ಕರ್ನಾಟಕ

karnataka

ETV Bharat / entertainment

'ಯುವ' ರಾಜ್​ಕುಮಾರ್ ಚೊಚ್ಚಲ ಚಿತ್ರಕ್ಕೆ ಸಿಗಲಿದೆ ವಿಶೇಷ ವ್ಯಕ್ತಿಯ ಆಶೀರ್ವಾದ - ಯುವ ಸಿನಿಮಾ ಸಾಂಗ್

ನಾಳೆ ಸಂಜೆ 'ಯುವ' ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಲಿದೆ.

Yuva
ಯುವ ರಾಜ್​ಕುಮಾರ್

By ETV Bharat Karnataka Team

Published : Mar 1, 2024, 1:05 PM IST

ವರನಟ ರಾಜ್​ಕುಮಾರ್​ ಕುಟುಂಬದ ಮೂರನೇ ತಲೆಮಾರಿನ ಕುಡಿ ಯುವ ರಾಜ್​ಕುಮಾರ್ ಬೆಳ್ಳಿ ಪರದೆಯಲ್ಲಿ ವಿಜೃಂಭಿಸಲು ಕೆಲ ದಿನಗಳಷ್ಟೇ ಬಾಕಿ ಉಳಿದಿವೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ 'ಯುವ' ಈಗಾಗಲೇ ಸಾಕಷ್ಟು ಕ್ರೇಜ್​ ಕ್ರಿಯೇಟ್​ ಮಾಡಿದೆ. ಸಂತೋಷ್ ಆನಂದ್ ರಾಮ್‌ ನಿರ್ದೇಶನದ 'ಯುವ' ತನ್ನ ಚಿತ್ರೀಕರಣ ಪೂರ್ಣಗೊಳಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಚುರುಕುಗೊಂಡಿದೆ. ಜೊತೆ ಜೊತೆಗೆ ಪ್ರಚಾರವನ್ನೂ ಪ್ರಾರಂಭಿಸಿದೆ.

ಈಗಾಗಲೇ ''ಯುವ'' ಟೈಟಲ್ ಟೀಸರ್ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​ ಟಾಕ್ ಆಗುವ ಮಟ್ಟಿಗೆ ಯುವ ರಾಜ್​ಕುಮಾರ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದರು. ಖಡಕ್ ಡೈಲಾಗ್, ಭಯ ಹುಟ್ಟಿಸುವ ಖದರ್​ನಿಂದ ಭರವಸೆ ಮೂಡಿಸಿದ್ದರು. ಸದ್ಯ ಪೋಸ್ಟರ್​ನಿಂದಲೇ ದೊಡ್ಡ ಮಟ್ಟದಲ್ಲಿ ಕುತೂಹಲ ಹುಟ್ಟಿಸಿರೋ 'ಯುವ' ಚಿತ್ರದ ಮೊದಲ ಹಾಡು ಬಿಡುಗಡೆಗೆ ಮುಹೂರ್ತ ನಿಗದಿ ಆಗಿದೆ.

ಸಂತೋಷ್ ಆನಂದ್ ರಾಮ್ ನಿರ್ದೇಶಿಸಿ, ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಯುವ ಚಿತ್ರದ ಮೊದಲ ಹಾಡು ಮಾರ್ಚ್ 2ರಂದು ಬಿಡುಗಡೆ ಆಗಲಿದೆ. ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಎದುರಿನ ಮೈದಾನದಲ್ಲಿ ಆಯೋಜಿಸಲಾಗಿರುವ ಅದ್ಧೂರಿ ಸಮಾರಂಭದಲ್ಲಿ ಚೊಚ್ಚಲ ಚಿತ್ರದ ಚೊಚ್ಚಲ ಗೀತೆ "ಒಬ್ಬನೇ ಶಿವ ಒಬ್ಬನೇ ಯುವ" ಅನಾವರಗೊಳ್ಳಲಿದೆ. ಈ ಹಾಡನ್ನ ಓರ್ವ ವಿಶೇಷ ವ್ಯಕ್ತಿಯಿಂದ ಬಿಡುಗಡೆ ಮಾಡಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಸ್ವತಃ ಉದಯೋನ್ಮಖ ನಟ ಯುವ ರಾಜ್​ಕುಮಾರ್ ಅವರೇ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಶೇರ್ ಮಾಡಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಮಾರ್ಚ್ 2ರಂದು ಸಂಜೆ 6 ಗಂಟೆಗೆ ಸ್ಪೆಷಲ್​ ಗೆಸ್ಟ್ ಮೂಲಕ ಸಾಂಗ್ ಲಾಂಚ್​ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಚಲನಚಿತ್ರೋತ್ಸವದಲ್ಲಿ ಸಿನಿಮಾರಂಗದ ಪರವಾಗಿ ಬೇಡಿಕೆ ಇಟ್ಟ ಧನಂಜಯ್: ಡಾಲಿ ಮಾತಿಗೆ ಸಿಎಂ ಸಮ್ಮತಿ

ಈ ಚಿತ್ರದಲ್ಲಿ ಯುವ ರಾಜ್​​ಕುಮಾರ್ ಹಾಗೂ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಅವರಲ್ಲದೇ ಅಚ್ಯುತ್ ಕುಮಾರ್, ಸುಧಾರಾಣಿ, ಕಿಶೋರ್ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ. ರಾಜಕುಮಾರ, ಕೆ.ಜಿ.ಎಫ್, ಕಾಂತಾರದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಯುವ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ದೊಡ್ಮನೆ ಮೊಮ್ಮಗನ ಮೊದಲ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಇದೇ ಮಾರ್ಚ್ 28 ರಂದು ಈ ಬಹುನಿರೀಕ್ಷಿತ ಚಿತ್ರ ತೆರೆಗಪ್ಪಳಿಸಲಿದೆ.

ಇದನ್ನೂ ಓದಿ:ಪ್ರೆಗ್ನೆನ್ಸಿ ಅನೌನ್ಸ್​​ಮೆಂಟ್​​ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ದೀಪ್​ವೀರ್​ - ವಿಡಿಯೋ

ABOUT THE AUTHOR

...view details