ಕರ್ನಾಟಕ

karnataka

ETV Bharat / health

ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಸೌಮ್ಯ ಸ್ವಭಾವದ ಕೋವಿಡ್ - ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ

ನಿದ್ರಾಹೀನತೆಯು ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಕೋವಿಡ್​ ಬಳಿಕ ಅನೇಕರನ್ನು ಕಾಡುವ ಈ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ಬೇಡ ಎನ್ನುತ್ತಾರೆ ತಜ್ಞರು.

even mild Covid 19 infections may cause insomnia
even mild Covid 19 infections may cause insomnia

By ETV Bharat Karnataka Team

Published : Feb 5, 2024, 4:11 PM IST

ನವದೆಹಲಿ: ಕೋವಿಡ್​ 19 ಸೋಂಕಿನ ನಿದ್ರಾಹೀನತೆಗೆ ಕಾರಣವಾಗಲಿದೆ. ಅದರಲ್ಲೂ ಆತಂಕ ಅಥವಾ ಖಿನ್ನತೆ ಹೊಂದಿರುವ ಜನರಲ್ಲಿ ಈ ಸಮಸ್ಯೆ ಹೆಚ್ಚು ಎಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಈ ನಿದ್ರಾ ಹೀನತೆಯು ಸೌಮ್ಯ ಕೋವಿಡ್​​ ರೋಗಿಗಳೊಂದಿಗೆ ಹೊಂದಿರುವ ಸಂಬಂಧ ಕುರಿತು ವಿಯೆಟ್ನಾಂನ ಫೆನಿಕಾ ವಿಶ್ವವಿದ್ಯಾಲಯದ ತಂಡ ಪತ್ತೆ ಮಾಡಿದೆ. ಫ್ರಂಟಿರಿಯರ್ಸ್​​ ಇನ್​ ಪಬ್ಲಿಕ್​ ಹೆಲ್ತ್​​ನಲ್ಲಿ ಈ ಲೇಖನ ಪ್ರಕಟವಾಗಿದೆ. ತಂಡವು ಆರಂಭದಲ್ಲಿ ಸೋಂಕಿನಲ್ಲಿ ನಿದ್ರಾಹೀನತೆ ಮತ್ತು ಅವರು ಅನುಭವಿಸಿದ ತೀವ್ರತೆಗೆ ಸಂಬಂಧಿಸಿಲ್ಲ ಎಂದು ಪತ್ತೆ ಮಾಡಿದ್ದಾರೆ. ಆದರೂ ಲಕ್ಷಣ ರಹಿತ ಕೋವಿಡ್​ ಸೋಂಕಿತರು ಕಡಿಮೆ ನಿದ್ರಾಹೀನತೆ ಸಮಸ್ಯೆ ಹೊಂದಿದ್ದು, ಈ ವ್ಯತ್ಯಾಸವು ಸಾಂಖ್ಯಿಕವಾಗಿ ಪ್ರಾಮುಖ್ಯತೆಯನ್ನು ಹೊಂದಿಲ್ಲ.

ಕೋವಿಡ್​ 19 ಬಳಿಕ ಕಾಡುವ ನಿದ್ರಾಹೀನತೆಯು ಸಾಮಾನ್ಯ ಎಂದು ಭಾವಿಸಬೇಡಿ ಎಂದು ಅಧ್ಯಯನದ ಪ್ರಮುಖ ಲೇಖಕ ಹುವಾಂಗ್ ಟಿ. ಎಕ್ಸ್​​ ಹೋಂಗ್ ತಿಳಿಸಿದ್ದಾರೆ. ನಿದ್ರಾಹೀನತೆ ನಿಮಗೆ ಹೆಚ್ಚಿನ ತೊಂದರೆ ನೀಡದಿದ್ದರೆ ಇದಕ್ಕೆ ಸರಳ ಕ್ರಮಕ್ಕೆ ಮುಂದಾಗಬಹುದು. ಅಂದರೆ, ಮಲಗುವ ಮುನ್ನ ಬೆಚ್ಚಿಗನ ನೀರಿನ ಸ್ನಾನ, ಮಲಗುವ ಒಂದು ಗಂಟೆ ಮುನ್ನ ಮೊಬೈಲ್​​ಗಳನ್ನು ನೋಡದೇ ಇರುವುದು. ದಿನಕ್ಕೆ 30 ನಿಮಿಷ ವ್ಯಾಯಾಮ, ಸಂಜೆ 4ರ ಬಳಿಕ ಕೆಫೆನ್​ ಅನ್ನು ದೂರ ಇರಿಸುವುದು ಒಳ್ಳೆಯದು.

ಒಂದು ವೇಳೆ ನಿದ್ರಾಹೀನತೆ ಸಾಕಷ್ಟು ತೊಂದರೆ ನೀಡುತ್ತಿದ್ದರೆ, ಇದಕ್ಕೆ ಪರ್ಯಾಯ ನಿದ್ರೆ ವ್ಯವಸ್ಥೆ ನಡೆಸಿ, ಇದು ಸಹಾಯ ಮಾಡದೇ ಹೋದಲ್ಲಿ ವೈದ್ಯರ ಸಹಾಯ ಪಡೆಯಬಹುದು. ಇದಕ್ಕಾಗಿ ವಿಜ್ಞಾನಿಗಳು 1,056 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. 18 ವರ್ಷದ ಮೇಲ್ಪಟ್ಟ ಇವರಲ್ಲಿ ಕೋವಿಡ್​ ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿಲ್ಲ. ಜೊತೆಗೆ ಯಾವುದೇ ನಿದ್ರಾಹೀನತೆ ಅಥವಾ ಮನೋವೈಜ್ಞಾನಿಕ ಪರಿಸ್ಥಿತಿಯು ಕಂಡು ಬಂದಿಲ್ಲ.

ಜೂನ್​ ಮತ್ತು ಸೆಪ್ಟೆಂಬರ್​ 2022ರೊಳಗೆ ಈ ಜನರ ಸಮೀಕ್ಷೆ ನಡೆಸಲಾಗಿದೆ. ಈ ವೇಳೆ ಶೇ 76.1ರಷ್ಟು ಮಂದಿ ನಿದ್ರಾಹೀನತೆ ಅನುಭವಿಸಿದ್ದರೆ, ಶೇ, 22.8 ಮಂದಿ ಗಂಭೀರ ನಿದ್ರಾಹೀನತೆಯ ಸಮಸ್ಯೆ ಅನುಭವಿಸಿದ್ದಾರೆ. ಅರ್ಧದಷ್ಟು ಭಾಗಿದಾರರು ರಾತ್ರಿ ಸಮಯ ಎಚ್ಚರಗೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲದೇ ಮೂರನೇ ಒಂದು ಭಾಗದಷ್ಟು ಜನ ಮಲಗಲು ಕಷ್ಟ, ಕೆಟ್ಟ ನಿದ್ರೆ, ಕಡಿಮೆ ನಿದ್ರೆಯನ್ನು ಅನುಭವಿಸುವುದಾಗಿ ತಿಳಿಸಿದ್ದಾರೆ. ಪ್ರಮುಖವಾಗಿ ಈ ಮೊದಲೇ ಅಸ್ತಿತ್ವದಲ್ಲಿರುವ ದೀರ್ಘಕಾಲದ ಆರೋಗ್ಯ ಪರಿಸ್ಥಿತಿ ಮತ್ತು ಖಿನ್ನತೆಯಂತಹ ಲಕ್ಷಣಗಳನ್ನು ಹೊಂದಿರುವ ಜನರಲ್ಲಿ ಈ ನಿದ್ರಾಹೀನತೆ ದರ ಗಮನಾರ್ಹವಾಗಿ ಹೆಚ್ಚಿದೆ.

ನಿದ್ರಾಹೀನತೆಯು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಮತ್ತಷ್ಟು ಕೆಟ್ಟದಾಗಿಸುತ್ತದೆ. ಇದು ಕಳಪೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಕಾರಣವಾಗುತ್ತದೆ ಎಂದು ತಂಡ ತಿಳಿಸಿದೆ. (ಐಎಎನ್​ಎಸ್​​)

ಇದನ್ನೂ ಓದಿ: ಬೆಂಗಳೂರಿನ ಕೊಳಚೆ ನೀರಿನಲ್ಲಿ ಜೆಎನ್​.1 ರೂಪಾಂತರ​ ಪತ್ತೆಗೆ ಮುಂದಾದ ಸ್ಟಾರ್ಟಪ್​

ABOUT THE AUTHOR

...view details