ಕರ್ನಾಟಕ

karnataka

ETV Bharat / health

ಭಾರತದ ಯುವಜನತೆಯಲ್ಲಿ ಹೆಚ್ಚುತ್ತಿರುವ ಗ್ಲುಕೋಮಾ ಪ್ರಕರಣಗಳು: ವೈದ್ಯರ ಕಳವಳ

ಕೋಮಾ ಸಂಬಂಧಿತ ಕುರುಡುತನವೂ ಭಾರತದಲ್ಲಿ ಏರಿಕೆ ಕಾಣುತ್ತಿದೆ. ಇದಕ್ಕೆ ಇರುವ ಪ್ರಮುಖ ಕಾರಣ ತಡವಾದ ಪತ್ತೆ ಮತ್ತು ಈ ಕುರಿತು ಸರಿಯಾದ ಅರಿವಿನ ಕೊರತೆ.

By ETV Bharat Karnataka Team

Published : Mar 16, 2024, 3:35 PM IST

Glaucoma the third most common cause of blindness in India
Glaucoma the third most common cause of blindness in India

ನವದೆಹಲಿ: ಭಾರತದಲ್ಲಿ ದೃಷ್ಟಿಹೀನತೆಗೆ ಕಾರಣವಾಗುತ್ತಿರುವ ಅಂಶದಲ್ಲಿ ಮೂರನೇ ಸಾಮಾನ್ಯ ಕಾರಣ ಗ್ಲುಕೋಮಾ ಆಗಿದೆ. ವಿಶೇಷವಾಗಿ ಯುವ ವಯಸ್ಕರಲ್ಲಿ ಗ್ಲುಕೋಮಾ, ದೃಷ್ಟಿ ಹೀನತೆಗೆ ಪ್ರಮುಖ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ವಿಶ್ವ ಗ್ಲುಕೋಮಾ ವಾರವನ್ನು ಮಾರ್ಚ್​ನಲ್ಲಿ ಆಚರಿಸಲಾಗುವುದು. ಈ ಮೂಲಕ ಗ್ಲುಕೋಮಾ ಕುರಿತು ಜಾಗೃತಿ ಮೂಡಿಸುವ ಯತ್ನ ಮತ್ತು ಗ್ಲುಕೋಮಾದ ಆರಂಭಿಕ ಪತ್ತೆ ಮತ್ತು ಚಿಕಿತ್ಸೆ ಕುರಿತು ಅರಿವು ಮೂಡಿಸಲಾಗುತ್ತಿದೆ.

ಅನೇಕ ಅಧ್ಯಯನ ಮತ್ತು ವರದಿ ಹಾಗೂ ಆಸ್ಪತ್ರೆಯ ದತ್ತಾಂಶಗಳ ಪ್ರಕಾರ, ಗ್ಲುಕೋಮಾ ಸಂಬಂಧಿತ ಕುರುಡುತನವೂ ಭಾರತದಲ್ಲಿ ಏರಿಕೆ ಕಾಣುತ್ತಿದೆ. ಇದಕ್ಕೆ ಇರುವ ಪ್ರಮುಖ ಕಾರಣ ತಡವಾದ ಪತ್ತೆ ಮತ್ತು ಈ ಕುರಿತು ಸರಿಯಾದ ಅರಿವಿನ ಕೊರತೆಯಾಗಿದೆ. ಭಾರತದ ಶೇ 90ರಷ್ಟು ಪ್ರಕರಣದಲ್ಲಿ ಈ ಪ್ರಕರಣಗಳು ಪತ್ತೆಯಾಗುವುದೇ ಇಲ್ಲ.

ಹೊಸ ಜೀವನಶೈಲಿ ರೋಗಗಳಂತೆಯೇ, ನೇತ್ರಶಾಸ್ತ್ರಜ್ಞರು ಗ್ಲುಕೋಮಾದ ಹೆಚ್ಚುತ್ತಿರುವ ಪ್ರವೃತ್ತಿಯನ್ನು ನೋಡುತ್ತಿದ್ದಾರೆ. ಇದನ್ನು ನಿಶಬ್ಧದ ಕಳ್ಳ ಎಂದೂ ಕರೆಯುತ್ತಾರೆ ಎಂದು ನವದೆಹಲಿಯ ವೇಣು ಕಣ್ಣಿನ ಆಸ್ಪತ್ರೆಯ ಹಿರಿಯ ಸಮಾಲೋಚಕ ಡಾ ಅಭಿಷೇಕ್​ ಬಿ ದಗಾರ್​ ತಿಳಿಸಿದ್ದಾರೆ. ಇತರ ಕಣ್ಣಿನ ಸಮಸ್ಯೆಯಂತೆ ಅಲ್ಲದೇ, ಗ್ಲುಕೋಮಾ ಲಕ್ಷಣವನ್ನು ತೋರುವುದಿಲ್ಲ. ಇದು ಲಕ್ಷಣರಹಿತವಾಗಿದ್ದು, ಕಡೆಯ ಹಂತದಲ್ಲಿ ದೃಷ್ಟಿ ದೋಷಕ್ಕೆ ಕಾರಣವಾಗುತ್ತದೆ. ಅಲ್ಲದೇ ಗ್ಲುಕೋಮಾವನ್ನು ಮರಳಿಸುವುದು ಕಷ್ಟ ಎಂದಿದ್ದಾರೆ.

ಗ್ಲುಕೋಮಾ ರೋಗಿಗಳಲ್ಲಿ ಕಣ್ಣಿನ ಗುಡ್ಡೆ ಮೇಲಿನ ಹೆಚ್ಚಿನ ಒತ್ತಡವೂ ಆಲ್ಟಿಕ್​ ನರಗಳ ದೃಷ್ಟಿ ಮಾಹಿತಿಯನ್ನು ನರಗಳಿಗೆ ನೀಡುವಲ್ಲಿ ವಿಫಲವಾಗುತ್ತದೆ. ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೇ ಹೋದಲ್ಲಿ ಇದು ಶಾಶ್ವತ ಕುರುಡುತನಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಗ್ಲುಕೋಮಾ ಜಾಗತಿಕ ಮಟ್ಟದಲ್ಲಿ ಮರಳಿ ಪಡೆಯಲಾಗದ ದೃಷ್ಟಿ ಹೀನತೆಗೆ ಕಾರಣವಾಗುತ್ತಿರುವ ಸಾಮಾನ್ಯ ಅಂಶವಾಗಿದೆ. ಗ್ಲುಕೋಮಾದಿಂದ ಭಾರತದಲ್ಲಿ ಸರಿಸುಮಾರು 40 ವರ್ಷದ ಮೇಲ್ಪಟ್ಟವ ಸರಿಸುಮಾರು 11.2 ಮಿಲಿಯನ್​ ಜನರು ಈ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ದೇಶದಲ್ಲಿ ಕುರುಡುತನಕ್ಕೆ ಕಾರಣವಾಗುತ್ತಿರುವ ಮೂರನೇ ಸಾಮಾನ್ಯ ಕಾರಣ ಇದಾಗಿದೆ ಎಂದು ಡಾ ಅಭಿಷೇಕ್​ ತಿಳಿಸಿದ್ದಾರೆ.

ಗ್ಲುಕೋಮಾಗೆ ಸಂಪ್ರಾದಾಯಿಕ ವಯಸ್ಸಿನ ಹೊರತಾಗಿ ಯುವ ಜನರಲ್ಲಿ ಕೂಡ ಪ್ರಕರಣಗಳು ಹೆಚ್ಚುತ್ತಿದೆ ಎಂದು ನವದೆಹಲಿಯ ಡಾ ಶ್ರಾಫ್ಸ್​​ ಚಾರಿಟಿ ಕಣ್ಣಿನ ಆಸ್ಪತ್ರೆಯ ಗ್ಲುಕೋಮಾ ಸೇವಾದ ನಿರ್ದೇಶಕರಾದ ಡಾ ಸುನೀತ್​​ ದುಬೆ ತಿಳಿಸಿದ್ದಾರೆ. ಯುವ ಜನತೆಯಲ್ಲಿ ಕಣ್ಣಿನ ಉರಿಯೂತ ಹೆಚ್ಚುತ್ತಿದೆ. ಇದಕ್ಕೆ ಪ್ರಮುಖ ಕಾರಣ ವಂಶವಾಹಿನಿ ಅಥವಾ ಎರಡನೇ ಪರಿಸ್ಥಿತಿಗೆ ಕಾರಣವಾಗುತ್ತಿರುವ ಅಂಶ ಕಣ್ಣಿನ ಊರಿಯುತ, ಸ್ಟೀರಿಯಡ್​ ಬಳಕೆ ಅಥವಾ ಅಪಘಾತಗಳಾಗಿವೆ.

ಈ ಹಿನ್ನೆಲೆ ಸಮಸ್ಯೆಯಿಂದ ಪರಿಹಾರ ಪಡೆಯಲು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗುವುದು ಅವಶ್ಯವಾಗಿದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಗಮನ ಮತ್ತು ಕಣ್ಣಿನ ನಿಕಟ ಸಂಬಂಧದ ಕುರಿತು ಐಐಎಸ್ಸಿ ಎರಡು ಹೊಸ ಅಧ್ಯಯನ

ABOUT THE AUTHOR

...view details