ಕರ್ನಾಟಕ

karnataka

ETV Bharat / health

ಹೋಟೆಲ್​ ಸ್ಟೈಲ್ ರುಚಿಕರ​ ಶೇಂಗಾ ಚಟ್ನಿ ತಯಾರಿಸಲು ಇಲ್ಲಿವೆ ಟಿಪ್ಸ್​ - PEANUT CHUTNEY TIPS - PEANUT CHUTNEY TIPS

ಅನೇಕ ಬಾರಿ ಮನೆಯಲ್ಲಿ ಮಾಡಿದ ಈ ಶೇಂಗಾ ಚಟ್ನಿ ಹೋಟೆಲ್​ ರುಚಿಯನ್ನು ನೀಡುವುದಿಲ್ಲ. ಇದಕ್ಕೆ ಕಾರಣ ಮಾಡುವ ವಿಧಾನದಲ್ಲಿ ಆಗುವ ಸಣ್ಣ ತಪ್ಪುಗಳು.

how to make Hotel style peanut chutey in home here is the recipe
ಶೇಂಗಾ ಚಟ್ನಿ (ETV Bharat)

By ETV Bharat Karnataka Team

Published : Sep 11, 2024, 4:18 PM IST

ಹೈದರಾಬಾದ್​​: ಇಡ್ಲಿ, ದೋಸೆ ಇರಲಿ, ಚಿತ್ನಾನ್ನವೇ ಆಗಿರಲಿ.. ಅಲ್ಲಿ ಶೇಂಗಾ ಚಟ್ನಿ ಒಂಚೂರು ಇದ್ದರೆ ತಿನ್ನುವಾಗ ಅದರ ರುಚಿಯೇ ಅದ್ಭುತವಾಗಿರುತ್ತೆ. ಆದರೆ, ಅನೇಕ ಬಾರಿ ಮನೆಯಲ್ಲಿ ಮಾಡಿದ ಈ ಶೇಂಗಾ ಚಟ್ನಿ ಹೋಟೆಲ್​ ರೀತಿಯ ರುಚಿಯನ್ನು ನೀಡುವುದಿಲ್ಲ. ಅಯ್ಯೋ ಎಲ್ಲಾ, ಸರಿಯಾಗಿ ಮಾಡಿದೆ ಎಂದರೂ ರುಚಿ ಸಿಗದಿರಲು ಕಾರಣ ಅದನ್ನು ತಯಾರಿಸುವ ವಿಧಾನದಲ್ಲಿ ಮಾಡುವ ಸಣ್ಣ ತಪ್ಪುಗಳು. ಇದೇ ರೀತಿ ಪರಿಸ್ಥಿತಿ ನೀವು ಕೂಡ ಅನುಭವಿಸುತ್ತಿದ್ದರೆ, ಈ ಕ್ರಮ ಅನುಸರಿಸಿ, ಆಗ ನಿಮ್ಮಿಷ್ಟವಾದ ಚಟ್ನಿ ರುಚಿಯ ಕೆಡಲು ಸಾಧ್ಯವಿಲ್ಲ. ಹಾಗಾದ್ರೆ ಬಾಯಿ ಚಪ್ಪರಿಸುವ ಕಡಲೆ ಚಟ್ನಿ ಮಾಡುವ ವಿಧಾನದ ಬಗ್ಗೆ ನಾವ್​ ತಿಳಿಸುತ್ತೇವೆ.

ಬೇಕಾಗುವ ಸಾಮಗ್ರಿ

  • ಶೇಂಗಾ ಬೀಜ- ಒಂದು ಕಪ್​
  • ಈರುಳ್ಳಿ - ಒಂದು
  • ಎಣ್ಣೆ- ಸ್ವಲ್ಪ
  • ಒಣ ಮೆಣಸಿನಕಾಯಿ - 7
  • ಶುಂಠಿ ಪುಡಿ- ಅರ್ಧ ಟೀ ಸ್ಪೂನ್​
  • ಟೊಮೆಟೊ - ಕಾಲು(1/4) ಕಪ್​
  • ನೀರು- ಅಗತ್ಯಕ್ಕೆ ಅನುಗುಣವಾಗಿ
  • ಬೆಳ್ಳುಳ್ಳಿ ಎಸಳು- 7
  • ಉಪ್ಪು- ರುಚಿಗೆ ತಕ್ಕಷ್ಟು
  • ಜೀರಿಗೆ- ಅರ್ಧ ಟೀ ಸ್ಪೂನ್​

ಒಗ್ಗರಣೆಗೆ

  • ಸಾಸಿವೆ, ಜೀರಿಗೆ - ಕಾಲು(1/4) ಟೀ ಚಮಚ
  • ಕಡಲೆಬೇಳೆ- ಅರ್ಧ ಟೀ ಚಮಚ
  • ಎಣ್ಣೆ- ಒಂದು ಟೀ ಚಮಚ
  • ಒಣ ಮೆಣಸು - 1
  • ಕರಿಬೇವು - ಒಗ್ಗರಣೆಗೆ

ಮಾಡುವ ವಿಧಾನ:

  • ಮೊದಲಿಗೆ ಸಣ್ಣ ಉರಿಯಲ್ಲಿ ಬಾಣಲೆಯಲ್ಲಿ ಶೇಂಗಾ ಬೀಜವನ್ನು ಹಾಕಿ ಹುರಿಯಿರಿ. ಚೆನ್ನಾಗಿ ಹುರಿದ ಬಳಿಕ ತಣ್ಣಗಾಗಲು ಬಿಡಿ
  • ಇದೀಗ ಮತ್ತೊಂದು ಬಾಣಲೆಗೆ ಅರ್ಧ ಟೀ ಚಮಚ ಎಣ್ಣೆ ಹಾಕಿ, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ
  • ಇದಕ್ಕೆ ಒಣ ಮೆಣಸಿನಕಾಯಿ, ಹೆಚ್ಚಿದ ಟೊಮೆಟೊ, ಶುಂಠಿ ಪುಡಿ, ಜೀರಿಗೆ, ಬೆಳ್ಳುಳ್ಳಿ ಎಸಳು ಹಾಕಿ ಹುರಿಯಿರಿ. ಟೊಮೆಟೊ ಚೆನ್ನಾಗಿ ಮೃದುವಾಗುವವರೆಗೆ ಹುರಿದು, ಅದನ್ನು ತಣ್ಣಗೆ ಆಗಲು ಬಿಡಿ.
  • ಬಳಿಕ ಮಿಕ್ಸಿ ಜಾರಿಗೆ ಹುರಿದ ಸಿಪ್ಪೆ ತೆಗೆದ ಕಡಲೇಬೀಜ, ಟೊಮೆಟೊ, ಈರುಳ್ಳಿ ಸೇರಿಸಿ ಹುರಿದ ಪದಾರ್ಥವನ್ನು ಹಾಕಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ರುಬ್ಬಿ
  • ಇದೀಗ ಬಾಣಲೆಗೆ ಎಣ್ಣೆ ಹಾಕಿ. ಸಾಸಿವೆ, ಕಡಲೆಬೇಳೆ, ಜೀರಿಗೆ, ಕರಿಬೇವು ಹಾಕಿ ಒಗ್ಗರಣೆ ನೀಡಿ. ಎರಡು ನಿಮಿಷದ ಬಳಿಕ ರುಬ್ಬಿದ ಚಟ್ನಿಯನ್ನು ಹಾಕಿ ಮಿಶ್ರಣ ಮಾಡಿ.

ಈ ರೀತಿ ಮಾಡಿದ್ದಲ್ಲಿ ಹೋಟೆಲ್​ ರೀತಿಯಲ್ಲಿ ರುಚಿಕರವಾದ ಶೇಂಗಾ ಚಟ್ನಿ ಸಿದ್ಧವಾಗುತ್ತದೆ.

ಈ ಚಟ್ನಿಯನ್ನು ನೀವು ಪೂರಿ, ಇಡ್ಲಿ, ವಡಾ ಸೇರಿದಂತೆ ನಿಮ್ಮಿಷ್ಟದ ತಿಂಡಿ ಜೊತೆಗೆ ಸೇವಿಸಬಹುದು.

ಇದನ್ನೂ ಓದಿ: ಆಹಾರ ಪದ್ಧತಿ ಮತ್ತು ಸಾವಿನ ಅಪಾಯ: ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು?- ಹೀಗಿದೆ ಅಧ್ಯಯನ -

ABOUT THE AUTHOR

...view details