ಕರ್ನಾಟಕ

karnataka

ETV Bharat / entertainment

ಅಣ್ಣು ಕಪೂರ್ ವ್ಯಂಗ್ಯಭರಿತ ಹೇಳಿಕೆಗೆ ಸಂಸದೆ ಕಂಗನಾ ರಣಾವತ್‌ ಕಿಡಿ - Kangana on Annu Kapoor

ಹಿರಿಯ ನಟ ಅಣ್ಣು ಕಪೂರ್ ಅವರ ವ್ಯಂಗ್ಯಭರಿತ ಹೇಳಿಕೆಗೆ ನಟಿ ಹಾಗೂ ಸಂಸದೆ ಕಂಗನಾ ರಣಾವತ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

'We Tend to Passionately Hate Powerful Woman': Kangana Ranaut on Annu Kapoor's Comment about Slap Row
ಅಣ್ಣು ಕಪೂರ್ ವ್ಯಂಗ್ಯಭರಿತ ಹೇಳಿಕೆಗೆ ಸಂಸದೆ ಕಂಗನಾ ರಣಾವತ್‌ ಕಿಡಿ (ANI/ETV Bharat)

By ETV Bharat Karnataka Team

Published : Jun 22, 2024, 12:56 PM IST

Updated : Jun 22, 2024, 1:50 PM IST

ಹೈದರಾಬಾದ್:ಪತ್ರಿಕಾಗೋಷ್ಠಿಯಲ್ಲಿ ತಮ್ಮ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿದ್ದ ಬಾಲಿವುಡ್​ನ ಹಿರಿಯ ನಟ ಅಣ್ಣು ಕಪೂರ್ ಹೇಳಿಕೆಗೆ ಬಿಟೌನ್​ ತಾರೆ ಮತ್ತು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

'ಹಮಾರೆ ಬಾರಾಹ್‌' ಚಿತ್ರದ ಪ್ರಚಾರದ ಅಂಗವಾಗಿ ಇತ್ತೀಚೆಗೆ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ಪ್ರಚಾರದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಣ್ಣು ಕಪೂರ್ ಅವರಿಗೆ ಪತ್ರಕರ್ತರು ಕಂಗನಾ ರಣಾವತ್‌ ಅವರಿಗೆ ಕಪಾಳಮೋಕ್ಷ ಮಾಡಿದ್ದ ಘಟನೆಯ ಕುರಿತು ಕೆಲವು ಪ್ರಶ್ನೆಗಳನ್ನು ಕೇಳತೋಡಗಿದರು. ಇದು ಅವರಿಗೆ ಸರಿ ಎನಿಸಲಿಲ್ಲವೋ ಏನೋ. ಪತ್ರಕರ್ತರ ಈ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದ ಅವರು, "ಈ ಕಂಗನಾ ಎಂದರೆ ಯಾರು? ನೀವೆಲ್ಲ ಕೇಳುತ್ತಿದ್ದೀರಿ ಎಂದರೆ ಅವರು ಬಹಳ ದೊಡ್ಡ ಹೀರೋಯಿನ್​ ಇರಬಹುದು. ಅವರು ಸುಂದರವಾಗಿದ್ದಾರಾ?" ಎಂದು ಹೇಳುವ ಮೂಲಕ ಕಂಗನಾ ರಣಾವತ್​ ಅವರನ್ನು ನಿಂದಿಸಿದ್ದರು.

ಅಣ್ಣು ಕಪೂರ್ ವ್ಯಂಗ್ಯಭರಿತ ಹೇಳಿಕೆಗೆ ಸಂಸದೆ ಕಂಗನಾ ರಣಾವತ್‌ ಕಿಡಿ (ANI/ETV Bharat)

ಕಂಗನಾ ಈಗ ಮಂಡಿಯಿಂದ ಹೊಸದಾಗಿ ಚುನಾಯಿತ ಸಂಸದರಾಗಿದ್ದಾರೆ ಎಂದು ವ್ಯಕ್ತಿಯೊಬ್ಬರು ಹೇಳುತ್ತಿದ್ದಂತೆ, "ಓಹೋ.. ಈಗ ಎಂಪಿ ಕೂಡ ಆಗಬಿಟ್ರಾ? ಹಾಗಾದರೆ ಈಗ ಅವರು ತುಂಬ ಶಕ್ತಿಶಾಲಿ ಮಹಿಳೆ ಆಗಿರಬೇಕು" ಎಂದು ವ್ಯಂಗ್ಯ ಕೂಡ ಮಾಡಿದ್ದರು. ಇದೀಗ ಅಣ್ಣು ಕಪೂರ್ ಮಾತಿಗೆ ನಟಿ ಕಂಗನಾ ಪ್ರತಿಕ್ರಿಯಿಸಿದ್ದಾರೆ.

ಶುಕ್ರವಾರ ರಾತ್ರಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್​ನಲ್ಲಿ ಅಣ್ಣು ತನ್ನ ಬಗ್ಗೆ ಮಾತನಾಡುವಾಗಿನ ಪತ್ರಿಕಾಗೋಷ್ಠಿಯ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. 'ನಾವು ಯಶಸ್ವಿ ಮಹಿಳೆಯನ್ನು ದ್ವೇಷಿಸುತ್ತೇವೆ, ಅವಳು ಸುಂದರವಾಗಿದ್ದರೆ ಅವಳನ್ನು ಹೆಚ್ಚು ದ್ವೇಷಿಸುತ್ತೇವೆ ಮತ್ತು ಶಕ್ತಿಶಾಲಿಯಾಗಿದ್ದರೆ ಅವಳನ್ನು ಇನ್ನೂ ಹೆಚ್ಚು ಉತ್ಸಾಹದಿಂದ ದ್ವೇಷಿಸುತ್ತೇವೆ ಎಂಬ ಅಣ್ಣು ಕಪೂರ್ ಜಿ ಅಂತವರ ಮನಸ್ಥಿಯನ್ನು ಒಪ್ಪುತ್ತೀರಾ? ಇದು ನಿಜವೇ?' ಎಂದು ಆ ಪೋಸ್ಟ್​ ಕೆಳಗೆ ಶಿರ್ಷಿಕೆ ಕೂಡ ಬರೆದಿದ್ದಾರೆ.

ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಕುಲ್ವಿಂದರ್ ಕೌರ್ ಎಂಬ ಮಹಿಳಾ ಕಾನ್ಸ್​​ಟೇಬಲ್​​, ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್‌ ಅವರಿಗೆ ಕಪಾಳಮೋಕ್ಷ ಮಾಡಿದ್ದರು. ರೈತ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪಂಜಾಬಿ ಮಹಿಳೆಯರ ಬಗ್ಗೆ ರಣಾವತ್ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಯಿಂದ ಪ್ರಚೋದನೆಗೊಂಡು ಈ ಕೃತ್ಯ ಎಸಗಿರುವುದಾಗಿ ಘಟನೆ ಬಳಿಕ ಮಹಿಳಾ ಕಾನ್ಸ್‌ಟೇಬಲ್ ಹೇಳಿಕೊಂಡಿದ್ದರು. ಈ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಕುಲ್ವಿಂದರ್ ಕೌರ್ ಅವರನ್ನು ಕೆಲಸದಿಂದ ವಜಾಗೊಳಿಸಬೇಕಾಯಿತು. ಸದ್ಯ ಕೌರ್ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಲಾಗಿದೆ.

ಇದನ್ನೂ ಓದಿ:ಪ್ರಭಾಸ್​ ಮುಖ್ಯಭೂಮಿಕೆಯ 'ಕಲ್ಕಿ 2898 ಎಡಿ' ಫೈನಲ್‌ ಟ್ರೇಲರ್​ಗೆ ಫ್ಯಾನ್ಸ್ ಫಿದಾ - Kalki 2898 AD new Trailer

Last Updated : Jun 22, 2024, 1:50 PM IST

ABOUT THE AUTHOR

...view details