Ayurvedic Treatment for Dark Spots:ಪ್ರತಿಯೊಬ್ಬರೂ ಕೂಡ ಚೆನ್ನಾಗಿ ಕಾಣಲು ಪ್ರಯತ್ನಿಸುತ್ತಾರೆ. ಆದರೆ, ಪ್ರಸ್ತುತ ಬದಲಾದ ಜೀವನಶೈಲಿ ಚರ್ಮದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಬಹುತೇಕ ಜನರು ಮುಖದ ಮೇಲಿನ ಕಲೆಗಳು ಸೇರಿದಂತೆ ವಿವಿಧ ಚರ್ಮದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇವುಗಳನ್ನು ಕಡಿಮೆ ಮಾಡಲು ಅವರು ವೈದ್ಯರನ್ನು ಸಂಪರ್ಕಿಸುವ ಮೂಲಕ ಔಷಧಗಳನ್ನು ಬಳಸಿ ಮತ್ತು ಸಲಹೆಗಳನ್ನು ಅನುಸರಿಸುತ್ತಾರೆ. ಆದರೂ ಈ ಚರ್ಮದ ಸಮಸ್ಯೆ ಕಡಿಮೆಯಾಗುವುದಿಲ್ಲ. ಆದರೆ, ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಸುಲಭವಾಗಿ ಮನೆಯಲ್ಲಿಯೇ ಫೇಸ್ ಪ್ಯಾಕ್ ಜೊತೆಗೆ ಮನೆ ಮದ್ದು ತಯಾರಿಸಿಕೊಳ್ಳಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರು.
ಮನೆಯಲ್ಲೇ ತಯಾರಿಸುವ ಔಷಧಗಳನ್ನು ಬಳಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ ಎನ್ನುತ್ತಾರೆ ಖ್ಯಾತ ಆಯುರ್ವೇದ ತಜ್ಞೆ, ವೈದ್ಯರಾದ ಡಾ.ಗಾಯತ್ರಿದೇವಿ. ಹಾಗಾದರೆ ಆ ಫೇಸ್ ಪ್ಯಾಕ್ ಯಾವುದು? ಮನೆಯಲ್ಲೇ ಔಷಧ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳು ಯಾವುವು? ಅದನ್ನು ತಯಾರಿಸುವುದು ಹೇಗೆ? ಎಂಬುದನ್ನು ತಿಳಿದುಕೊಳ್ಳೋಣ.
ಫೇಸ್ ಪ್ಯಾಕ್ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳು:
- ಯಷ್ಟಿಮಧು ಪುಡಿ ಅರ್ಧ ಚಮಚ
- ಲೋಧ್ರಾ ಪುಡಿ ಅರ್ಧ ಚಮಚ
- ಬಾರ್ಲಿ ಪುಡಿ ಒಂದು ಚಮಚ
- ಸ್ವಲ್ಪ ಹುಳಿ ಮೊಸರು
ಸಿದ್ಧಪಡಿಸುವ ಪ್ರಕ್ರಿಯೆ ಹೇಗೆ?:
- ಮೊದಲು ಬಾರ್ಲಿ ಬೀಜಗಳನ್ನು ಮೃದುವಾದ ಪೇಸ್ಟ್ ಆಗಿಸಲು ಪುಡಿ ಮಾಡಿಕೊಳ್ಳಿ. ಮತ್ತು ಅದನ್ನು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ.
- ನಂತರ ಲೋಧ್ರ ಪುಡಿ ಮತ್ತು ಯಷ್ಟಿಮಧು ಚೂರ್ಣ ಮಿಶ್ರಣ ಮಾಡಿ.
- ಬಳಿಕ ಸ್ವಲ್ಪ ಹುಳಿ ಮೊಸರು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.
- ಈ ಮಿಶ್ರಣ ಫೇಸ್ ಪ್ಯಾಕ್ ನಂತೆ ಸಿದ್ಧಪಡಿಸಿ, ಬಾಧಿತ ಪ್ರದೇಶಕ್ಕೆ ಔಷಧದ ರೀತಿಯಲ್ಲಿ ಹಚ್ಚಿ.
- ಇದನ್ನು ನಿತ್ಯ 15 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿ ನಂತರ ತೊಳೆದರೆ ಉತ್ತಮ ಫಲಿತಾಂಶ ಸಿಗುತ್ತದೆ ಎನ್ನುತ್ತಾರೆ ಆಯುರ್ವೇದ ವೈದ್ಯರು.
ಲಭಿಸಿವ ಪ್ರಯೋಜನಗಳೇ?:
- ಬಾರ್ಲಿ: ಬಾರ್ಲಿಯಲ್ಲಿ ನೈಸರ್ಗಿಕವಾಗಿ ಕಲೆಗಳನ್ನು ನಿವಾರಿಸುವ ಗುಣವಿದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
- ಲೋದ್ರಾ:ಲೋದ್ರಾ ಕೇವಲ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಮುಖ ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ.
- ಯಷ್ಟಿಮಧು:ಯಷ್ಟಿಮಧು ತ್ವಚೆಗೆ ಉತ್ತಮ ಹೊಳಪು ನೀಡುತ್ತದೆ ಎನ್ನುತ್ತಾರೆ ಆಯುರ್ವೇದ ವೈದ್ಯರು. ಇದಲ್ಲದೇ, ಇದು ಮುಖದ ಮೇಲಿನ ಕಲೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.
ಮುಖದ ಕಲೆಗಳನ್ನು ಹೋಗಲಾಡಿಸಲು ಮನೆಮದ್ದು ಸಿದ್ಧಪಡಿಸುವುದು ಹೇಗೆ?: