Broccoli Paneer Recipe:ಇಂದಿನ ಆಧುನಿಕ ಕಾಲದಲ್ಲಿ ಹೆಚ್ಚಿನವರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬದಲಾಗುತ್ತಿರುವ ಜೀವನಶೈಲಿ ಹಾಗೂ ಆಹಾರ ಕ್ರಮದಲ್ಲಿ ಬದಲಾವಣೆ, ದೈಹಿಕ ಚಟುವಟಿಕೆಯಿಂದ ದೂರವಿರುವುದು, ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ ಎನ್ನುತ್ತಾರೆ ತಜ್ಞರು.
ತೂಕ ನಷ್ಟಕ್ಕೆ ಪ್ರಯತ್ನಿಸುತ್ತಿರುವವರು ಬೆಳಿಗ್ಗೆ ಮತ್ತು ಸಂಜೆ ವ್ಯಾಯಾಮದ ಜೊತೆಗೆ ತಮ್ಮ ದೈನಂದಿನ ಆಹಾರದಲ್ಲಿ ಬದಲಾವಣೆಗಳನ್ನು ಮಾಡಲು ವೈದ್ಯರು ಸಲಹೆ ನೀಡುತ್ತಾರೆ. ಇದರಿಂದ ದೇಹದಲ್ಲಿ ಕೊಬ್ಬು ಕರಗುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ತಮ್ಮ ಬೆಳಗಿನ ಉಪಾಹಾರದಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು.
ಯಾಕೆಂದರೆ, ಬೆಳಗಿನ ತಿಂಡಿಯಲ್ಲಿ ಸರಿಯಾಗಿ ತಿನ್ನದಿದ್ದರೆ ಮಧ್ಯಾಹ್ನದ ಊಟದಲ್ಲಿ ಹೆಚ್ಚು ತಿನ್ನುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಎಷ್ಟೇ ವ್ಯಾಯಾಮ ಮಾಡಿದರೂ ತೂಕ ಇಳಿಸಲು ಸಾಧ್ಯವಿಲ್ಲ. ನಾವು ನಿಮಗಾಗಿ ಸೂಪರ್ ಟೇಸ್ಟಿ ಮತ್ತು ಆರೋಗ್ಯಕರ ಉಪಹಾರವನ್ನು ತಂದಿದ್ದೇವೆ. ಅದುವೇ ಬ್ರೊಕೊಲಿ ಪನೀರ್ ರೆಸಿಪಿ. ತುಂಬಾ ರುಚಿಯಾದ ಬ್ರೊಕೊಲಿ ಪನೀರ್ ಅನ್ನು ದಿನಕ್ಕೊಮ್ಮೆ ತಿನ್ನುವುದರಿಂದ ತೂಕ ಕಳೆದುಕೊಳ್ಳಬಹುದು. ಆದ್ದರಿಂದ, ನೀವು ಇದನ್ನು ಟ್ರೈ ಮಾಡಿ ನೋಡಬಹುದು.
ಬ್ರೊಕೊಲಿ ಪನೀರ್ಗೆ ಬೇಕಾಗುವ ಪದಾರ್ಥಗಳು:
ಬ್ರೊಕೊಲಿ ಪೀಸ್ - ಒಂದು ಕಪ್
ಪನೀರ್ ಪೀಸ್ - ಅರ್ಧ ಕಪ್
ಬೆಣ್ಣೆ ಸ್ವಲ್ಪ
ಎಳ್ಳು ಬೀಜಗಳು - ಟೀಸ್ಪೂನ್
ಬೆಳ್ಳುಳ್ಳಿ ಪೇಸ್ಟ್ - ಟೀಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಕಾಳುಮೆಣಸಿನ ಪುಡಿ - ಅರ್ಧ ಚಮಚ
ಈರುಳ್ಳಿ - ಒಂದು
ಶುಂಠಿ ಪುಡಿ - ಒಂದು ಚಮಚ
ಬ್ರೊಕೊಲಿ ಪನೀರ್ ತಯಾರಿಸುವ ವಿಧಾನ:
ಮೊದಲು ಒಲೆಯ ಮೇಲೆ ಪಾತ್ರೆಯನ್ನು ಇಟ್ಟು ನೀರು ಸುರಿಯಿರಿ. ಇದಕ್ಕೆ ಬ್ರೊಕೊಲಿ ಪೀಸ್ಗಳನ್ನು ಮತ್ತು ಸ್ವಲ್ಪ ಉಪ್ಪು ಸೇರಿಸಿ ಮಿಶ್ರಣ ಮಾಡಿ. ನಂತರ ಮುಚ್ಚಿ ಮತ್ತು 5 ನಿಮಿಷ ಬೇಯಿಸಿ. ನಂತರ ಬ್ರೊಕೊಲಿ ಪೀಸ್ಗಳನ್ನು ಒಂದು ಪ್ಲೇಟ್‌ಗೆ ಹಾಕಿ.
ಈಗ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಸ್ವಲ್ಪ ಬೆಣ್ಣೆಯನ್ನು ಹಾಕಿ ಬಿಸಿ ಮಾಡಿ. ನಂತರ ಪನೀರ್ ಪೀಸ್ಗಳನ್ನು ಹಾಕಿ ಸ್ಟವ್ ಅನ್ನು ಮಧ್ಯಮ ಉರಿಯಲ್ಲಿ ಇಡಿ ಮತ್ತು ಫ್ರೈ ಮಾಡಿ.
ನಂತರ ಒಂದು ತಟ್ಟೆಯಲ್ಲಿ ಪನೀರ್ ಪೀಸ್ಗಳನ್ನು ತೆಗೆದುಕೊಳ್ಳಿ.
ಈಗ ಅದೇ ಬಾಣಲೆಯಲ್ಲಿ ಸ್ವಲ್ಪ ಬೆಣ್ಣೆಯನ್ನು ಹಾಕಿ ಬಿಸಿ ಮಾಡಿ. ನಂತರ ಈರುಳ್ಳಿ ಚೂರುಗಳು, ತುರಿದ ಬೆಳ್ಳುಳ್ಳಿ ಮತ್ತು ತುರಿದ ಶುಂಠಿ ಹಾಕಿ ಫ್ರೈ ಮಾಡಿ.
ಈರುಳ್ಳಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿದುಕೊಳ್ಳಿ. ನಂತರ, ಬೇಯಿಸಿದ ಬ್ರೊಕೊಲಿ ಮತ್ತು ಪನೀರ್ ಪೀಸ್ಗಳನ್ನು ಸೇರಿಸಿ ಹಾಗೂ ಮಿಶ್ರಣ ಮಾಡಿ. ಜೊತೆಗೆ ಎಳ್ಳು, ಕಾಳುಮೆಣಸಿನ ಪುಡಿ ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ.
ಹೀಗೆ ಮಾಡಿದರೆ ತೂಕ ಇಳಿಸುವ ಬ್ರೊಕೋಲಿ ಬ್ರೇಕ್ ಫಾಸ್ಟ್ ರೆಡಿಯಾಗುತ್ತದೆ. ನೀವು ಬಯಸಿದರೆ, ನಿಮಗೆ ಇಷ್ಟವಾದರೆ ಮನೆಯಲ್ಲಿ ಟ್ರೈ ಮಾಡಿ ನೋಡಿ.