ಕರ್ನಾಟಕ

karnataka

ETV Bharat / entertainment

ಆರಂಭದಲ್ಲೇ ರಜತ್​, ಶೋಭಾ ಆರ್ಭಟ: ಉಗ್ರಂ ಮಂಜು ವಿರುದ್ಧ ಆಕ್ರೋಶ; ಬಿಗ್​ ಬಾಸ್​ ಬಗ್ಗೆ ನಿಮ್ಮ ಅಭಿಪ್ರಾಯವೇನು - BIGG BOSS KANNADA

ವೈಲ್ಡ್​ಕಾರ್ಡ್​​ ಸ್ಪರ್ಧಿಗಳಾದ ಶೋಭಾ ಶೆಟ್ಟಿ ಮತ್ತು ರಜತ್​ ಕಿಶನ್​ ಆರಂಭದಲ್ಲೇ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಇದು ಜನಪ್ರಿಯತೆಗಾಗಿಯೇ? ಎಂಬ ಪ್ರಶ್ನೆ ಕೆಲ ನೆಟ್ಟಿಗರದ್ದು.

Bigg Boss Kannada 11
ಬಿಗ್​ ಬಾಸ್​ ಕನ್ನಡ 11 (Photo: Bigg Boss Team)

By ETV Bharat Entertainment Team

Published : Nov 20, 2024, 7:20 PM IST

ಕನ್ನಡ ಕಿರುತೆರೆಯ ಬಿಗ್ ಬಾಸ್ ಸೀಸನ್​ 11 ಈಗಾಗಲೇ 50 ದಿನಗಳ ಆಟವನ್ನು ಪೂರ್ಣಗೊಳಿಸಿದೆ. ಏಳನೇ ವಾರ ಅನುಷಾ ಎಲಿಮಿನೇಟ್​ ಆಗಿದ್ದು, ಎಂಟನೇ ವಾರದ ಆಟ ಸಾಗಿದೆ. ಎಂಟನೇ ವಾರದ ಮುಂಜಾನೆ ಮನೆಗೆ ಇಬ್ಬರು ವೈಲ್ಡ್​ಕಾರ್ಡ್​​ ಸ್ಪರ್ಧಿಗಳು ಆಗಮಿಸಿ, ಆಟ ಶುರು ಹಚ್ಚಿಕೊಂಡಿದ್ದಾರೆ. ಮೊದಲ ದಿನದಿಂದಲೇ ಶೋಭಾ ಶೆಟ್ಟಿ ಮತ್ತು ರಜತ್​ ಕಿಶನ್​ ದನಿ ಏರಿಸಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಆರ್ಭಟ ಹೆಚ್ಚೇ ಇದೆ.

ಕಳೆದ ಸಂಚಿಕೆಯಲ್ಲಿ ಶೋಭಾ ಶೆಟ್ಟಿ ಮತ್ತು ರಜತ್ ಕಿಶನ್​​ ಪೈಕಿ ತಂಡದ ನಾಯಕರಾಗಲು ಯಾರು ಅರ್ಹರು ಮತ್ತು ಅನರ್ಹರೆಂದು ಆರಿಸಬೇಕಾಗಿ ಬಿಗ್​ ಬಾಸ್​​ ಸ್ಪರ್ಧಿಗಳಿಗೆ ಸೂಚಿಸಿದ್ದಾರೆ. ಶೋಭಾ ಶೆಟ್ಟಿ ಹೆಸರು ಸೂಚಿಸಿದ ಉಗ್ರಂ ಮಂಜು ತಮ್ಮ ಕಾರಣಗಳನ್ನು ಸಹ ಕೊಟ್ಟಿದ್ದಾರೆ. ಅವರ ಮಾತಿಗೆ ಅಸಮಧಾನಗೊಂಡ ಶೋಭಾ ಶೆಟ್ಟಿ ಇಡೀ ಮನೆಯೇ ಮೌನವಾಗುವಂತೆ ಆರ್ಭಟಿಸಿದ್ದರು. ಮಂಜು ವಿರುದ್ಧ ಮೊದಲು ಶೋಭಾ ಶೆಟ್ಟಿ ಆರ್ಭಟಿಸಿದ್ದರು. ಇದೀಗ ರಜತ್​ ಕಿಶನ್​ ಕೂಡಾ ಕಿಡಿಕಾರಿದ್ದಾರೆ. ಜಿದ್ದಿಗೆ ಬಿದ್ದಂತೆ ಮಾತಿಗೆ ಮಾತು ಬೆಳೆದಿದೆ.

''ಬಲಾಬಲದಲ್ಲಿ ಸಬಲರಾಗೋದು ಯಾರು?'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನೊಂದಿಗೆ ಬಿಗ್​ ಬಾಸ್​ ಪ್ರೋಮೋ ಅನಾವರಣಗೊಳಿಸಿದೆ. ಇಂದಿನ ಸಂಚಿಕೆಯಲ್ಲಿ ಉಗ್ರಂ ಮಂಜು ಮತ್ತು ರಜತ್​ ಕಿಶನ್​ ನಡುವೆ ದೊಡ್ಡ ಮಟ್ಟದ ವಾದ ವಿವಾದ ನಡೆಯಲಿದೆ ಎಂಬುದರ ಒಂದು ನೋಟವನ್ನು ಈ ಪ್ರೋಮೋ ಒದಗಿಸಿದೆ. ಇದಕ್ಕೂ ಮುನ್ನ ''ಆಕ್ರೋಶಕ್ಕೂ, ಆವೇಶಕ್ಕೂ ಸತ್ವಪರೀಕ್ಷೆ!''ಎಂಬ ಶೀರ್ಷಿಕೆಯಡಿ ಅನಾವರಣಗೊಂಡ ಪ್ರೋಮೋದಲ್ಲಿ ರಜತ್​ ಮತ್ತು ಗೋಲ್ಡ್​ ಸುರೇಶ್​ ನಡುವೆ ನಡೆದ ಗಲಾಟೆಯ ಒಂದು ನೋಟ ಒದಗಿಸಿದೆ. ನಿನ್ನೆಯ ಸಂಚಿಕೆಯಲ್ಲಿ ಶೋಭಾ ಶೆಟ್ಟಿ ಆರ್ಭಟಿಸಿದ್ದರೆ, ಇಂದು ರಜತ್ ಕಿಶನ್​​ ಸಖತ್ ಸದ್ದು ಮಾಡಿದ್ದಾರೆ.​​

ಇದನ್ನೂ ಓದಿ:'ಖುಷಿಯ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಿದೆ': ಸುಮಲತಾ ಅಂಬರೀಶ್​

ನಾನು, ತ್ರಿವಿಕ್ರಮ್​​ ಒಂದೇ ಟೀಮ್​​ ಅಲ್ಲಿ ಬಿದ್ವಿ ಅಂದ್ರೆ ಎದುರಾಳಿಗೆ ಸ್ವಲ್ಪ ಭಯ ಆಗುತ್ತೆ ಎಂದು ರಜತ್ ತಿಳಿಸಿದ್ದಾರೆ. ನೀವು ಒಂದ್​ ಟೀಮ್​ ಅಲ್ಲಿ ಇದ್ದರೆ ನಾವೆಲ್ಲಾ ವೀಕ್​ ಅಂತಾನಾ ಎಂದು ಮಂಜು ಕೆರಳಿದ್ದಾರೆ. ಅದಕ್ಕೆ ಸಿಟ್ಟಲ್ಲೇ ಪ್ರತಿಕ್ರಿಯಿಸಿದ ರಜತ್​, ಯಾವ್​ ನನ್ ಮಗ ಇಲ್ಲಾ ಅಂತಾನೆ, ಫಿಸಿಕಲ್​ ಟಾಸ್ಕ್​ಗೆ ನಾವ್​ ಸ್ಟ್ರಾಂಗೇ ಎಂದು ಉತ್ತರಿಸಿದ್ದಾರೆ. ಅದಕ್ಕೆ ನಾವು ವೀಕ್​ ಆ ಎಂದು ಮಂಜು ಪ್ರಶ್ನಿಸಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ಜೋರಾಗಿ ಮಾತನಾಡಬೇಡ, ನನ್​​ಗೂ ಬರುತ್ತೆ ಎಂದು ಮಂಜು ಅಸಮಧಾನಗೊಂಡಿದ್ದಾರೆ. ಹೀಗೆ ಇಬ್ಬರ ನಡುವೆ ಬಲಾಬಲ ವಿಷಯವಾಗಿ ವಾದ ವಿವಾದ ನಡೆದಿದೆ. ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ.

ಇದನ್ನೂ ಓದಿ:''ಬಳೆ ತೊಡ್ಕೋ'': ಬಿಗ್​ ಬಾಸ್​ನಲ್ಲಿ ಮತ್ತೆ ಬಳೆ ವಿಚಾರ; ಶೋ ಬಿಡುವೆನೆಂದ ಗೋಲ್ಡ್​ ಸುರೇಶ್​​

ABOUT THE AUTHOR

...view details