ಕಳೆದ ಶುಕ್ರವಾರ, ಜನವರಿ 10ರಂದು ಅದ್ಧೂರಿಯಾಗಿ ತೆರೆಕಾಣಬೇಕಿದ್ದ 'ಸಂಜು ವೆಡ್ಸ್ ಗೀತಾ 2' ಕೊನೆ ಕ್ಷಣದಲ್ಲಿ ತನ್ನ ರಿಲೀಸ್ ಡೇಟ್ ಅನ್ನು ಮುಂದೂಡಿತು. ಸಿನಿಮಾ ಕಣ್ತುಂಬಿಕೊಳ್ಳಲು ಕಾತರರಾಗಿರುವ ಪ್ರೇಕ್ಷಕ ಬಳಗಕ್ಕೀಗ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದೆ. ಶೀಘ್ರದಲ್ಲೇ ಹೊಸ ಬಿಡುಗಡೆ ದಿನಾಂಕ ಘೋಷಿಸಲಾವುದು ಎಂದು ಚಿತ್ರತಂಡ ತಿಳಿಸಿತ್ತು. ಅದರಂತೆ ನ್ಯೂ ರಿಲೀಸ್ ಡೇಟ್ ಅಭಿಮಾನಿಗಳ ಕೈ ಸೇರಿದೆ. ಹೌದು, ಇದೇ ಜನವರಿ 17ಕ್ಕೆ 'ಸಂಜು ವೆಡ್ಸ್ ಗೀತಾ 2' ಬಿಡುಗಡೆಯಾಗಲಿದೆ.
ಶಿಡ್ಲಘಟ್ಟದಿಂದ ಸ್ವಿಟ್ಜರ್‌ಲ್ಯಾಂಡ್‌ವರೆಗೂ ಸಾಗುವ ಸ್ಟೋರಿ: ರೇಶ್ಮೆ ಬೆಳೆಗಾರರ ಸುತ್ತ ಕಥೆ ಹೆಣೆಯಲಾಗಿದೆ. ರೇಷ್ಮೆ ಬೆಳೆಗಾರ ಸಂಜು ಪಾತ್ರಕ್ಕೆ ಶ್ರೀನಗರ ಕಿಟ್ಟಿ ಜೀವ ತುಂಬಿದ್ದಾರೆ. ಗೀತಾ ಪಾತ್ರದಲ್ಲಿ ರಚಿತಾ ರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಭಾಗದಲ್ಲಿ ಚಂದನವನದ ಮೋಹಕತಾರೆ ರಮ್ಯಾ ಅಬಿನಯಿಸಿದ್ದರು. ರೇಷ್ಮೆ ಬೆಳೆಗಾರರ ಸಮಸ್ಯೆಯ ಸುತ್ತ ಭಾಗ 2ರ ಕಥೆ ಕೇಂದ್ರೀಕರಿಸಲಾಗಿದೆ.
ಸ್ವಿಟ್ಜರ್‌ಲ್ಯಾಂಡ್‌ನ 10 ಲೊಕೇಶನ್ನಲ್ಲಿ ಶೂಟಿಂಗ್: ಸ್ವಿಟ್ಜರ್‌ಲ್ಯಾಂಡ್‌ನಲ್ಲಿ 10 ಸುಂದರ ಲೊಕೇಶನ್‌ಗಳನ್ನು ಗುರುತಿಸಿ ಚಿತ್ರೀಕರಣ ನಡೆಸಲಾಗಿದೆ. ನಿರ್ಮಾಪಕರು ಯಾವುದಕ್ಕೂ ಬೇಡ ಎಂದಿಲ್ಲ. ಕಂಪ್ಲೀಟ್ ಫ್ರೀಡಂ ಕೊಟ್ಟಿದ್ದರು. ಒಂದೊಳ್ಳೆ ಸಿನಿಮಾವನ್ನು ಕನ್ನಡಿಗರಿಗೆ ಕೊಡಬೇಕೆಂಬ ಉದ್ದೇಶದಿಂದ ಸಾಕಷ್ಟು ಖರ್ಚು ಮಾಡಿದ್ದಾರೆ ಎಂದು ಈ ಹಿಂದೆ ಪ್ರಮೋಶನಲ್ ಈವೆಂಟ್
ಸಂಜು ವೆಡ್ಸ್ ಗೀತಾ 2 ರಿಲೀಸ್ ಗೊತ್ತಿರಲಿಲ್ಲ: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಕೇಸ್ ಸಂಬಂಧ ಇತ್ತೀಚೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದ ರಮ್ಯಾ, ಸಂಜು ವೆಡ್ಸ್ ಗೀತಾ 2 ತೆರೆಕಾಣುತ್ತಿರೋದು ನನಗೆ ಗೊತ್ತಿರಲಿಲ್ಲ. ನಿಮ್ಮಿಂದ ತಿಳಿಯಿತು. ಖುಷಿಯಾಗುತ್ತಿದೆ. ಚಿತ್ರಕ್ಕೆ ನನ್ನ ಶುಭ ಹಾರೈಕೆಗಳು, ಒಳ್ಳೇದಾಗ್ಲಿ ಎಂದು ತಿಳಿಸಿದ್ದರು.
ಇದನ್ನೂ ಓದಿ: ಭವ್ಯಾ - ತ್ರಿವಿಕ್ರಮ್ ಮನಸ್ತಾಪ: ಬಿಗ್ ಬಾಸ್ ಅಖಾಡದಲ್ಲಿ ದೋಸ್ತಿಗಳು ಈಗ ದೂರ ದೂರ!
'ಕಥೆಯ ಕ್ರೆಡಿಟ್ ಸುದೀಪ್ಗೆ ಸಲ್ಲುತ್ತದೆ': ಈ ಚಿತ್ರದ ಎಳೆಯನ್ನು ಮಾಣಿಕ್ಯ ಚಿತ್ರೀಕರಣದ ಸಂದರ್ಭ ನಟ ಸುದೀಪ್ ನನಗೆ ಕೊಟ್ಟಿದ್ದರು. ಈ ರೀತಿಯ ಸ್ಟೋರಿಯನ್ನು ಚೆನ್ನಾಗಿ ಹ್ಯಾಂಡಲ್ ಮಾಡುತ್ತೀರ ಎಂದು ತಿಳಿಸಿದ್ದರು. ಹಾಗಾಗಿ ಸಂಜು ವೆಡ್ಸ್ ಗೀತಾ 2 ಕಥೆಯ ಕ್ರೆಡಿಟ್ ಸುದೀಪ್ ಅವರಿಗೇನೇ ಸಲ್ಲುತ್ತದೆ. ಅಲ್ಲದೇ ಹಾಡು ಅನಾವರಣಗೊಳಿಸೋ ಮೂಲಕ ತಮ್ಮ ತಂಡಕ್ಕೆ ಸಾಥ್ ನೀಡಿದ್ದಾರೆಂದು ನಿರ್ದೇಶಕ ನಾಗಶೇಖರ್ ತಿಳಿಸಿದ್ದರು.
ಇದನ್ನೂ ಓದಿ: ಐಶ್ವರ್ಯಾ ರೈ ವಿರುದ್ಧದ ಸ್ಪರ್ಧೆಯಿಂದ ಆಧ್ಯಾತ್ಮಿಕತೆವರೆಗೆ: ನಟನೆ ತೊರೆದು ಸನ್ಯಾಸಿಯಾದ ಈ ನಟಿ ಬಗ್ಗೆ ನಿಮಗೆಷ್ಟು ಗೊತ್ತು?
ನಾಗಶೇಖರ್ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ರಾಗಿಣಿ ದ್ವಿವೇದಿ ನೃತ್ಯವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚೇತನ್ ಚಂದ್ರ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್, ಸಂಪತ್ ಕುಮಾರ್ ಸೇರಿ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸತ್ಯ ಹೆಗಡೆ ಅವರ ಕ್ಯಾಮರಾ ಕೈಚಳಕ ಮತ್ತು ಶ್ರೀಧರ್ ವಿ.ಸಂಭ್ರಮ್ ಅವರ ಸಂಗೀತ ನಿರ್ದೇಶನ ಸಿನಿಮಾಗಿದೆ. ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನವಿರೋ ಸಿನಿಮಾವನ್ನು ಪವಿತ್ರ ಇಂಟರ್ನ್ಯಾಷನಲ್ ಮೂವೀ ಮೇಕರ್ಸ್ ಅಡಿ ಛಲವಾದಿ ಕುಮಾರ್ ನಿರ್ಮಾಣ ಮಾಡಿದ್ದಾರೆ.