ಕರ್ನಾಟಕ

karnataka

ETV Bharat / health

ಶಕ್ತಿ ಸಿಗುತ್ತದೆ ಎಂದು ಎನರ್ಜಿ ಡ್ರಿಂಕ್​ ಕುಡಿಯುತ್ತಿದ್ದೀರಾ; ಜೋಕೆ ಅನಿಯಮಿತ ಹೃದಯ ಬಡಿತಕ್ಕೆ ಕಾರಣವಾಗಬಹುದು! - life threatening cardiac arrhythmias - LIFE THREATENING CARDIAC ARRHYTHMIAS

ಎನರ್ಜಿ ಡ್ರಿಂಕ್ಸ್​​ಗಳಲ್ಲಿ ಬ್ರೂವುಡ್​ ಕಾಫಿಗಿಂತ ಹೆಚ್ಚಿನ ಕೆಫೆನ್​ ಅಂಶ ಇರುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದೆ.

consuming-energy-drinks-may-raise-the-risk-of-life-threatening-cardiac-arrhythmias
ಸಾಂದರ್ಭಿಕ ಚಿತ್ರ ((ಸಂಗ್ರಹ ಚಿತ್ರ))

By IANS

Published : Jun 7, 2024, 11:39 AM IST

ನವದೆಹಲಿ: ಶಕ್ತಿಯುತ ಪಾನೀಯ ಎಂದು ಕುಡಿಯುವ ಎನರ್ಜಿ ಡ್ರಿಂಕ್ಸ್​​ಗಳು ಜೀವಕ್ಕೆ ಅಪಾಯವನ್ನೇ ತಂದೊಡ್ಡಬಹುದು ಎಂದು ಅಧ್ಯಯನವೊಂದು ಎಚ್ಚರಿಕೆ ನೀಡಿದೆ. ಈ ಎನರ್ಜಿ ಡ್ರಿಂಕ್​ಗಳ ಸೇವನೆಯಿಂದಾಗಿ ಅನಿಯಮಿತ ಹೃದಯ ಬಡಿತದ ಸ್ಥಿತಿ ಉಂಟಾಗಬಹುದು. ವಿಶೇಷವಾಗಿ ಅನುವಂಶಿಕ ಹೃದಯ ಸಮಸ್ಯೆ ಹೊಂದಿರುವ ರೋಗಿಗಳಲ್ಲಿ ಇದರ ಅಪಾಯ ಹೆಚ್ಚಲಿದೆ ಎಂದು ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ.

ಇವುಗಳಲ್ಲಿ ಹೆಚ್ಚಿದ ಕೆಫೀನ್ ಅಂಶ ಮತ್ತು ಹೆಚ್ಚುವರಿಯಾಗಿ ಸೇರಿಸಲಾದ ಅನಿಯಂತ್ರಿಕದ ಪದಾರ್ಥಗಳು ಹೃದಯ ಬಡಿತ, ರಕ್ತದೊತ್ತಡ ಮತ್ತು ಹೃದಯದ ಸಂಕೋಚನದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ ಎಂದು ಅಮೆರಿಕದ ಮೇಯೊ ಕ್ಲಿನಿಕ್‌ನ ಸಂಶೋಧಕರು ತಿಳಿಸಿದ್ದಾರೆ.

ಎನರ್ಜಿ ಡ್ರಿಂಕ್ಸ್​​ಗಳಲ್ಲಿ ಬ್ರೂವುಡ್​ ಕಾಫಿಗಿಂತ ಹೆಚ್ಚಿನ ಕೆಫೆನ್​ ಅಂಶ ಇರುತ್ತದೆ. ಪಾನೀಯದಲ್ಲಿ 80 ಮಿಗ್ರಾಂನಿಂದ 300 ಮಿಗ್ರಾಂ ವರೆಗೆ ಕೆಫೀನ್ ಇದ್ದರೆ, 8 ಔನ್ಸ್ ಕಪ್ ಕಾಫಿಯಲ್ಲಿ 100 ಮಿಗ್ರಾಂ ಕೆಫೀನ್​​ ಇರುತ್ತದೆ.

ಆದಾಗ್ಯೂ, ಈ ಎನರ್ಜಿ ಡ್ರಿಂಕ್ಸ್​​ಗಳು ಕೆಫೇನ್​ ಜೊತೆಗೆ ಇತರ ಉತ್ತೇಜಕ ಅಂಶಗಳನ್ನು ಹೊಂದಿರುತ್ತದೆ. ಇದು ಅಮೆರಿಕದ ಆಹಾರ ಮತ್ತು ಔಷಧ ಆಡಳಿತದಿಂದ (ಎಫ್​ಡಿಎ) ನಿಯಮಕ್ಕೆ ಒಳಪಟ್ಟಿರುವುದಿಲ್ಲ. ಉದಾಹರಣೆ ಟೌರಿನ್ ಮತ್ತು ಗೌರಾನಾ.

ಈ ಅಧ್ಯಯನವನ್ನು ಜರ್ನಲ್​ ಹಾರ್ಟ್​ ರಿಧಮ್​ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನದ ಭಾಗವಾಗಿ ಮೇಯೊ ಕ್ಲಿನಿಕ್‌ನಲ್ಲಿ ಹಠಾತ್​ ಹೃದಯ ಸ್ತಂಭನದಿಂದ ಬದುಕುಳಿದ 144 ಮಂದಿಯನ್ನು ಪರೀಕ್ಷಿಸಲಾಗಿದೆ. ಅವರಲ್ಲಿ ಶೇ 5ರಷ್ಟು ಮಂದಿ ಒಂದು ಅಥವಾ ಹೆಚ್ಚಿನ ಎನರ್ಜಿ ಡ್ರಿಂಕ್ಸ್​ ಅನ್ನು ಹೃದಯಾಘಾತದ ಘಟನೆಗಿಂತ ಮೊದಲು ತೆಗೆದುಕೊಂಡಿರುವುದು ಕಂಡು ಬಂದಿದೆ.

ಎನರ್ಜಿ ಡ್ರಿಂಕ್‌ಗಳ ಅಧಿಕ ಸೇವನೆಯು ಇತರ ಅಸ್ಥಿರ ಅಂಶಗಳೊಂದಿಗೆ ಸೇರಿ ಅಪಾಯವನ್ನು ಹೆಚ್ಚಿಸುತ್ತದೆ. ಇದು ಹಠಾತ್​ ಹೃದಯಸ್ತಂಭನಕ್ಕೆ ಕಾರಣವಾಗಬಹುದು ಎಂದು ಕ್ಲಿನಿಕ್‌ನ ಜೆನೆಟಿಕ್ ಕಾರ್ಡಿಯಾಲಜಿಸ್ಟ್ ಮೈಕೆಲ್ ಜೆ ತಿಳಿಸಿದ್ದಾರೆ.

ಹೃದಯ ಸ್ತಂಭನ ಮತ್ತು ಎನರ್ಜಿ ಡ್ರಿಂಕ್ಸ್​ ನಡುವಿನ ನೇರ ಸಂಬಂಧವನ್ನು ಅಧ್ಯಯನ ದೃಢಪಡಿಸಿಲ್ಲ. ಆದರೆ, ಎಚ್ಚರಿಕೆ ಅವಶ್ಯಕವಾಗಿದೆ ಎಂದು ಅಧಿಕ ಪ್ರಮಾಣದ ಎನರ್ಜಿ ಡ್ರಿಂಕ್ಸ್​ ಸೇವಿಸುವ ರೋಗಿಗಳಿಗೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಸಂಶೋಧನೆ ತಿಳಿಸಿದೆ.

ಇದೇ ವೇಳೆ ಅಧ್ಯಯನದಲ್ಲಿ ಕಳೆದ ಕೆಲವು ವರ್ಷದಿಂದ ಎನರ್ಜಿ ಡ್ರಿಂಕ್​ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಇದು ಕೆಫೀನ್ ಸೇವನೆಯ ಸಂಭಾವ್ಯ ಪರಿಣಾಮ ಮತ್ತು ಈ ಪಾನೀಯಗಳಲ್ಲಿ ಬಳಕೆ ಮಾಡುತ್ತಿರುವ ಹೆಚ್ಚುವರಿ ಅನಿಯಂತ್ರಿತ ಪದಾರ್ಥಗಳು ಕಾಳಜಿ ಮೂಡಿಸುತ್ತಿದೆ ಎಂದು ಅಧ್ಯಯನ ಲೇಖಕರು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಿದ್ರಾಹೀನತೆಗೆ ಕಾರಣವಾಗಲಿದೆ ಎನರ್ಜಿ ಡ್ರಿಂಕ್​; ಸಂಶೋಧನೆ

ABOUT THE AUTHOR

...view details