ETV Bharat / health

ನೋವು ನಿವಾರಕ ಅತಿಯಾದ ಬಳಕೆಯಿಂದ ಜೀರ್ಣಾಂಗದಲ್ಲಿ ಸಮಸ್ಯೆ; ತಜ್ಞರ ಸಲಹೆಯಲ್ಲಿದೆ ಪರಿಹಾರ! - DIGESTIVE TRACT PROBLEMS

ನೋವು ನಿವಾರಕ ಮಾತ್ರೆಗಳನ್ನು ಅತಿಯಾಗಿ ಬಳಕೆ ಮಾಡುತ್ತಿರುವವರಿಗೆ ಜೀರ್ಣಾಂಗದಲ್ಲಿ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ತಜ್ಞರ ಸಲಹೆಗಳನ್ನು ಪಾಲಿಸಿದರೆ ಜೀರ್ಣಾಂಗದಲ್ಲಿನ ತೊಂದರೆಗೆ ಪರಿಹಾರ ಸಿಗಲಿದೆ.

DIGESTIVE TRACT INFECTION SYMPTOMS  HEALTH TIPS FOR DIGESTIVE TRACT  DIGESTIVE TRACT HEALTH FOODS  DIGESTIVE TRACT PROBLEMS
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Nov 13, 2024, 6:32 PM IST

Digestive Tract Problems: ಬದಲಾದ ಆಹಾರ ಪದ್ಧತಿಯಿಂದ ಅನೇಕರು ಎದೆಯುರಿ, ದೀರ್ಘಕಾಲದ ಮಲಬದ್ಧತೆ, ಕರುಳಿನ ಉರಿಯೂತದಂತಹ ಜೀರ್ಣಾಂಗದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದರಲ್ಲಿನ ಕೆಲವು ಸಮಸ್ಯೆಗಳಲ್ಲಿ ಔಷಧಗಳ ಅಗತ್ಯವಿರುತ್ತದೆ. ಕೆಲವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಜೀವನಶೈಲಿಯ ಬದಲಾವಣೆಯಿಂದ ಕೆಲ ರೋಗಗಳನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ತಜ್ಞರು.

ಎದೆಯುರಿಯಿಂದ ಬಳಲುತ್ತಿರುವವರು ರಾತ್ರಿಯ ಊಟವನ್ನು ಮಲಗುವ 2-3 ಗಂಟೆಗಳ ಮೊದಲು ಸೇವಿಸಿದರೆ ಉತ್ತಮ ಫಲಿತಾಂಶ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. 'Eating Before Bedtime and Gastroesophageal Reflux Disease' (2018) ಎಂಬ ಅಧ್ಯಯನದಲ್ಲಿ ಇದನ್ನು ಬಹಿರಂಗಪಡಿಸಲಾಗಿದೆ. ಈ ವರದಿಯನ್ನು ಜರ್ನಲ್ ಆಫ್ ಕ್ಲಿನಿಕಲ್ ಗ್ಯಾಸ್ಟ್ರೋಎಂಟರಾಲಜಿಯಲ್ಲಿ ಪ್ರಕಟಿಸಲಾಗಿದೆ. ಅರಿಝೋನಾ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಮೆಡಿಸಿನ್ ಪ್ರಾಧ್ಯಾಪಕ ಡಾ. ರೋನಿ ಫಾಸ್ (MD) ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.

ನಿಗದಿತ ಸಮಯದಲ್ಲಿ ಸರಿಯಾದ ಪದಾರ್ಥಗಳ ಸೇವನೆ: ಕರುಳಿನ ಆರೋಗ್ಯಕ್ಕೆ ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಮತೋಲಿತ ಆಹಾರವು ಪ್ರಮುಖವಾಗಿದೆ. ಹೆಚ್ಚು ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳನ್ನು ತಿನ್ನಲು ಹೇಳಲಾಗುತ್ತದೆ. ಕಡಿಮೆ ಪ್ರಮಾಣದಲ್ಲಿ ಮಾಂಸ ಮತ್ತು ಸಂಸ್ಕರಿಸಿದ ಆಹಾರ ಸೇವಿಸಬೇಕಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಜೊತೆಗೆ ಕ್ಯಾಲ್ಸಿಯಂ ಮತ್ತು ವಿಟಮಿನ್-ಡಿ ನಂತಹ ಪೋಷಕಾಂಶಗಳನ್ನು ಒದಗಿಸಲು ಹಾಲು, ಮಜ್ಜಿಗೆ ಮತ್ತು ಮೊಸರು ಒಳ್ಳೆಯದು. ಡೈರಿ ಉತ್ಪನ್ನಗಳು ಹಿಡಿಸದೇ ಇರವವರು ದೂರವಿರಬಹುದು. ಆದರೆ, ನೀವು ಪ್ರತಿದಿನ ಸಾಕಷ್ಟು ಫೈಬರ್ ಅನ್ನು ಪಡೆಯುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು, ಪುರುಷರು ದಿನಕ್ಕೆ 38 ಗ್ರಾಂ ಫೈಬರ್ ಅನ್ನು ತಿನ್ನಬೇಕು ಮತ್ತು ಮಹಿಳೆಯರು 25 ಗ್ರಾಂ ತಿನ್ನಬೇಕು ಎಂದು ಮಾರ್ಗಸೂಚಿಗಳು ಸೂಚಿಸುತ್ತವೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ವಿಸರ್ಜನಾ ಬದಲಾವಣೆ ಮೇಲೆ ಗಮನವಿರಲಿ: ಮತ್ತೊಂದೆಡೆ, ಸ್ಟೂಲ್ ಮಾದರಿಗಳು ಆರೋಗ್ಯದ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಸಹ ನೀಡುತ್ತದೆ. ಆಗೊಮ್ಮೆ ಈಗೊಮ್ಮೆ ನೀರಿನಂಶ ಬೇದಿ ಆಗುವುದು ಸಹಜ.. ಆದರೆ, ಪದೇ ಪದೇ ಬೇದಿ ಬಂದರೂ ನಾಲ್ಕೈದು ದಿನವಾದರೂ ಕಡಿಮೆಯಾಗದಿದ್ದರೆ ಬೇರೆಯದ್ದೇನೋ ಎಂಬ ಶಂಕೆ. ವಿಶೇಷವಾಗಿ ಮಲದಲ್ಲಿ ರಕ್ತ, ಮಲವಿಸರ್ಜನೆಗಾಗಿ ರಾತ್ರಿಯಲ್ಲಿ ಎಚ್ಚರಗೊಳ್ಳುವುದು, ಅತಿಸಾರದ ಜೊತೆಗೆ ತೂಕ ನಷ್ಟವು ಉದರದ ಕಾಯಿಲೆ, ಕರುಳಿನ ಉರಿಯೂತ ಮತ್ತು ಕರುಳಿನ ಸೋಂಕಿನಂತಹ ಸಮಸ್ಯೆಗಳ ಲಕ್ಷಣಗಳಾಗಿರಬಹುದು ಎಂದು ತಜ್ಞರು ವಿವರಿಸುತ್ತಾರೆ.

ವಿಸರ್ಜನೆಯಲ್ಲಿ ಯಾವುದೇ ಬದಲಾವಣೆಗಳಿಲ್ಲದಿದ್ದರೂ ಸಹ, 45 ವರ್ಷಗಳ ನಂತರ ಕೊಲೊನೋಸ್ಕೋಪಿ ಅಗತ್ಯ ಎಂದು ಸೂಚಿಸಲಾಗುತ್ತದೆ. ಧೂಮಪಾನ, 50 ವರ್ಷಕ್ಕಿಂತ ಮೇಲ್ಪಟ್ಟವರು, ಸ್ಥೂಲಕಾಯತೆ ಮತ್ತು ಎದೆಯ ಉರಿಯೂತದಂತಹ ಅಪಾಯಕಾರಿ ಅಂಶಗಳಿರುವ ಜನರು ಅನ್ನನಾಳದ ಕ್ಯಾನ್ಸರ್‌ಗೆ ಆರಂಭಿಕ ತಪಾಸಣೆಗೆ ಒಳಗಾಗಬೇಕಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಸೋಮಾರಿತನ ಬಿಡಬೇಕು: ಇದಲ್ಲದೆ, ಕರುಳಿನ ಆರೋಗ್ಯಕ್ಕೆ ದೈಹಿಕವಾಗಿ ಸಕ್ರಿಯವಾಗಿರುವುದು ಸಹ ನಿರ್ಣಾಯಕವಾಗಿದೆ. ಮಲಬದ್ಧತೆ ಇರುವವರು ಹೆಚ್ಚು ವ್ಯಾಯಾಮ ಮಾಡಿದರೆ ಕರುಳುಗಳು ಹೆಚ್ಚು ಚಲಿಸುತ್ತವೆ. ಇದರಿಂದ ಆಹಾರವು ದೊಡ್ಡ ಕರುಳಿನ ಮೂಲಕ ವೇಗವಾಗಿ ಮುಂದುವರಿಯಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ವ್ಯಾಯಾಮವು ಮಲ ಬದ್ಧತೆ ಮತ್ತು ಯಕೃತ್ತಿನ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ.

ಆದರೆ, ಕರುಳಿನ ಮೈಕ್ರೋಬಯೋಟಾ ವೈವಿಧ್ಯತೆ ಮತ್ತು ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಸುಧಾರಿಸುತ್ತದೆ. ವಾರದಲ್ಲಿ ಮೂರು ದಿನ ಅರ್ಧಗಂಟೆಯಷ್ಟು ಹುರುಪಿನ ವ್ಯಾಯಾಮ ಮಾಡುವುದು ಉತ್ತಮ. ಇದು ಸಾಧ್ಯವಾಗದಿದ್ದರೆ, ಪ್ರತಿದಿನ ಅರ್ಧ ಗಂಟೆ ನಡೆಯುವುದು ಉತ್ತಮ. ದಿನದಲ್ಲಿ ಸಾಧ್ಯವಾದಷ್ಟು ವಾಕಿಂಗ್​ ಮಾಡುವುದು ಉತ್ತಮ.

ಸಾಕಷ್ಟು ನೀರು ಕುಡಿಯುವುದು ಒಳ್ಳೆಯದು: ನಮ್ಮ ದೇಹದಲ್ಲಿ ಅರ್ಧಕ್ಕಿಂತ ಹೆಚ್ಚು ನೀರಿದೆ. ದೇಹದ ಹೆಚ್ಚಿನ ಅಂಗಗಳು ನೀರಿನೊಂದಿಗೆ ಸಂಪರ್ಕ ಹೊಂದಿವೆ. ನೀರು ಕಡಿಮೆಯಾದರೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಹೀಗಾಗಿ ಸಾಕಷ್ಟು ನೀರು ಮತ್ತು ದ್ರವಾಹಾರ ಸೇವಿಸಬೇಕು. ಫೈಬರ್ ಜೊತೆಗೆ ಸಾಕಷ್ಟು ನೀರು ಕುಡಿಯುವುದು ಉತ್ತಮ ಫಲಿತಾಂಶಗಳಿಗೆ ಕಾರಣವಾಗಬಹುದು ಎಂದು ಕೆಲವು ಅಧ್ಯಯನಗಳು ತೋರಿಸಿವೆ ಎಂದು ಸಂಶೋಧಕರು ಮಾಹಿತಿ ನೀಡುತ್ತಾರೆ.

ಸಾಕಷ್ಟು ನೀರು ಕುಡಿದರೆ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಜೊತೆಗೆ ಕೃತಕ ಸಿಹಿಕಾರಕಗಳಿಂದ ತಯಾರಿಸಿದ ಪಾನೀಯಗಳು ಕರುಳಿನಲ್ಲಿರುವ ಬ್ಯಾಕ್ಟೀರಿಯಾದ ಸಮತೋಲನ ಹಾನಿಗೊಳಿಸುತ್ತವೆ ಎಂದು ಅಧ್ಯಯನಗಳು ತೋರಿಸುತ್ತವೆ. ನೀವು ತುಂಬಾ ಸಿಹಿಯಾದ ಪದಾರ್ಥವನ್ನು ತಿನ್ನಲು ಬಯಸಿದರೆ, ಜೇನುತುಪ್ಪದಂತಹ ನೈಸರ್ಗಿಕ ಪದಾರ್ಥಗಳನ್ನು ಆಯ್ಕೆ ಮಾಡಲು ತಜ್ಞರು ಸಲಹೆ ನೀಡುತ್ತಾರೆ.

ಆಲ್ಕೊಹಾಲ್, ನೋವು ನಿವಾರಕ ಔಷಧಗಳನ್ನು ಸೀಮಿತಗೊಳಿಸಿ: ಎನ್ಎಸ್ಎಐಡಿ ಪ್ರಕಾರ, ಆಲ್ಕೋಹಾಲ್ ಮತ್ತು ನೋವು ನಿವಾರಕ ಔಷಧಗಳಿಂದ ಕರುಳಿಗೆ ಹಾನಿಯಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಯಕೃತ್ತಿಗೆ ಹಾನಿ ಮಾಡುವುದರ ಜೊತೆಗೆ ಆಲ್ಕೋಹಾಲ್ ನೇರವಾಗಿ ಜೀರ್ಣಾಂಗ ಹಾಗೂ ಕರುಳಿನ ಮೇಲೆ ಪರಿಣಾಮ ಬೀರುತ್ತದೆ. ಅತಿಯಾಗಿ ಮದ್ಯ ಸೇವಿಸಿದ ನಂತರ ಮರುದಿನ ಕೆಲವು ಜನರು ಹೊಟ್ಟೆನೋವು ಮತ್ತು ಅತಿಸಾರದಿಂದ ಬಳಲುತ್ತಾರೆ.

ಎಂಡೋಸ್ಕೋಪಿ ಪರೀಕ್ಷೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅತಿಯಾಗಿ ಮದ್ಯಪಾನ ಮಾಡಿದವರಲ್ಲಿ ಜೀರ್ಣಾಂಗದಲ್ಲಿ ಊತ ತೋರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ, ನೀವು ಆಗಾಗ್ಗೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡರೆ, ಜೀರ್ಣಾಂಗ ಮತ್ತು ಕರುಳಿನಲ್ಲಿ ಉರಿಯೂತದ ಪ್ರಕ್ರಿಯೆಯು ಪ್ರಚೋದಿಸಲ್ಪಡುತ್ತದೆ ಮತ್ತು ಕರುಳಿನಲ್ಲಿ ಹುಣ್ಣುಗಳು ಉಂಟಾಗಬಹುದು ಎಂದು ತಜ್ಞರು ವಿವರಿಸುತ್ತಾರೆ.

ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

ಇದನ್ನೂ ಓದಿ: ಊಟಕ್ಕೂ ಮೊದಲು ನೀರು ಕುಡಿಯೋದರಿಂದ ತೂಕ ಇಳಿಕೆಯಾಗುತ್ತಾ? ಸಂಶೋಧಕರು ಹೀಗಂತಾರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.