ಹೈದರಾಬಾದ್: ಬೇಸಿಗೆಯಲ್ಲಿ ತಾಪಮಾನ ಏರಿಕೆಯಾಗುತ್ತಿದ್ದಂತೆ ಸೌಂದರ್ಯದ ಉತ್ಪನ್ನಗಳೊಂದಿಗೆ ಸಖ್ಯ ಬೆಳೆಸುವುದು ಕಷ್ಟವಾಗುತ್ತದೆ. ಶಾಖ, ಆರ್ದ್ರತೆ ಮತ್ತು ಸೂರ್ಯನಿಂದಾಗಿ ಸ್ಕಿನ್ ಕೇರ್ಗಳನ್ನು ಹಚ್ಚಿಕೊಂಡಾಗ ಅವು ಕಳೆಗುಂದುವ, ಮುಖ ಬಲು ಬೇಗ ಬಾಡಿದಂತೆ ಕಾಣುತ್ತದೆ. ಕಾರಣ ಸೂರ್ಯನ ಶಾಖ. ಬಿಸಿಲು ಹೆಚ್ಚಿದಂತೆ ಮುಖ ತಾಜಾತನ ಕಳೆದುಕೊಳ್ಳುತ್ತದೆ. ಆದರೆ, ಇಂತಹ ಬಿರು ಬೇಸಿಗೆಯಲ್ಲೂ ನಿಮ್ಮ ಮೇಕಪ್ ಕಳೆಗುಂದದಂತೆ ಮಾಡದೇ, ತ್ವಚೆಯ ಅಂದ ಹೆಚ್ಚಿಸಲು ಕೆಲವು ಸರಳ ಸಲಹೆಗಳನ್ನು ಚರ್ಮರೋಗ ತಜ್ಞರಾಗಿರುವ ಡಾ ಸ್ತುತಿ ಖರೇ ಶುಕ್ಲಾ ತಿಳಿಸಿದ್ದಾರೆ.
ಮುಖ ಶುಚಿಯಿಂದ ಆರಂಭಿಸಿ: ಮುಖದ ಮೇಲೆ ಯಾವುದೇ ಮೇಕಪ್ ಹಚ್ಚುವ ಮುನ್ನ ಅದನ್ನು ಸೌಮ್ಯ ಸ್ವಭಾವದ ಕ್ಲೇನ್ಸರ್ ಮೂಲಕ ಶುಚಿಗೊಳಿಸುವುದು ಅಗತ್ಯ. ಇದರಿಂದ ಮುಖದಲ್ಲಿರುವ ಎಣ್ಣೆ ಅಥವಾ ಒಣ ತ್ವಚೆ, ಅಂಟು ಅಂಟು ಅನುಭವದಿಂದ ಮುಕ್ತಿ ನೀಡುತ್ತದೆ.
ಪ್ರೈಮರ್ ಬಳಕೆ:ಶಾಖದಿಂದ ರಕ್ಷಣೆಗೆ ಇದು ಬಹು ಮುಖ್ಯವಾಗಿದೆ. ಮೇಕಪ್ ಹಾಕಿಕೊಳ್ಳುವ ಮುನ್ನ ಮುಖಕ್ಕೆ ಪ್ರೈಮರ್ ಹಚ್ಚಿಕೊಳ್ಳುವುದು ಅಗತ್ಯ. ಮೇಕಪ್ ಅನ್ನು ದೀರ್ಘಕಾಲ ಹಿಡಿದಿಡಲು ಇದು ಅವಶ್ಯವಾಗಿದೆ, ಇದು ಎಣ್ಣೆ ಉತ್ಪನ್ನಗಳ ನಿರ್ವಹಣೆ ಆಗಿದೆ. ಇದು ಮುಖದ ಮೇಲೆ ಮೃದುತ್ವ ಕಾಪಾಡಲು ಸಹಾಯ ಮಾಡುತ್ತದೆ.
ದೀರ್ಘವಾಧಿ ಫಾರ್ಮೂಲಾ: ಶಾಖ ಮತ್ತು ಆರ್ದ್ರತೆ ತಡೆಯಲು ದೀರ್ಘಾವಧಿಯಿಂದ ರಕ್ಷಣೆ ಪಡೆಯಲು ಬೇಸಿಗೆಯಲ್ಲಿ ಉತ್ಪನ್ನಗಳನ್ನು ಎಚ್ಚರಿಕೆಯಿಂದ ಆರಿಸಬೇಕು. ಅದರಲ್ಲೂ ಮಸ್ಕರ, ಹೈಲೈನರ್, ಕನ್ಸೀಲರ್ ಆಯ್ಕೆಯಲ್ಲಿ ಅದು ವಾಟರ್ ಪ್ರೂಫ್ ಇದೆಯಾ ಎಂಬುದನ್ನು ಗಮನಿಸಿ. ಇಂತಹ ಸಂಯೋಜನೆ ಹೊಂದಿರುವ ಉತ್ಪನ್ನಗಳು ಬೇಸಿಗೆಯ ಬಿಸಿಲಿಗೆ ಸುಲಭವಾಗಿ ಹಾಳಾಗದು.
ಮೇಕಪ್ ಸೆಟ್ ಮಾಡಿ: ಮೇಕಪ್ ಆದ ಬಳಿಕ ಸ್ಪ್ರೇ ಅಥವಾ ಟ್ರಾನ್ಸ್ಪರೆಂಟ್ ಪೌಡರ್ ಮೂಲಕ ಮೇಕಪ್ಗೆ ಫೈನಲ್ ಟಚ್ ಮಾಡಿ. ಇದರಿಂದ ದೀರ್ಘಕಾಲದವರೆಗೆ ಮೇಕಪ್ ಇರುತ್ತದೆ. ಜೊತೆಗೆ ದಿನವಿಡೀ ನಿಮ್ಮ ಮೇಕಪ್ ಹಾಳಾಗದಂತೆ ಇರಲು ಸಹಾಯ ಮಾಡುತ್ತದೆ. ಇದು ಚರ್ಮದಲ್ಲಿರುವ ಅಧಿಕ ಎಣ್ಣೆ ಅಂಶವನ್ನು ಗ್ರಹಿಸುತ್ತದೆ.