ಕರ್ನಾಟಕ

karnataka

ETV Bharat / entertainment

ಚಿತ್ರಮಂದಿರದಲ್ಲಿ 'ಲವ್​ ರೆಡ್ಡಿ' ನಟನಿಗೆ ಮಹಿಳೆಯಿಂದ ಕಪಾಳಮೋಕ್ಷ; ಅಸಲಿ ಕಾರಣವಿದು

ಮಹಿಳೆಯ ಈ ವರ್ತನೆ ಚಿತ್ರತಂಡ ಸೇರಿದಂತೆ ನಟನಿಗ ಆಘಾತ ಮೂಡಿಸಿದೆ. ತಕ್ಷಣಕ್ಕೆ ನಟನ ಸಹಾಯಕ್ಕೆ ಬಂದ ಸಿಬ್ಬಂದಿಗಳ ಮೇಲೆ ಕೂಡ ಮಹಿಳೆ ಆಕ್ರೋಶ ಹೊರಹಾಕಿದ್ದಾರೆ.

woman-slaps-love-reddy-actor-in-theatre-reason-will-leave-you-surprised-watch
ಲವ್​​ ರೆಡ್ಡಿ ಸಿನಿಮಾದ ದೃಶ್ಯ (ಈಟಿವಿ ಭಾರತ್​)

By ETV Bharat Karnataka Team

Published : Oct 26, 2024, 4:19 PM IST

ಹೈದರಾಬಾದ್​:'ಲವ್​​ ರೆಡ್ಡಿ' ಚಿತ್ರ ಪ್ರದರ್ಶನ ಬಳಿಕ ಪರದೆ ಮುಂದೆ ನಿಂತಿದ್ದ ಚಿತ್ರತಂಡದ ಜೊತೆಗಿದ್ದ ಕನ್ನಡ ನಟ ಎನ್​ಟಿ ರಾಮಸ್ವಾಮಿಗೆ ಮಹಿಳೆಯೊಬ್ಬರು ಕಪಾಳ ಮೋಕ್ಷ ಮಾಡಿರುವ ಘಟನೆ ಇದೀಗ ಸಾಕಷ್ಟು ಸುದ್ದಿಯಾಗಿದೆ. ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಬೇಕು ಎಂದು ಚಿತ್ರತಂಡ ನಿಂತಾಗ ನಡೆದಿರುವ ಈ ಘಟನೆ ಎಲ್ಲರನ್ನೂ ಅವಕ್ಕಾಗಿ ಮಾಡಿದೆ. ಚಿತ್ರ ಮುಗಿದ ಕೂಡಲೇ ಆಸನದಿಂದ ಎದ್ದು ಬಂದ ಮಹಿಳೆ ಹಿಂದು ಮುಂದು ನೋಡದೇ ಕೆನ್ನೆಗೆ ಬಾರಿಸಿದ್ದಾರೆ. ಮಹಿಳೆಯ ಈ ವರ್ತನೆ ಚಿತ್ರತಂಡ ಸೇರಿದಂತೆ ನಟನಿಗ ಆಘಾತ ಮೂಡಿಸಿದೆ. ತಕ್ಷಣಕ್ಕೆ ನಟನ ಸಹಾಯಕ್ಕೆ ಬಂದ ಸಿಬ್ಬಂದಿಗಳ ಮೇಲೆ ಕೂಡ ಮಹಿಳೆ ಆಕ್ರೋಶ ಹೊರಹಾಕಿದ್ದಾರೆ.

ಅಸಲಿ ಕಾರಣವಿದು: ಸದ್ಯ ಅಭಿಮಾನಿಗಳಿಂದ ಉತ್ತಮ ಪ್ರಶಂಸೆ ಪಡೆಯುತ್ತಿರುವ 'ಲವ್​ ರೆಡ್ಡಿ' ಸಿನಿಮಾದಲ್ಲಿ ರಾಮಸ್ವಾಮಿ ಅವರದ್ದು, ನಟ-ನಟಿಯರಿಗೆ ಕಷ್ಟ ನೀಡುವ ಪಾತ್ರ. ಅಂಜನ್​ ರಾಮಚಂದ್ರ ಮತ್ತು ಶ್ರಾವಣಿ ಕೃಷ್ಣವೇಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇವರಿಗೆ ಚಿತ್ರದಲ್ಲಿ ರಾಮಸ್ವಾಮಿ ಕಾಡಿಸುತ್ತಾರೆ. ಈ ಚಿತ್ರದ ವೀಕ್ಷಣೆ ಬಳಿಕ ಅದರಲ್ಲೇ ಆಳವಾಗಿ ಮುಳುಗಿದ್ದ ಮಹಿಳೆ ಅದನ್ನು ಸಿನಿಮಾ ಎಂಬುದನ್ನು ಮರೆತು, ಚಿತ್ರ ಮುಗಿದಾಕ್ಷಣ ರಾಮಸ್ವಾಮಿ ಅವರ ಪಾತ್ರದಿಂದ ಸಿಟ್ಟಾಗಿ ಅವರ ಮೇಲೆ ಹಲ್ಲೆ ನಡೆಸಿರುವುದು ತಿಳಿದು ಬಂದಿದೆ. ಸಿನಿಮಾ ಪಾತ್ರದ ಅಭಿನಯ ವೀಕ್ಷಿಸುತ್ತ ಅದರಲ್ಲೇ ಮುಳುಗಿದ ಪರಿಣಾಮ ಈ ರೀತಿಯಾಗಿ ಮಹಿಳೆ ವರ್ತಿಸಿದ್ದಾರೆ ಎಂದು ತಿಳಿದುಬಂದಿದೆ.

ಅಕ್ಟೋಬರ್​ 18ರಂದು ಬಿಡುಗಡೆಯಾಗಿರುವ ಈ ಚಿತ್ರ ಉತ್ತಮ ಪ್ರಶಂಸೆಯನ್ನು ಪಡೆದಿದ್ದು, ಪ್ಯಾನ್​ ಇಂಡಿಯಾ ನಟ ಪ್ರಭಾಸ್​ ಕೂಡ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್​ ಮಾಡಿರುವ ನಟ ಪ್ರಭಾಸ್​, 'ಲವ್​ ರೆಡ್ಡಿ' ತಂಡ ಉತ್ತಮವಾದ ಸಿನಿಮಾ ನಿರ್ಮಿಸಿದ್ದು, ಇಡೀ ತಂಡಕ್ಕೆ ನನ್ನ ಶುಭಾಶಯ ಎಂದು ತಿಳಿಸಿದ್ದಾರೆ. ನಟನ ಈ ಕಾರ್ಯಕ್ಕೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದ್ದಾರೆ.

ಸ್ಮರಣ್​​ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಪ್ರೀತಿ ಕಥೆಯನ್ನು ಹೊಂದಿದೆ. ಹಳ್ಳಿಗಾಡಿನ ಸೊಗಡನ್ನು ಸಿನಿಮಾದಲ್ಲಿ ಕಾಣಬಹುದಾಗಿದೆ. ಚಿತ್ರದಲ್ಲಿ ಪಲ್ಲವಿ ಪರ್ವ, ವಾಣಿ ಚನ್ನರಾಯಪಟ್ಟಣ, ಜ್ಯೋತಿ ಮದ, ಎನ್​ಟಿ ರಾಮಸ್ವಾಮಿ ಮತ್ತಿತ್ತರು ಬಣ್ಣ ಹಚ್ಚಿದ್ದಾರೆ. ಪ್ರಿನ್ಸ್​ ಹೆನ್ರಿ ಸಂಗೀತವಿದೆ. ಅಕ್ಷರ್​ ಅಲಿ ಛಾಯಾಚಿತ್ರಣವಿದ್ದು, ಕೊಟಗಿರಿ ವೆಂಕಟೇಶ್ವರ ರಾವ್​ ಸಂಕಲವಿದೆ.

ಇದನ್ನೂ ಓದಿ:ನನಸಾಯ್ತು ಜಗ್ಗೇಶ್ 40 ವರ್ಷಗಳ ಹಿಂದಿನ ಕನಸು: ಸಿನಿಮಾ ಇಂಡಸ್ಟ್ರಿ ಸೇವೆಗಾಗಿ 'ಜಗ್ಗೇಶ್ ಸ್ಟುಡಿಯೋಸ್'

ABOUT THE AUTHOR

...view details