Bitter Guard Benefits:ಹಾಗಲಕಾಯಿ ಆ ಹೆಸರು ಕೇಳಿದರೆ ಕೆಲವರು ತುಂಬಾ ಓಡಿ ಹೋಗುತ್ತಾರೆ. ಕಹಿಯಾಗಿರುವುದಕ್ಕೆ ಬಹುತೇಕರು ಹಾಗಲಕಾಯಿ ಸಮೀಪಕ್ಕೂ ಸುಳಿಯುವುದಿಲ್ಲ. ಹಾಗಲಕಾಯಿಯಲ್ಲಿ ನಿಜವಾಗಿಯು ಒಳ್ಳೆಯ ಪ್ರಯೋಜನಗಳು ಅಡಗಿವೆ. ಹಾಗಲಕಾಯಿಯಲ್ಲಿ ವಿಟಮಿನ್ ಎ, ಬಿ1, ಬಿ2, ಬಿ3, ಬಿ5, ಬಿ6, ಬಿ9, ಸಿ ಜೊತೆಗೆ ಫೈಬರ್, ಪೊಟ್ಯಾಸಿಯಮ್, ಸೋಡಿಯಂ, ಮ್ಯಾಂಗನೀಸ್, ಮೆಗ್ನೀಸಿಯಮ್, ಫಾಸ್ಫರಸ್, ಕ್ಯಾಲ್ಸಿಯಂ, ರೈಬೋಫ್ಲಾವಿನ್, ತಾಮ್ರ, ಸತು ಮತ್ತು ಕಬ್ಬಿಣದ ಖನಿಜಗಳಿವೆ.
ಹಾಗಲಕಾಯಿಯನ್ನು ಖನಿಜಗಳ ಗಣಿ ಎಂದೂ ಹೇಳಬಹುದು. ಹಾಗಲಕಾಯಿಯಲ್ಲಿ ನಾರಿನಂಶ ಹೇರಳವಾಗಿದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇದಲ್ಲದೇ, ಇದು ದೇಹದಲ್ಲಿ ಹೊಟ್ಟೆಯ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುತ್ತದೆ. ತೂಕ ನಿಯಂತ್ರಣಕ್ಕೂ ಹಾಗಲ ಉಪಯುಕ್ತ. ಹಾಗಲಕಾಯಿಯಲ್ಲಿ C ಮತ್ತು A ಜೀವಸತ್ವಗಳು, ಫೋಲೇಟ್, ಪೊಟ್ಯಾಸಿಯಮ್, ಸತು ಮತ್ತು ಕಬ್ಬಿಣದ ಖನಿಜಗಳು ಸಮೃದ್ಧವಾಗಿವೆ. ಇದು ಮುಖ್ಯವಾಗಿ ವಿಟಮಿನ್-ಸಿ ಯಲ್ಲಿ ಸಮೃದ್ಧವಾಗಿದೆ. ರೋಗ ನಿರೋಧಕ ಶಕ್ತಿಯನ್ನು ಕೂಡಾ ಹೆಚ್ಚಿಸುತ್ತದೆ. ರಕ್ತಹೀನತೆಯ ಸಮಸ್ಯೆಯನ್ನು ತಡೆಯಲು ಇದು ತುಂಬಾ ಸಹಾಯ ಮಾಡುತ್ತದೆ.
ಚರ್ಮ ರೋಗಕ್ಕೆ ಹಾಗಲಕಾಯಿ ರಾಮಬಾಣ:ವಿಟಮಿನ್ ಎ ಹೇರಳವಾಗಿರುವ ಹಾಗಲಕಾಯಿ ತಿನ್ನುವುದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ. ದೃಷ್ಟಿಯನ್ನು ಸುಧಾರಿಸುವುದರ ಜೊತೆಗೆ, ಫೋಲೇಟ್ ಮಕ್ಕಳ ಬೆಳವಣಿಗೆಗೆ ಉಪಯುಕ್ತವಾಗಿದೆ. ಮಧುಮೇಹಿಗಳಿಗೆ ಹಾಗಲಕಾಯಿಯು ಪ್ರಕೃತಿ ನೀಡಿದ ವರದಾನವೆಂದೇ ಹೇಳಬಹುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಇನ್ಸುಲಿನ್ ಅನ್ನು ಒದಗಿಸುತ್ತದೆ. ಜಠರ, ಕರುಳು, ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್‌ಗಳ ವಿರುದ್ಧ ಹೋರಾಡುವ ಗುಣಗಳನ್ನು ಹಾಗಲಕಾಯಿ ಹೊಂದಿದೆ ಎಂದು ಹಲವು ಸಂಶೋಧನೆಗಳು ಬಹಿರಂಗಪಡಿಸಿವೆ.
ರೋಗ ನಿರೋಧಕ ಹೆಚ್ಚಿಸುವ ಮಾತ್ರೆ ಇದ್ದಂತೆ:ಹಾಗಲಕಾಯಿಯನ್ನು ಆಹಾರದ ಭಾಗವಾಗಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮತ್ತು ದೇಹದಲ್ಲಿನ ಸೂಕ್ಷ್ಮಜೀವಿಗಳನ್ನು ನಾಶಪಡಿಸುತ್ತದೆ. ಗಾಯಗಳು ಬೇಗ ಗುಣವಾಗುತ್ತವೆ. ಕೂದಲು ಪೋಷಣೆಯಾಗುತ್ತದೆ ಮತ್ತು ಕೂದಲು ಬಲವಾಗಿರುತ್ತದೆ. ದೃಷ್ಟಿ ಸುಧಾರಿಸುತ್ತದೆ. ಚರ್ಮವು ಹೊಳೆಯುತ್ತದೆ. ಮೂಳೆಗಳು ಮತ್ತು ಹಲ್ಲುಗಳು ಬಲಗೊಳ್ಳುತ್ತವೆ. ಹಾಗಲಕಾಯಿ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ.