FERTILITY INCREASE FOOD: ಇಂದಿನ ತಂತ್ರಜ್ಞಾನದ ಯುಗದಲ್ಲಿ ಅನೇಕ ದಂಪತಿಗಳು ಆರೋಗ್ಯಕ್ಕೆ ಹಿತಕರವಲ್ಲದ ಆಹಾರ ಸೇವನೆ ಮಾಡುತ್ತಾರೆ. ಇನ್ನು ಬಿಡುವಿಲ್ಲದ ಜೀವನದಿಂದ ಇತರ ಆರೋಗ್ಯ ಸಮಸ್ಯೆಗಳಿಂದ ಮಕ್ಕಳಾಗದಿರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯು ಪತಿ ಮತ್ತು ಹೆಂಡತಿಯ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಮಾನಸಿಕವಾಗಿ ಕುಗ್ಗಿ ಹೋಗುವಂತೆ ಮಾಡುತ್ತದೆ. ಮದುವೆಯಾಗಿ ವರ್ಷಗಳೇ ಕಳೆದರೂ ಮಗುವಾಗಲು ಪ್ರಯತ್ನ ಪಟ್ಟರೂ ಫಲವಿಲ್ಲ ಇರುವುದಿಲ್ಲ. ಇದು ಭಾರಿ ಚಿಂತೆಗೂ ಕಾರಣವಾಗುತ್ತದೆ. ಸಿಟ್ಟು, ಅಸಹಾಯಕತೆ, ಆತ್ಮಸ್ಥೈರ್ಯ, ದುಃಖ ಮುಂತಾದ ಭಾವನೆಗಳು ಮನಸ್ಸನ್ನು ಉಸಿರುಗಟ್ಟಿಸುತ್ತದೆ. ಮಕ್ಕಳಿಲ್ಲದ ಸಮಸ್ಯೆಗೆ ಹಲವು ಕಾರಣಗಳಿರಬಹುದು. ಆದಾಗ್ಯೂ, ಅನೇಕರು ಇದನ್ನು ಮಹಿಳೆ ಎಂದು ತಪ್ಪಾಗಿ ಭಾವಿಸುತ್ತಾರೆ.
ಆದರೆ, ಪುರುಷರಲ್ಲಿನ ಕೆಲವು ಸಮಸ್ಯೆಗಳು ಮಹಿಳೆಯು ಗರ್ಭಿಣಿಯಾಗದಿರಲು ಕಾರಣವಾಗುತ್ತವೆ ಎಂಬುದು ತಜ್ಞರು ಹೇಳುವ ಮಾತಾಗಿದೆ. ವಿಶೇಷವಾಗಿ ವೀರ್ಯ ಕೋಶಗಳ ಸಂಖ್ಯೆಯಲ್ಲಿನ ಇಳಿಕೆ, ಆರೋಗ್ಯದ ಕೊರತೆ ಮತ್ತು ಆನುವಂಶಿಕ ಸಮಸ್ಯೆಗಳು ಬಂಜೆತನಕ್ಕೆ ಕಾರಣವಾಗುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ, ನೀವು ಅಂದರೆ ಪುರುಷರು ಈ ಸಮಸ್ಯೆಗಳಿಂದ ಬಳಲುತ್ತಿದ್ದರೆ.. "ವಾಲ್‌ನಟ್ಸ್" ಅನ್ನು ನಿಮ್ಮ ದೈನಂದಿನ ಆಹಾರದ ಭಾಗವಾಗಿಸಿಕೊಳ್ಳುವುದು ಅತ್ಯುತ್ತಮ ಪರಿಹಾರವಾಗಬಹುದು. ಇವುಗಳನ್ನು ತಿನ್ನುವುದರಿಂದ ನಿಮ್ಮ ಫಲವತ್ತತೆ ಸುಧಾರಿಸುವುದು ಮಾತ್ರವಲ್ಲದೇ ಬೇಗ ಮಕ್ಕಳು ಆಗಬಹುದು ಅಂತಾರೆ ಆರೋಗ್ಯ ತಜ್ಞರು.
ಮೆದುಳಿನ ಆಕಾರವನ್ನು ಹೋಲುವ ವಾಲ್‌ನಟ್ಸ್ ಸಸ್ಯ ಮೂಲದ ಒಮೆಗಾ 3 ಕೊಬ್ಬಿನಾಮ್ಲಗಳು, ಪ್ರೋಟೀನ್, ಫೈಬರ್, ಮೆಗ್ನೀಸಿಯಮ್ ಮತ್ತು ರಂಜಕದಿಂದ ಸಮೃದ್ಧವಾಗಿದೆ. ಪರಿಣಾಮ ಅವುಗಳನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ವಿಶೇಷವಾಗಿ ಪುರುಷರಲ್ಲಿ ಫಲವತ್ತತೆ ಸಮಸ್ಯೆಗಳನ್ನು ಕಡಿಮೆ ಮಾಡಲು ವಾಲ್ ನಟ್ ನಲ್ಲಿರುವ ಪೋಷಕಾಂಶಗಳು ತುಂಬಾ ಸಹಕಾರಿ ಎಂದು ತಜ್ಞರು ಹೇಳಿದ್ದಾರೆ. ಇದಲ್ಲದೆ ದಿನವೂ ವಾಲ್‌ನಟ್ಸ್ ತಿನ್ನುವ ಪುರುಷರಲ್ಲಿ ವೀರ್ಯದ ಗುಣಮಟ್ಟವನ್ನು ಸುಧಾರಿಸುವಂತೆ ಮಾಡುತ್ತದೆ. ಇದು ಪತ್ನಿ ಬೇಗ ಗರ್ಭಧರಿಸುವಂತೆ ಮಾಡುತ್ತದೆ ಎನ್ನುತ್ತವೆ ಕೆಲವು ಅಧ್ಯಯನಗಳು