Handgrip Strength as a Predictor of Diabetes:ಆಧುನಿಕ ಯುಗದಲ್ಲಿ ಅನೇಕ ಜನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಮಧುಮೇಹ ಕಾಯಿಲೆಯು ಒಂದು. ನೀವು ಒಮ್ಮೆ ಮಧುಮೇಹಕ್ಕೆ ತುತ್ತಾದರೆ, ನಿಮ್ಮ ಜೀವನದ ಉದ್ದಕ್ಕೂ ಔಷಧಗಳನ್ನು ಬಳಕೆ ಮಾಡಬೇಕಾಗುತ್ತದೆ. ಆಹಾರದ ವಿಷಯದಲ್ಲಿ ತುಂಬಾ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗಿ ಕಿಡ್ನಿ, ಹೃದ್ರೋಗದಂತಹ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.
ಸಾಮಾನ್ಯವಾಗಿ ಶುಗರ್ ಇದೆಯೇ.. ಇಲ್ಲವೇ? ವೈದ್ಯರು ಅದನ್ನು ರಕ್ತ ಪರೀಕ್ಷೆಯ ಮೂಲಕ ಪತ್ತೆ ಮಾಡುತ್ತಾರೆ. ಶುಗರ್ ಇದ್ದರೆ, ಪದೇ ಪದೆ ಮೂತ್ರ ವಿಸರ್ಜನೆ ಮಾಡುವುದು, ಗಾಯಗಳು ವಾಸಿಯಾಗದಿರುವುದು ಮತ್ತು ಸುಸ್ತಾಗಿರುವುದು ಮಧುಮೇಹದ ಲಕ್ಷಣಗಳು ಎಂದು ತಜ್ಞರು ತಿಳಿಸುತ್ತಾರೆ. ನಮ್ಮ ಮುಷ್ಟಿಯ ಬಿಗಿತದ ಬಲದಿಂದಲೇ ನಾವು ಡಯಾಬಿಟಿಸ್ ಬಂದಿದೆಯೇ ಅಥವಾ ಪ್ರಿ - ಡಯಾಬಿಟಿಸ್ ಹೊಂದಿರುವ ಬಗ್ಗೆ ತಿಳಿದುಕೊಳ್ಳಬಹುದು ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಈಗ ಈ ಅಧ್ಯಯನದ ಬಗ್ಗೆ ತಿಳಿಯೋಣ.
ಪ್ರತಿ ಮೂವರಲ್ಲಿ ಒಬ್ಬರಿಗೆ ಡಯಾಬಿಟಿಸ್: ವಯಸ್ಸಾದಂತೆ, ದೇಹದ ಜೀವಕೋಶಗಳು ಕಡಿಮೆ ಇನ್ಸುಲಿನ್ ಉತ್ಪತ್ತಿ ಮಾಡುತ್ತವೆ. ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಆದಾಗ್ಯೂ 65 ವರ್ಷಕ್ಕಿಂತ ಮೇಲ್ಪಟ್ಟ ಮೂವರಲ್ಲಿ ಒಬ್ಬರು ಮಧುಮೇಹದಿಂದ ಬಳಲುತ್ತಿದ್ದಾರೆ. 'ದಿ ಮೆನೋಪಾಸ್ ಸೊಸೈಟಿ'ಯಲ್ಲಿ ಪ್ರಕಟವಾದ ಸಂಶೋಧನೆ ಋತುಬಂಧದ ನಂತರದ ಹಂತದಲ್ಲಿ ಮಹಿಳೆಯರಿಗೆ ಈ ಅಪಾಯವು ಹೆಚ್ಚು ಎಂದು ತೋರಿಸುತ್ತದೆ.
ಈ ಹಂತದಲ್ಲಿ ಈಸ್ಟ್ರೊಜೆನ್ ಮಟ್ಟವು ಕ್ರಮೇಣ ಕಡಿಮೆಯಾಗುತ್ತದೆ. ಇನ್ಸುಲಿನ್ ಪ್ರತಿರೋಧ, ಸ್ನಾಯು ದೌರ್ಬಲ್ಯ ಮತ್ತು ಮಧುಮೇಹ ಬರುವ ಸಾಧ್ಯತೆ ಹೆಚ್ಚಿರುತ್ತದೆ. ನಮ್ಮ ಮುಷ್ಟಿಯ ಬಲವು ನಮಗೆ ಡಯಾಬಿಟಿಸ್ ಬಂದಿದೆಯೇ ಅಥವಾ ಪ್ರಿ-ಡಯಾಬಿಟಿಸ್ ಇದೆಯೇ ಎಂದು ತಿಳಿಯುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಈ ಅಧ್ಯಯನಕ್ಕಾಗಿ, ಸಂಶೋಧಕರು 45 ರಿಂದ 65 ವರ್ಷ ವಯಸ್ಸಿನ 4,000 ಋತುಬಂಧಕ್ಕೊಳಗಾದ ಮಹಿಳೆಯರನ್ನು ಆಯ್ಕೆ ಮಾಡಿದರು ಹಾಗೂ ಅವರ ಹ್ಯಾಂಡ್‌ಗ್ರಿಪ್ ಸಾಮರ್ಥ್ಯವನ್ನು ಪರೀಕ್ಷಿಸಿದರು. ಕಡಿಮೆ ಮುಷ್ಟಿ ಬಲವನ್ನು ಹೊಂದಿರುವ ಹೆಚ್ಚಿನ ಮಹಿಳೆಯರು ಮಧುಮೇಹಿಗಳು. ಮಾಂಸಖಂಡದ ಬಲ ಹೆಚ್ಚಿರುವವರಿಗೆ ಇದರಿಂದ ತೊಂದರೆಯಾಗುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.