ಫಿಟ್ನೆಸ್ ಉತ್ಸಾಹಿಗಳಿಗೆ ಹೇಳಿ ಮಾಡಿಸಿದ ವ್ಯಾಯಾಮವಾಗಿದೆ. ಇದು ಬೆನ್ನಿನ ಜೊತೆಗೆ ನಿಮ್ಮ ಭಂಗಿಯನ್ನು ಯಾವುದೇ ಸಾಧನವಿಲ್ಲದೇ ಸುಧಾರಣೆ ಮಾಡಿ ಬಲಗೊಳಿಸುತ್ತದೆ.