2007ರಲ್ಲಿ ಹಿರಿತೆರೆ ಪ್ರವೇಶಿಸಿದ ನಟ ಯಶ್ 10 ವರ್ಷಗಳಲ್ಲಿ ಸೂಪರ್ ಡೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ರು. ಇಂದು ಭಾರತೀಯ ಚಿತ್ರರಂಗವನ್ನಾಳುತ್ತಿರುವ ಫೇಮಸ್ ಸ್ಟಾರ್. ರಾಕಿಂಗ್ ಸ್ಟಾರ್ ಮುಖ್ಯಭೂಮಿಕೆಯ ಕೆಜಿಎಫ್ ಚಾಪ್ಟರ್ 1 ಅವರ ವೃತ್ತಿಜೀವನದಲ್ಲೇ ಒಂದು ಮೈಲಿಗಲ್ಲಾಯಿತು. ಸದ್ಯ ಪ್ರಪಂಚದಾದ್ಯಂತ ಜನಪ್ರಿಯತೆ ಹೊಂದಿದ್ದಾರೆ. ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ನನ್ನು ಇಂಡಿಯನ್ ಕೆಜಿಎಫ್ ಸ್ಟಾರ್ ಮಾಡಿದ 'ಕೆಜಿಎಫ್ ಚಾಪ್ಟರ್ 1' ಬ್ಲಾಕ್ಬಸ್ಟರ್ ಚಿತ್ರವಿಂದು 6 ವರ್ಷಗಳ ಸಂಭ್ರಮದಲ್ಲಿದೆ.
ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಯಶ್ 2007ರಲ್ಲಿ ಹಿರಿತೆರೆ ಪ್ರವೇಶಿಸಿದರು. ಪ್ರಸ್ತುತ ಭಾರತೀಯ ಚಿತ್ರರಂಗದಲ್ಲಿ ಎ ಗ್ರೇಡ್ ನಟ. ಕನ್ನಡ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದ ನಟ ಕೇವಲ 10 ವರ್ಷಗಳಲ್ಲಿ ವಿಶ್ವದಾದ್ಯಂತ ಪರಿಚಿತರಾದರು. 2018ರಲ್ಲಿ ಬಂದ ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್: ಅಧ್ಯಾಯ 1' ನಟನ ಚಿತ್ರಣವನ್ನೇ ಬದಲಿಸಿತು. ಸಿನಿಮಾದಲ್ಲಿ ಯಶ್ ಅವರ ವ್ಯಕ್ತಿತ್ವ, ಅಮೋಘ ಅಭಿನಯ ಮತ್ತು ಚಿತ್ರದ ಕಥೆ ಕೇವಲ ಸಿನಿಪ್ರಿಯರು ಮಾತ್ರವಲ್ಲದೇ ಸಿನಿರಂಗದ ಗಣ್ಯರ ಗಮನವನ್ನೂ ಸೆಳೆದಿತ್ತು. 'ಕೆಜಿಎಫ್: ಅಧ್ಯಾಯ 1' ಬಿಡುಗಡೆಯಾಗಿ ಇಂದಿಗೆ (ಡಿಸೆಂಬರ್ 21, 2024) 6 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಯಶ್ ಚಿತ್ರದ 6 ದೊಡ್ಡ ದಾಖಲೆಗಳು ಮತ್ತು ಚಿತ್ರದ ಪವರ್ ಫುಲ್ ಡೈಲಾಗ್ಗಳ ಬಗ್ಗೆ ತಿಳಿಯೋಣ..
ಕೆಜಿಎಫ್ ಅಧ್ಯಾಯ 1 ರ ಪ್ರಮುಖ ದಾಖಲೆಗಳು
ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾ:ಈ ರೆಕಾರ್ಡ್ ಈಗ ಕೆಜಿಎಫ್ 2 ಹೆಸರಿನಲ್ಲಿದೆಯಾದರೂ, 'ಕೆಜಿಎಫ್: ಅಧ್ಯಾಯ 1' ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮೊದಲ ಚಿತ್ರವಾಗಿದೆ. ಕೆಜಿಎಫ್ 1 ಬಾಕ್ಸ್ ಆಫೀಸ್‌ನಲ್ಲಿ 2018ರಲ್ಲೇ ಸುಮಾರು 200 ಕೋಟಿ ರೂಪಾಯಿಗೂ ಅಧಿಕ ವ್ಯವಹಾರ ನಡೆಸಿದೆ. ಈವರೆಗೆ ಯಾವುದೇ ಕನ್ನಡ ಸಿನಿಮಾ ಈ ಸಾಧನೆಗೈಯಲು ಸಾಧ್ಯವಾಗಿಲ್ಲ.
100 ಕೋಟಿ ಗಡಿ ದಾಟಿದ ಕನ್ನಡ ಚಿತ್ರ: ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ 100 ಕೋಟಿ, 200 ಕೋಟಿ ರೂಪಾಯಿ ದಾಟಿ ದಾಖಲೆ ಮಾಡಿ ಸಿನಿಮಾವಿದು.
ಹಿಂದಿ ಮಾರುಕಟ್ಟೆಯಲ್ಲಿ ಕನ್ನಡ ಸಿನಿಮಾ ಸಾಧನೆ: ಕನ್ನಡ ಚಿತ್ರರಂಗದ ಸಿನಿಮಾವೊಂದು ಹಿಂದಿ ಮಾರುಕಟ್ಟೆಯಲ್ಲಿ ಸದ್ದು ಮಾಡಿ ಅತಿ ಹೆಚ್ಚು ಗಳಿಕೆ ಮಾಡಿದ ಮೊದಲ ಚಿತ್ರ 'ಕೆಜಿಎಫ್ 1'. ಬಾಹುಬಲಿ ಫ್ರಾಂಚೈಸಿ ನಂತರ ಅತಿ ಹೆಚ್ಚು ಹಣ ಗಳಿಸಿರುವ ಹಿಂದಿ ಡಬ್ಬಿಂಗ್ ಚಿತ್ರ ಇದಾಗಿದೆ. ಕೆಜಿಎಫ್ 2 ಹಿಂದಿ ಬೆಲ್ಟ್ನಲ್ಲಿ 435.33 ಕೋಟಿ ರೂ. ಗಳಿಸುವ ಮೂಲಕ ಮೂರನೇ ಸ್ಥಾನದಲ್ಲಿದೆ. ಪುಷ್ಪ 2 (632 ಕೋಟಿ ರೂ. ಸಿನಿಮಾ ಪ್ರದರ್ಶನ ಮುಂದುವರಿದಿದೆ). ಬಾಹುಬಲಿ 2 (510 ಕೋಟಿ ರೂ.) ಎರಡನೇ ಸ್ಥಾನದಲ್ಲಿದೆ.
ವಿದೇಶದಲ್ಲಿ ದಾಖಲೆ:'ಕೆಜಿಎಫ್ ಚಾಪ್ಟರ್ 1' ಯುಎಸ್ನಲ್ಲಿ 5 ಲಕ್ಷ ಡಾಲರ್ ಗಳಿಸಿದ ಮೊದಲ ಕನ್ನಡ ಚಿತ್ರ.