ಕರ್ನಾಟಕ

karnataka

ETV Bharat / entertainment

ಶಾರುಖ್​​ ಖಾನ್​ ಜೊತೆ ಯಶ್​ ಸಿನಿಮಾ? ರಾಕಿಂಗ್​​ ಸ್ಟಾರ್​​ ಆಪ್ತರು ಹೀಗಂತಾರೆ - ಯಶ್​

ರಾಕಿಂಗ್​​ ಸ್ಟಾರ್ ಯಶ್​​ ಬಾಲಿವುಡ್​ ಕಿಂಗ್​ ಖಾನ್​ ಶಾರುಖ್​​ ಜೊತೆ ಸಿನಿಮಾ ಮಾಡಲಿದ್ದಾರೆಂದು ವರದಿಯಾಗಿದೆ.

Yash to collaborate with Shah Rukh Khan
ಶಾರುಖ್​​ ಖಾನ್​ ಜೊತೆ ಯಶ್​ ಸಿನಿಮಾ

By ETV Bharat Karnataka Team

Published : Jan 30, 2024, 12:24 PM IST

ಬಾಲಿವುಡ್​ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ ಸಿನಿಮಾ 'ರಾಮಾಯಣ'. ಈ ಬಹುನಿರೀಕ್ಷಿತ ಚಿತ್ರದ ಮೂಲಕ ಸ್ಯಾಂಡಲ್​ವುಡ್​ನ ರಾಕಿಂಗ್​ ಸ್ಟಾರ್ ಯಶ್ ಬಾಲಿವುಡ್‌ಗೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆಂಬ ಮಾಹಿತಿ ಇದೆ. ಇದಲ್ಲದೇ, ಅತಿ ಹೆಚ್ಚು ಅಭಿಮಾನಿಗಳ ಅಚ್ಚುಮೆಚ್ಚಿನ ನಟ ಶಾರುಖ್ ಖಾನ್ ಅವರೊಂದಿಗೆ ಸಿನಿಮಾ ಮಾಡುವ ಬಯಕೆಯನ್ನು ವ್ಯಕ್ತಪಡಿಸಿರುವ ಕೆಜಿಎಫ್​​ ಸ್ಟಾರ್ ಎರಡನೇ ಬಾಲಿವುಡ್​​ ಪ್ರಾಜೆಕ್ಟ್‌ಗಾಗಿ ಈಗಾಗಲೇ ಮಾತುಕತೆ ನಡೆಸಿದ್ದಾರೆಂಬ ಗುಸುಗುಸು ಕೂಡ ಇದೆ. ತಮ್ಮ ಮುಂದಿನ ಸಿನಿಮಾ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆಂದು ಹೇಳಲಾಗಿದೆ.

ಕೆಜಿಎಫ್ ಮೂಲಕ ವಿಶ್ವದಾದ್ಯಂತ ಸದ್ದು ಮಾಡಿರುವ ನಟ ಯಶ್​​​​, ನಿತೇಶ್​​ ತಿವಾರಿ ಅವರ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರ ನಿರ್ವಹಿಸಲಿದ್ದಾರೆ ಎಂಬುದು ಹಲವು ದಿನಗಳಿಂದ ಕೇಳಿಬರುತ್ತಿರೋ ವಿಚಾರ. ಇದಲ್ಲದೇ ಎರಡನೇ ಬಾಲಿವುಡ್​ ಸಿನಿಮಾ ಬಗ್ಗೆ, ಈ ಪ್ರಾಜೆಕ್ಟ್​​​ನ ಹತ್ತಿರದ ಮೂಲಗಳು ಸುಳಿವು ಬಿಟ್ಟುಕೊಟ್ಟಿವೆ. "ಕೆಜಿಎಫ್ ಯಶಸ್ಸು ಅಭಿಮಾನಿಗಳ ಸಂಖ್ಯೆ (ಹಿಂದಿ ಪ್ರೇಕ್ಷಕರು) ವಿಸ್ತರಣೆಯಾಗಲು ಸಹಕಾರಿಯಾಗಿದೆ ಎಂಬುದನ್ನು ಯಶ್ ಮನಗಂಡಿದ್ದಾರೆ. ಬಾಲಿವುಡ್‌ಗೆ ಪ್ರವೇಶಿಸಲು ಮತ್ತು ಹೆಚ್ಚಿನ ಅಭಿಮಾನಿಗಳನ್ನು ತಲುಪಲು ಇದು ಒಂದು ಕಾರಣವಾಗಿದೆ" ಎಂದು ಮೂಲಗಳು ತಿಳಿಸಿವೆ.

ಮಾತು ಮುಂದುವರಿಸಿ, "ಕೆಜಿಎಫ್ ಮುಂದುವರಿದ ಭಾಗ ಮತ್ತು ರಾಮಾಯಣದ ಪ್ರೊಜೆಕ್ಟ್​ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಕೆಲಸಗಳನ್ನು ನಿಧಾನಗೊಳಿಸುವ ಮನಸ್ಥಿತಿಯಲ್ಲಿಲ್ಲ. ಈಗಾಗಲೇ ತಮ್ಮ ಎರಡನೇ ಬಾಲಿವುಡ್​​​ ಚಿತ್ರ - ಆ್ಯಕ್ಷನ್ ಸಿನಿಮಾದ ಮಾತುಕತೆಯಲ್ಲಿ ನಿರತರಾಗಿದ್ದಾರೆ. ಎಸ್​ಆರ್​ಕೆ ಮತ್ತು ಗೌರಿ ದಂಪತಿಯ 'ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌' ಹೆಸರಿನ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಪ್ರೊಜೆಕ್ಟ್​ಗೆ ಸಂಬಂಧಿಸಿದಂತೆ ಈ ಚಲನಚಿತ್ರ ನಿರ್ಮಾಣ ಸಂಸ್ಥೆಯು ಪ್ರಸ್ತುತ ಯಶ್​​ ಅವರೊಂದಿಗೆ ಕ್ರಿಯೇಟಿವ್​​ ಕಾನ್ಸೆಪ್ಟ್​​ ಬಗ್ಗೆ ಚರ್ಚಿಸುತ್ತಿದೆ. ಯಶ್​ ಅವರು ನಟ ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:'ಸಾರಾಂಶ'ದ ನಶೆಯೋ ನಕಾಶೆಯೋ ಹಾಡಿಗೆ ಶೃತಿ ಹರಿಹರನ್ ನೃತ್ಯ

ಶಾರುಖ್ ಖಾನ್ ಜೊತೆ ಯಶ್​ ನಟಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಈ ಕಾನ್ಸೆಪ್ಟ್​​ ಬಗ್ಗೆ ಇಬ್ಬರೂ ಸೂಪರ್​ ಸ್ಟಾರ್ಸ್ ಸಖತ್​ ಥ್ರಿಲ್​ ಆಗಿದ್ದಾರೆ. ಅದಾಗ್ಯೂ, ಹೆಚ್ಚಿನ ನಿರೀಕ್ಷೆಗಳಿರುವ ಹಿನ್ನೆಲೆ ಮತ್ತು ತಮಗಿರುವ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ನಿರಾಶೆಗೊಳಿಸಬಾರದೆಂಬ ಕಾರಣದಿಂದ ಈ ಇಬ್ಬರೂ ಕೂಡ ಪರ್ಫೆಕ್ಟ್​ ಪ್ರೊಜೆಕ್ಟ್​​ಗಾಗಿ ಎದುರು ನೋಡುತ್ತಿದ್ದಾರೆ. ಆದ್ರೆ, ಯಶ್ ಆಪ್ತ ಮೂಲಗಳು ಈ ಮಾತನ್ನು ನಿರಾಕರಿಸಿವೆ. "ಪ್ರಸ್ತುತ ತಮ್ಮ ಕೈಯಲ್ಲಿರೋ ಪ್ರೊಜೆಕ್ಟ್​ ಕಡೆ ಯಶ್​​ ಗಮನಹರಿಸಿದ್ದಾರೆ" ಎಂದು ಹೇಳಿದ್ದಾರೆ. ಟಾಕ್ಸಿಕ್​​ ನಟನ ಮುಂದಿನ ಬಹುನಿರೀಕ್ಷಿತ ಸಿನಿಮಾ.

ಇದನ್ನೂ ಓದಿ:ಅಭಿದಾಸ್ ನಟನೆಯ​​ 'ನಗುವಿನ ಹೂಗಳ ಮೇಲೆ' ಚಿತ್ರಕ್ಕೆ ನಿರ್ದೇಶಕ ಹರ್ಷ ಸಾಥ್​

ಮತ್ತೊಂದೆಡೆ, ರಣ್​​​ಬೀರ್ ಕಪೂರ್ ಭಗವಾನ್ ಶ್ರೀರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತಾಮಾತೆಯಾಗಿ ಕಾಣಿಸಿಕೊಳ್ಳಲಿರುವ ನಿತೇಶ್​​ ತಿವಾರಿ ಅವರ 'ರಾಮಾಯಣ' ಚಿತ್ರದ ಪ್ರಮುಖ ಪಾತ್ರಕ್ಕಾಗಿ ಯಶ್ ಸುಮಾರು 150 ಕೋಟಿ ರೂಪಾಯಿಗಳ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ. "ಯಶ್ ಈ​ ಚಿತ್ರಕ್ಕಾಗಿ 100 ರಿಂದ 150 ಕೋಟಿ ರೂಪಾಯಿಗಳವರೆಗೆ ತೆಗೆದುಕೊಳ್ಳಲಿದ್ದಾರೆ. ಕನಿಷ್ಠ 100 ಕೋಟಿ ರೂಪಾಯಿಗಳು ಇರಲಿದೆ. ಚಿತ್ರೀಕರಣದ ಒಟ್ಟು ದಿನಗಳ ಮೇಲೆ ಈ ಸಂಭಾವನೆ ಹೆಚ್ಚಾಗಬಹುದು ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details