ಕರ್ನಾಟಕ

karnataka

ETV Bharat / entertainment

'ಪುಷ್ಪ 2' ಪ್ರಚಾರ: ಡಿ.8ರಂದು ಅಲ್ಲು ಅರ್ಜುನ್‌ ಬೆಂಗಳೂರಿಗೆ - PUSHPA 2 PROMOTION

ಕನ್ನಡ ನಟರಾದ ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಡಾಲಿ ಧನಂಜಯ್​​, ತಾರಕ್​ ಪೊನ್ನಪ್ಪ ಅಭಿನಯಿಸಿದ್ದರೂ 'ಪುಷ್ಪ 2' ಚಿತ್ರತಂಡ ಇನ್ನೂ ಏಕೆ ಬೆಂಗಳೂರಿಗೆ ಪ್ರಮೋಶನ್‌ಗೆ ಬಂದಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳದ್ದು.

Allu Arjun Rashmika Mandanna
ಅಲ್ಲು ಅರ್ಜುನ್ - ರಶ್ಮಿಕಾ ಮಂದಣ್ಣ (Photo: ETV Bharat)

By ETV Bharat Entertainment Team

Published : Dec 4, 2024, 3:54 PM IST

ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಕಿರಿಕ್​ ಪಾರ್ಟಿ ಸಿನಿಮಾ ಬೆಡಗಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯ 'ಪುಷ್ಪ-2' ರಿಲೀಸ್​ಗೆ ಕ್ಷಣಗಣನೆ ಆರಂಭವಾಗಿದೆ. ವರ್ಲ್ಡ್ ವೈಡ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವ 'ಪುಷ್ಪ 2' ಸಿನಿಮಾ ಪ್ರಚಾರಕ್ಕಾಗಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶದ ಪ್ರಮುಖ ನಗರಗಳಿಗೆ ಭೇಟಿ ಕೊಡುತ್ತಿದ್ದಾರೆ. ಆದ್ರೆ ಈ ತಂಡ ಕರುನಾಡಿಗಿನ್ನೂ ಎಂಟ್ರಿ ಕೊಟ್ಟಿಲ್ಲ.

ಕರ್ನಾಟಕದಲ್ಲಿ ನಡೆಯಬೇಕಿದ್ದ ಪ್ರೀ-ರಿಲೀಸ್ ಈವೆಂಟ್ ರದ್ದಾಗಿದೆ. ಏಕೆ ಹೀಗಾಯಿತು ಎಂಬ ಪ್ರಶ್ನೆ ಎದ್ದಿದೆ. ಕನ್ನಡ ಮಾತನಾಡಲು ಬರದ ಹಿನ್ನೆಲೆಯಲ್ಲಿ ಈವೆಂಟ್ ಕ್ಯಾನ್ಸಲ್ ಮಾಡಿರುವ ಸಾಧ್ಯತೆಗಳಿವೆ ಅಂತಿದ್ದಾರೆ ಗಾಂಧಿನಗರದ ಕೆಲವರು. ಆದ್ರೆ ಅದು ಸುಳ್ಳು.

ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ (Photo: ETV Bharat)

ಈಗಾಗಲೇ ಮುಂಬೈ, ಕೊಚ್ಚಿ, ಹೈದರಾಬಾದ್, ಪಾಟ್ನಾ, ಚೆನ್ನೈನಲ್ಲಿ ಪ್ರಮೋಶನಲ್​ ಈವೆಂಟ್​​​ಗಳು ನಡೆದಿವೆ. 15 ದಿನಗಳ ಹಿಂದೆ ಬೆಂಗಳೂರಲ್ಲಿ ಪುಷ್ಪ 2 ಚಿತ್ರದ ಈವೆಂಟ್​​ ನಡೆಸಲು ಎಲ್ಲಾ ಸಿದ್ಧತೆಗಳಾಗಿದ್ದವು. ಅದಕ್ಕಂತಾನೇ ಸ್ಪೆಷಲ್ ಅನೌನ್ಸ್​​ಮೆಂಟ್ ಟೀಸರ್ ಅನ್ನೂ ಪುಷ್ಪ 2 ತಂಡ ರೆಡಿ ಮಾಡಿತ್ತು. ಆದ್ರೆ ಕೊನೆ ಕ್ಷಣದಲ್ಲಿ ಬೆಂಗಳೂರಿಗೆ ಬಾರದಿರಲು ನಿರ್ಧಾರ ಮಾಡಿದ್ದಾರೆ.

ಕನ್ನಡದ ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಡಾಲಿ ಧನಂಜಯ್​​, ತಾರಕ್​ ಪೊನ್ನಪ್ಪ ಅಭಿನಯಿಸಿದ್ದರೂ ಕೂಡಾ ಕರ್ನಾಟಕದಲ್ಲಿ ಪ್ರಚಾರ ಮಾಡದಿರುವುದು ಬಹುತೇಕರ ಕೆಂಗಣ್ಣಿಗೆ ಗುರಿಯಾಗಿದೆ. ರಾಕಿಂಗ್​ ಸ್ಟಾರ್ ಯಶ್ ಸ್ಟೈಲ್, ಸ್ಪೀಚ್ ಅನ್ನು ಅಲ್ಲು ಅರ್ಜುನ್​​ ಕಾಪಿ ಮಾಡಿದಂತಿದೆ ಎಂಬ ಮಾತುಗಳು ಕೇಳಿಬಂದಿತ್ತು. ತಮಿಳುನಾಡಿನಲ್ಲಿ ನೆಲದ ಭಾಷೆ ತಮಿಳನ್ನೇ ಮಾತನಾಡುತ್ತೇನೆ ಎಂದಿದ್ದರು ಅಲ್ಲು ಅರ್ಜುನ್‌. ಇದೇ ಮಾತನ್ನು ಕೆಜಿಎಫ್ 1 ರಿಲೀಸ್ ವೇಳೆ ಯಶ್ ಕೂಡಾ ಆಡಿದ್ದರು. ಕಾಪಿ ಆರೋಪಗಳು ಬಂದ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್​ ಕರುನಾಡನ್ನು ಪ್ರವೇಶಿಸಲಿಲ್ಲವೇ ಎಂಬ ಪ್ರಶ್ನೆಗಳು ಕೂಡಾ ಎದ್ದಿತ್ತು.

ಅಲ್ಲು ಅರ್ಜುನ್ - ರಶ್ಮಿಕಾ ಮಂದಣ್ಣ (Photo: ETV Bharat)

ಕರ್ನಾಟಕದಲ್ಲಿ ತೆಲುಗು ಚಿತ್ರಪ್ರೇಮಿಗಳ ಸಂಖ್ಯೆ ದೊಡ್ಡ ಮಟ್ಟದಲ್ಲೇ ಇದೆ. ಹಲವು ಜಿಲ್ಲೆಗಳು ಆಂಧ್ರ, ತೆಲಂಗಾಣ ಗಡಿಗೆ ಹೊಂದಿಕೊಂಡಿವೆ. ಕನ್ನಡಿಗರೂ ಕೂಡ ತೆಲುಗು ಭಾಷೆಯಲ್ಲೇ ತೆಲುಗು ಚಿತ್ರ ವೀಕ್ಷಿಸುತ್ತಿದ್ದಾರೆ. ಕರ್ನಾಟಕ ಸಿನಿಪ್ರೇಮಿಗಳಿಂದ ಸಿಗುವ ಆದಾಯ ಕೂಡಾ ಉತ್ತಮವಾಗೇ ಇದೆ. ಇಷ್ಟಾದರೂ ಏಕೆ ಕರ್ನಾಟಕ್ಕೆ ಬರಲಿಲ್ಲ ಎಂಬ ಮಾತಿಗೆ ಪುಷ್ಪ 2 ಚಿತ್ರವನ್ನು ವಿತರಣೆ ಮಾಡುತ್ತಿರುವ ವಸೀಮ್ ಉತ್ತರ ಕೊಟ್ಟಿದ್ದಾರೆ.

"ಅಲ್ಲು ಅರ್ಜುನ್ ಅವರಿಗೆ ಕನ್ನಡ ಮಾತನಾಡಲು ಬರೋದಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪುಷ್ಪ 2 ಚಿತ್ರದ ಈವೆಂಟ್ ಕ್ಯಾನ್ಸಲ್ ಆಗಿದೆ ಅಂತಾ ಎಲ್ಲಾ ಕಡೆ ಸುದ್ದಿಯಾಗುತ್ತಿದೆ. ಆದ್ರೆ ಅದು ಸುಳ್ಳು. ಬೆಂಗಳೂರಿನಲ್ಲಿ ಹೆಚ್ಚಾದ ಮಳೆಯಿಂದ ಪುಷ್ಪ 2 ಚಿತ್ರದ ಈವೆಂಟ್ ಕ್ಯಾನ್ಸಲ್ ಆಗಿದೆ ಅಷ್ಟೇ. ಆದ್ರೆ ಕೆಲ ಮಾಧ್ಯಮಗಳಲ್ಲಿ ಅಲ್ಲು ಅರ್ಜುನ್ ಕನ್ನಡ ಮಾತನಾಡಬೇಕು ಎಂಬ ಕಾರಣಕ್ಕೆ ಬೆಂಗಳೂರಿಗೆ ಬರುತ್ತಿಲ್ಲ ಎಂದು ಹೇಳಿರುವುದು ಸುಳ್ಳು ಮಾಹಿತಿ. ಏಕೆಂದರೆ ಅಲ್ಲು ಅರ್ಜುನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಜೊತೆಗೆ, ಅಣ್ಣಾವ್ರ ಕುಟುಂಬಕ್ಕೆ ತುಂಬಾನೇ ಆತ್ಮೀಯರು. ಹೀಗಿರಬೇಕಾದ್ರೆ ಅವರು ಬೆಂಗಳೂರಿಗೆ ಬರೋದಿಕ್ಕೆ ಏಕೆ ಹೆದರಿಕೊಳ್ಳುತ್ತಾರೆ'' ಎಂದು ಅವರು ತಿಳಿಸಿದರು.

ಅಲ್ಲು ಅರ್ಜುನ್ - ರಶ್ಮಿಕಾ ಮಂದಣ್ಣ (Photo: ETV Bharat)

ಇದನ್ನೂ ಓದಿ:ಅಡ್ವಾನ್ಸ್​ ಬುಕಿಂಗ್​​​ನಲ್ಲೇ 100 ಕೋಟಿ ದಾಟಿದ 'ಪುಷ್ಪ 2': ಮೊದಲ ದಿನವೇ 275 ಕೋಟಿ ಗಳಿಸುವ ಸಾಧ್ಯತೆ

ಇನ್ನೂ, ಪುಷ್ಪ 2 ಸಿನಿಮಾದ ಟಿಕೆಟ್ ಬೆಲೆಯನ್ನು 2 ರಿಂದ 3 ಸಾವಿರ ರೂಪಾಯಿವರೆಗೂ ಜಾಸ್ತಿ ಮಾಡಲಾಗಿದೆ ಎಂಬ ಪ್ರಶ್ನೆಗೆ ವಿತರಕ ವಸೀಮ್ ಜಾಣ್ಮೆಯ ಉತ್ತರ ಕೊಟ್ರು. ''ಒಂದು ಸಿನಿಮಾದ ಟಿಕೆಟ್‌ಗೆ ಇಷ್ಟೇ ಬೆಲೆ ಅಂತಾ ಸರ್ಕಾರದದಿಂದ ಯಾವುದೇ ಕಾನೂನು ಮಾಡಿಲ್ಲ. ಈ ಟಿಕೆಟ್ ಬೆಲೆಯನ್ನು ಕಡಿಮೆ ಅಥವಾ ಜಾಸ್ತಿ ಮಾಡೋದು ನಿರ್ಮಾಪಕ. ಹಾಗೂ ಈ ಸಿನಿಮಾವನ್ನು ನಿರ್ಮಾಪಕನಿಂದ ಕೋಟಿ ಕೋಟಿ ಹಣ ಕೊಟ್ಟು ಖರೀದಿ ಮಾಡಿರುವ ವಿತರಕ ಮಾಡೋದು‌. ಎಲ್ಲರಿಗೂ ಗೊತ್ತಿರುವ ಹಾಗೇ ಸಿನಿಮಾ ಅನ್ನೋದು ಬ್ಯುಸಿನೆಸ್ ಅಷ್ಟೇ. ಟಿಕೆಟ್ ಬೆಲೆ ಜಾಸ್ತಿ ಆದ್ರೂ ಅದನ್ನು ನೋಡುವ ವರ್ಗ ಇದೆ. ಸಿಂಗಲ್ ಥಿಯೇಟರ್​ನಲ್ಲಿ ಪರಭಾಷೆಯ ಸಿನಿಮಾಗಳ‌ ಟಿಕೆಟ್ 200 ರೂಪಾಯಿ ಇರುತ್ತದೆ. ನಾವು ಒಂದು ದಿನದ ಮಟ್ಟಿಗೆ 300 ರೂಪಾಯಿ ಮಾಡಿರುತ್ತೇವೆ. ಇದು ವ್ಯಾಪರ'' ಅಂತಾರೆ ವಸೀಮ್​​.

ಇದನ್ನೂ ಓದಿ:'ಪುಷ್ಪ 3' ಕನ್ಫರ್ಮ್​​: ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ ಜೊತೆ ವಿಜಯ್​ ದೇವರಕೊಂಡ?

ಹಾಗೇ, ಅಲ್ಲು ಅರ್ಜುನ್ ಬೆಂಗಳೂರಿಗೆ ಬರುತ್ತಿಲ್ಲವೆಂದು ಕೆಲ‌ ಮಾಧ್ಯಮಗಳಲ್ಲಿ ಹೇಳಲಾಗುತ್ತಿದೆ. ಇದೇ ಭಾನುವಾರ ಅಂದ್ರೆ 8ರಂದು ಬೆಂಗಳೂರಿಗೆ ಅಲ್ಲು ಅರ್ಜುನ್ ಬರುತ್ತಿದ್ದಾರೆ ಅಂತಾ ವಿತರಕ ವಸೀಮ್ ಮಾಹಿತಿ ಕೊಟ್ಟರು.

ABOUT THE AUTHOR

...view details