'ಬಿಗ್ ಬಾಸ್ ಸೀಸನ್ 11'ರಿಂದ ಸ್ಪರ್ಧಿ ತ್ರಿವಿಕ್ರಮ್ ಎಲಿಮಿನೇಟ್ ಆಗಿದ್ದಾರೆ. ಆದ್ರೆ ಈ ಎಲಿಮಿನೇಷನ್ ಅನ್ನು ಮನೆ ಮಂದಿ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೂ ನಂಬಲಾಗುತ್ತಿಲ್ಲ. ಯಾಕಂದ್ರೆ, ತ್ರಿವಿಕ್ರಮ್ ಟಫ್ ಕಂಟೆಸ್ಟೆಂಟ್ ಎಂದು ಗುರುತಿಸಿಕೊಂಡಿದ್ದರು. ಅವರು ಫೈನಲಿಸ್ಟ್ ಎಂದೇ ಬಹುತೇಕರು ಅಂದಾಜಿಸಿದ್ದರು. ಆದ್ರೆ ಅವರ ಎಲಿಮಿನೇಷನ್ ಬಹುತೇಕರಿಗೆ ಬರಸಿಡಿಲು ಬಡಿದ ಅನುಭವ ಕೊಟ್ಟಿದೆ. ಆದ್ರೆ ಅವರು ಸೀಕ್ರೆಟ್ ರೂಮ್ನಲ್ಲಿದ್ದಾರಾ? ಎಂಬ ಶಂಕೆ ಅಭಿಮಾನಿಗಳದ್ದು.
ಟಾಸ್ಕ್ ರಂಗೇರುತ್ತಿದೆ. ಇಂದಿನ ಸಂಚಿಕೆಯಲ್ಲಿ ಚೈತ್ರಾ ಕುಂದಾಪುರ ಮತ್ತು ಐಶ್ವರ್ಯಾ ನಡುವೆ ಅಗ್ಲಿ ವಾರ್ ನಡೆದಿದೆ. 'ಎಚ್ಚೆತ್ತುಕೊಳ್ಳಬೇಕಿರೋ ಸ್ಪರ್ಧಿ ಯಾರು?' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಪ್ರೋಮೋ ಅನಾವರಣಗೊಂಡಿದೆ. ಇದರಲ್ಲಿ ಸ್ಪರ್ಧಿಗಳ ಮನದಲ್ಲಿದ್ದ ಅಸಮಧಾನಗಳು ಹೊರಬಿದ್ದಿವೆ. ಜೊತೆಗೆ, ಇಂದಿನ ಪ್ರೋಮೋದಲ್ಲಿ ತ್ರಿವಿಕ್ರಮ್ ಕಾಣಿಸಿಕೊಂಡಿಲ್ಲ. ಹಾಗಾಗಿ ಅವರು ಎಲಿಮಿನೇಷನ್ ಆಗಿರೋದು ಬಹುತೇಕ ಪಕ್ಕಾ. ಆದಾಗ್ಯೂ, ಅವರನ್ನು ಸೀಕ್ರಟ್ ರೂಮ್ನಲ್ಲಿರಿಸಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಸ್ಪರ್ಧಿಗಳು ಒಂದೆಡೆ ಕುಳಿತಿರೋ ವಿಡಿಯೋ ಪ್ರಸಾರವಾಗಿಲ್ಲ. ಜೊತೆಗೆ, ತ್ರಿವಿಕ್ರಮ್ ಎಲಿಮಿನೇಟ್ ಅನ್ನೋ ಪೋಸ್ಟ್ ಚಾನಲ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಆಗಿಲ್ಲ. ಅವರು ಹೊರ ಬಂದು ಮಾತನಾಡಿರೋ ವಿಡಿಯೋಗಳೂ ಇಲ್ಲ. ಹಾಗಾಗಿ ಅಭಿಮಾನಿಗಳಲ್ಲಿ ಗೊಂದಲವಿದೆ.
ಮನೆ ಸದಸ್ಯರ ಪೈಕಿ, ಎಚ್ಚೆತ್ತುಕೊಳ್ಳಬೇಕಿರೋ ಸದಸ್ಯ ಯಾರು? ಎಂದು ಘೋಷಿಸಿ ಮುಖಕ್ಕೆ ಕಾಫಿ ಎರಚಬೇಕೆಂದು ಬಿಗ್ ಬಾಸ್ ಸೂಚಿಸಿದ್ದಾರೆ. ಅದರಂತೆ ಗೌತಮಿ ಜಾಧವ್ ಅವರು ತಮ್ಮ ಆತ್ಮೀಯ ಸ್ನೇಹಿತ ಮಂಜು ಅವರ ಹೆಸರನ್ನೇ ತೆಗೆದುಕೊಂಡಿದ್ದಾರೆ. ಗೌತಮಿ ಇದ್ದಾಗ ಮಂಜು ಮಾತಾಡಲ್ಲ, ಗೌತಮಿಗೆ ಹೆದರಿಕೊಳ್ತಾರೆ ಎಂಬಂತಹ ಕಾರಣಗಳನ್ನು (ಬಹುಶಃ ಇದು ಮನೆಯವರ ಅಭಿಪ್ರಾಯವನ್ನು ಉಲ್ಲೇಖಿಸಿರಬಹುದು) ಕೊಟ್ಟು ಮಂಜು ಮುಖಕ್ಕೆ ಕಾಫಿ ಎರಚಿದ್ದಾರೆ. ನಂತರ ಐಶ್ವರ್ಯಾ ಅವರು ಚೈತ್ರಾ ಹೆಸರು ತೆಗೆದುಕೊಂಡಿದ್ದು, ದೊಡ್ಡ ಗಲಾಟೆಯೇ ನಡೆದಿದೆ.
ಇದನ್ನೂ ಓದಿ: ಅಲ್ಲು ಅರ್ಜುನ್ ಪ್ರಕರಣ: ತನಿಖೆಯ ಸಂಪೂರ್ಣ ಮಾಹಿತಿ ನೀಡಿದ ಪೊಲೀಸ್
ನಿಮ್ಮ ಆಟಗಳಿಗೆ ನಾನು ಬಲಿಪಶುವಾದೆ ಎಂದು ಈ ವಾರ ಎಂದು ಐಶ್ವರ್ಯಾ ತಮ್ಮ ಕಾರಣಗಳನ್ನು ಕೊಟ್ಟಿದ್ದಾರೆ. ಟಾರ್ಗೆಟ್ ನಾಮಿನೇಷನ್ ಅನ್ನೋದು ಐಶ್ವರ್ಯಾ ಅವರ ಬಾಯಿಂದಲೇ ಬಂದಿರೋದು ಎಂದು ಚೈತ್ರಾ ಸ್ಪಷ್ಟನೆ ಕೊಡಲು ಬಂದಿದ್ದಾರೆ. ಹೇಯ್ ತುಂಬಾ ಚನಾಗ್ ಸುಳ್ ಹೇಳ್ತಿದ್ದೀರಾ ಎಂದು ಐಶ್ವರ್ಯಾ ಕಿಡಿಕಾರಿದ್ದಾರೆ. ನೀನ್ಯಾವಳೇ ಹೇಯ್ ಅನ್ನೋಕೆ ಎಂದು ಚೈತ್ರಾ ಕಿರುಚಲು ಶುರು ಮಾಡಿದ್ದಾರೆ. ನಂತರ ಇಬ್ಬರ ಕಡೆಯಿಂದಲೂ ಮಾತಿಗೆ ಮಾತು ಬೆಳೆದಿದೆ. ಬಾಯ್ ಮುಚ್ಚೇ ಸಾಕು, ಬಾಯಿ ಮುಚ್ಚು ಗಿಚ್ಚು ಅಂದ್ರೆ ಸುಮ್ಮನಿರಲ್ಲ, ಮುಂಚ್ಕೊಂಡಿರು ನೀನು ಎಂಬಂತಹ ಕೆಳಮಟ್ಟದ ಮಾತುಗಳು ಬಂದಿದೆ. ಮಾತಿನ ರಭಸದಲ್ಲಿ ಚೈತ್ರಾ ಟೇಬಲ್ಗೆ ತಮ್ಮ ಕೈಕುಕ್ಕಿದ್ದು, ಬಳೆಗಳು ಒಡೆದಿವೆ.
ಇದನ್ನೂ ಓದಿ: ಅಬ್ಬಬ್ಬಾ! ಉಪೇಂದ್ರ ಸಾರಥ್ಯದ 'ಯುಐ' ಗಳಿಸಿದ್ದಿಷ್ಟು: ಸಿನಿಮಾ ಬಗ್ಗೆ ನಿಮ್ಮ ಅಭಿಪ್ರಾಯವೇನು?